30
May, 2026

A News 365Times Venture

30
Saturday
May, 2026

A News 365Times Venture

ತ್ರಿಭಾಷಾ ಸೂತ್ರ ತಂದಿದ್ದು ಮೋದಿಯಲ್ಲ, ನೆಹರು: ಅವರಿಗೂ ಬೆಲೆ ಇಲ್ವಾ? ‘ಕೈ’ಗೆ ಕುಟುಕಿದ ಆರ್. ಅಶೋಕ್

Date:

ಬೆಂಗಳೂರು,ಮಾರ್ಚ್,30,2026 (www.justkannada.in): ದೇಶದಲ್ಲಿ ತ್ರಿಭಾಷಾ ಸೂತ್ರ ಜಾರಿಗೆ ತಂದಿದ್ದು ಪ್ರಧಾನಿ ನರೇಂದ್ರ ಮೋದಿಯಲ್ಲ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಎಂದು ಕಾಂಗ್ರೆಸ್ ಗೆ ವಿಪಕ್ಷ ನಾಯಕ ಆರ್.ಅಶೋಕ್ ಕುಟುಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಇಂದಿರಾ ಗಾಂಧಿ ಕೂಡ ಹಿಂದಿ ಭಾಷೆ ಬಗ್ಗೆ ಹೆಚ್ಚು  ಆಸಕ್ತಿ ವಹಿಸಿದ್ದರು.  ಹಾಗಾದರೆ ನೆಹರು, ಇಂದಿರಾ ಗಾಂಧಿಗೆ ಬೆಲೆ ಇಲ್ವಾ? ಎಂದು ಪ್ರಶ್ನಿಸಿದರು.

ತಮಿಳುನಾಡು ಕೇರಳ ಮುಸ್ಲಿಮರು ಅಯಾ ರಾಜ್ಯ  ಭಾಷೆ ಮಾತನಾಡುತ್ತಾರೆ 2 ರಾಜ್ಯಗಳಲ್ಲಿ ತಮಿಳು ಮಲಯಾಳಂ ಕಡ್ಡಾಯವಾಗಿ ಮಾತನಾಡುತ್ತಾರೆ ಆದ್ರೆ ಕರ್ನಾಟಕದಲ್ಲಿ ಇನ್ನು ಯಾಕೆ ಮಾತನಾಡಲ್ಲ.  ಕನ್ನಡಿಗರು ಬೇರೆ ರಾಜ್ಯಕ್ಕೆ ಉದ್ಯೋಗಕ್ಕೆ ಹೋದರೆ ಯಾವ ಭಾಷೆ ಮಾತನಾಡಬೇಕು ಎಂದು ಕಿಡಿಕಾರಿದರು.

ಕಾಂಗ್ರೆಸ್ ನವರಿಗೆ ಈಗ ಮೋದಿ ಮೇಲೆ ಕೋಪವಿದೆ. ಮೋದಿಯೇ ತ್ರಿಭಾಷಾ ಸೂತ್ರ ತಂದರು ಎಂದು ಸಿದ್ದರಾಮಯ್ಯ ಬಿಲ್ಡಪ್ ಕೊಟ್ಟಿದ್ದಾರೆ.  ಸಿದ್ದರಾಮಯ್ಯ ಸರ್ಕಾರ ರಾಜ್ಯದ ಮಕ್ಕಳ ಭವಿಷ್ಯದ ಮೇಲೆ ಕಲ್ಲು  ಹಾಕುತ್ತಿದ್ದಾರೆ. ಕಾಂಗ್ರೆಸ್ ಎಸ್ ಎಸ್ ಎಲ್ ಸಿ ಪರೀಕ್ಷೆ ಸಮಯದಲ್ಲಿ ರಾಜಕಾರಣ  ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Key words:  three-language formula, Nehru, R. Ashok, Congress

The post ತ್ರಿಭಾಷಾ ಸೂತ್ರ ತಂದಿದ್ದು ಮೋದಿಯಲ್ಲ, ನೆಹರು: ಅವರಿಗೂ ಬೆಲೆ ಇಲ್ವಾ? ‘ಕೈ’ಗೆ ಕುಟುಕಿದ ಆರ್. ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೂ.3 ರಂದು ರಾಜ್ಯದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ

ಬೆಂಗಳೂರು,ಮೇ,30,2026 (www.justkannada.in):  ಜೂನ್ 3 ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ...

ರಾಜ್ಯದಲ್ಲಿ ಮುಂದಿನ 2 ವರ್ಷ ‘ಸೂಪರ್ ಭ್ರಷ್ಟ ಸರ್ಕಾರ’- ಛಲವಾದಿ ನಾರಾಯಣಸ್ವಾಮಿ

ಯಾದಗಿರಿ,ಮೇ,30,2026 (www.justkannada.in): ರಾಜ್ಯದಲ್ಲಿ ಮುಂದಿನ ಎರಡು ವರ್ಷಗಳ ಕಾಲ ಸೂಪರ್ ಭ್ರಷ್ಟ...

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ: ಹೈಕಮಾಂಡ್ ನಾಯಕರು, ಶಾಸಕರು ಆಗಮನ

ಬೆಂಗಳೂರು,ಮೇ,30,2026 (www.justkannada.in):  ರಾಜ್ಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ...

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆ ಶಿವಕುಮಾರ್ ಆಯ್ಕೆ

ಬೆಂಗಳೂರು,ಮೇ,30,2026 (www.justkannada.in): ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಇಂದು...