26
August, 2026

A News 365Times Venture

26
Wednesday
August, 2026

A News 365Times Venture

ತಮ್ಮ ಕಾರ್ಖಾನೆ ಸಮೀಪವೇ ಉದ್ಯಮಿ ಆತ್ಮಹತ್ಯೆಗೆ ಶರಣು

Date:

ಮೈಸೂರು,ಜೂನ್,19,2025 (www.justkannada.in): ತಮ್ಮ ಕಾರ್ಖಾನೆ ಸಮೀಪವೇ ಉದ್ಯಮಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಅರ್ಜುನ್ (40) ಆತ್ಮಹತ್ಯೆಗೆ ಶರಣಾದ ಉದ್ಯಮಿ.  ಅನಾರೋಗ್ಯದಿಂದ ಬಳಲುತ್ತಿದ್ದ ಉದ್ಯಮಿ ಅರ್ಜುನ್ ತಮ್ಮ ಕಾರ್ಖಾನೆ ಸಮೀಪ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಅರ್ಜುನ್ ಅವರು ಮಹಾಜನ ಕಾಲೇಜು ಸಂಸ್ಥಾಪಕರಾದ ದಿ.ವಾಸುದೇವ ಮೂರ್ತಿ ಕುಟುಂಬದ ಕುಡಿ ಆಗಿದ್ದಾರೆ.

ಅರ್ಜುನ್ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಎಸ್.ಎಸ್.ಇಂಡಸ್ಟ್ರೀಸ್ ಎಂಬ ಕಾರ್ಖಾನೆ ನಡೆಸುತ್ತಿದ್ದರು. ಈ ಮಧ್ಯೆ ಹಲವಾರು ದಿನಗಳಿಂದ ಅರ್ಜುನ್ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಮಧ್ಯೆ  ಮನೆಯಿಂದ  ಬಂದಿದ್ದ ಅರ್ಜುನ್ ತಮ್ಮ ಎಸ್.ಎಸ್.ಇಂಡಸ್ಟ್ರೀಸ್ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂಜಾನೆ ಮನೆಯಲ್ಲಿ ಅರ್ಜುನ್ ಕಾಣಿಸದಿದ್ದಾಗ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸಿದ್ದು, ಈ ವೇಳೆ ಅರ್ಜುನ್ ಮನೆಯಿಂದ ಹೊರಗೆ ತೆರಳಿರುವುದು ಕಂಡುಬಂದಿದೆ.ಇದಾದ ಕೆಲಸಮಯದ ಬಳಿಕ ಅರ್ಜನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಕುರಿತು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.vtu

Key words: Mysore, Businessman, commits suicide

 

The post ತಮ್ಮ ಕಾರ್ಖಾನೆ ಸಮೀಪವೇ ಉದ್ಯಮಿ ಆತ್ಮಹತ್ಯೆಗೆ ಶರಣು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

1,252 ಕೋಟಿ ರೂ. ವೆಚ್ಚದಲ್ಲಿ 8,355 ಹೊಸ ಶಾಲಾ ಕೊಠಡಿಗಳ ನಿರ್ಮಾಣ: ಶಾಲೆಗಳ ಕಟ್ಟಡ ದುರಸ್ತಿಗೆ ಸೂಚನೆ-ಸಚಿವ ಮಧು ಬಂಗಾರಪ್ಪ

ಬೆಂಗಳೂರು, ಆಗಸ್ಟ್, 24,2026 (www.justkannada.in): ಕಳೆದ ಮೂರು ವರ್ಷಗಳಲ್ಲಿ 10,241 ಶಾಲೆಗಳನ್ನು...

ಮೃತ ಅಗ್ನಿವೀರ್ ನಂದನ್ ಕುಟುಂಬಕ್ಕೆ ಶಾಸಕ ಹರೀಶ್ ಗೌಡ  2 ಲಕ್ಷ ರೂ. ನೆರವು

ಮೈಸೂರು, ಆಗಸ್ಟ್,24, 2026 (www.justkannada.in):  ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ...

ಶೀಘ್ರವೇ ಉರ್ದುಸೇರಿದಂತೆ ಇತರ ವಿಷಯಗಳ ಶಿಕ್ಷಕರ ನೇಮಕ -ಸಚಿವ ಮಧು ಬಂಗಾರಪ್ಪ

ಬೆಂಗಳೂರು, ಆಗಸ್ಟ್,24,2026 (www.justkannada.in):  ಉರ್ದು ಭಾಷೆ ಸೇರಿದಂತೆ ಈಗ ನಡೆಯುತ್ತಿರುವ 15...

ಹನೂರು ಶೂಟೌಟ್ ಕೇಸ್: ಪ್ರಕರಣ ಸಿಐಡಿಗೆ ವರ್ಗಾವಣೆ

ಚಾಮರಾಜನಗರ,ಆಗಸ್ಟ್,25,2026 (www.justkannada.in):  ಚಾಮರಾಜನಗರ ಹನೂರಿನ ಶಾಡ್ಯ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದ ಅರಣ್ಯ...