ಮೈಸೂರು,ಜೂನ್,19,2025 (www.justkannada.in): ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ತಂದೆಯವರು ತಿಳಿಸುವ ತನಕ ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ಮೊದಲಿನಿಂದಲೂ ತಂದೆಯವರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಮುಡಾ ಹಗರಣ ,ವಾಲ್ಮೀಕಿಹಗರಣದಲ್ಲಿ ಸಿಲುಕಿಸುವ ಯತ್ನ ನಡೆಯಿತು. ನನ್ನನ್ನು ಕೂಡ ಹಲವು ಬಾರಿ ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಇಂತಹವುದಕ್ಕೆಲ್ಲಾ ಹೆದರಲ್ಲ. ಐದು ವರ್ಷ ತಂದೆಯವರೇ ಸಿಎಂ ಆಗಿರುತ್ತಾರೆ ಎಂದರು.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ತಂದೆಯವರು ಇರುವ ತನಕ ನಾನು ಯಾವುದೇ ಹುದ್ದೆ ಅಲಂಕರಿಸಲ್ಲ. ತಂದೆಯವರು ತಿಳಿಸುವ ತನಕ ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದರು.
ಎಂಎಲ್ ಸಿ ಯತೀಂದ್ರ ಯಾರು ಎಂದಿದ್ದ ಮಾಜಿ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಡಾ.ಯತೀಂದ್ರ ಸಿದ್ದರಾಮಯ್ಯ, ಪ್ರತಾಪ್ ಸಿಂಹ ಯಾರು? ಪ್ರತಾಪ್ ಸಿಂಹ ಯಾವ ಪಕ್ಷದಲ್ಲಿದ್ದಾರೆ? ಪ್ರತಾಪ್ ಸಿಂಹ ಯಾವ ಹುದ್ದೆಯಲ್ಲಿದ್ದಾರೆ? ಅವರಿಗೆ ನಾನು ಯಾರು ಅಂತ ಹೇಳಿ ಉತ್ತರ ಕೊಡಲಿ. ಯಾವ ಹುದ್ದೆಯಲ್ಲಿದ್ದಾರೆ ಅಂತ ನಾನು ಅವರಿಗೆ ರಿಪ್ಲೇ ಮಾಡಲಿ. ಅಂತಹವರಿಗೆಲ್ಲ ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು.
Key words: I am, not, aspiring, ministerial post, MLC, Yathindra Siddaramaiah
The post ತಂದೆಯವರು ತಿಳಿಸುವ ತನಕ ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ- MLC ಯತೀಂದ್ರ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.