ಮೈಸೂರು,ಫೆಬ್ರವರಿ,12,2025 (www.justkannada.in): ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲು ತೂರಾಟ ಸಂಬಂಧ ಪೊಲೀಸರ ಮೇಲೆ ಹಲ್ಲೆ ಸಹಿಸಲ್ಲ. ಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇವೆ. ಯಾರೇ ತಪ್ಪು ಮಾಡಿದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ತ್ರಿವೇಣಿ ಸಂಗಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಪುಣ್ಯ ಸ್ನಾನ ಮಾಡಿದರು. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದು ಪ್ರಯಾಗ್ ರಾಜ್ ನಲ್ಲಿ ಮಾಡಿದ್ದಷ್ಟೇ ಸಂತಸವಾಗಿದೆ. ನಾನು ನಿನ್ನೆ ಪುಣ್ಯ ಸ್ನಾನ ಮಾಡಿದ್ದೇನೆ. ಸಿಎಂ ಕಾಲಿನ ನೋವು ಹಿನ್ನಲೆ ಬರಲಿಲ್ಲ. ನೀನು ಹೋಗು ಅಂದಿದ್ದರು. ಕಾವೇರಿ ನದಿ ಪವಿತ್ರವಾಗಿದೆ. ಸಂಗಮದ ನೀರು ಶುದ್ಧವಾಗಿದೆ. ಬಜೆಟ್ ನಲ್ಲಿ ತ್ರಿವೇಣಿ ಸಂಗಮ ಅಭಿವೃದ್ಧಿಗೆ ಹಣ ಇಡುತ್ತೇವೆ ಎಂದು ತಿಳಿಸಿದರು.
ಉದಯಗಿರಿ ಪೊಲೀಸ್ ಠಾಣೆಯ ಕಲ್ಲು ತೂರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಪೊಲೀಸರು ಸಮಯ ಪ್ರಜ್ಞೆ ಮೆರೆದಿದ್ದು, ಬೇಗನೆ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ನಾನು ಕೂಡ ವಿಡಿಯೋ ನೋಡಿದ್ದೇನೆ. ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಎಲ್ಲರೂ ಕೂಡ ಸಣ್ಣ ಹುಡುಗರು ಅಂತ ಹೇಳಿದ್ದಾರೆ. ಕಲ್ಲು ಎಸೆದಿರುವವರೆಲ್ಲರೂ ಮುಸ್ಲೀಂ 14, 15ನೇ ವಯಸ್ಸಿನವರು. ಮುಖಂಡರ ಮಾತನ್ನೂ ಅವರು ಕೇಳಿಲ್ಲ. ಹಿರಿಯರು ಮುಖಂಡರು ಸೇರಿ ಗಲಭೆ ಕಂಟ್ರೋಲ್ ಮಾಡಿದ್ದಾರೆ ಪೊಲೀಸರಿಗೆ ಪ್ರೊಟೆಕ್ಷನ್ ಇತ್ತು. ಆದರೆ ಅಲ್ಲಿನ ಜನರಿಗೆ ರಕ್ಷಣೆ ಇರಲಿಲ್ಲ. ಗಲಾಟೆ ಮಾಡಿದವರನ್ನ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಅರೆಸ್ಟ್ ಮಾಡುತ್ತಾರೆ ಎಂದರು.
ಉದಯಗಿರಿ ಪ್ರಕರಣದಲ್ಲಿ ಪೊಲೀಸರ ತಪ್ಪು ಎಂಬ ಸಚಿವ ರಾಜಣ್ಣ ಹೇಳಿಕೆ ವಿಚಾರ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದಾರೆ. ರಾಜಣ್ಣ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಅವರು ಸಚಿವರಿದ್ದಾರೆ. ಈ ಬಗ್ಗೆ ಸಿಎಂ ನೋಡಿಕೊಳ್ಳುತ್ತಾರೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಚಿವ ರಾಜಣ್ಣ ದೆಹಲಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ರಾಜಣ್ಣ ದೊಡ್ಡವರು ನಾನು ಅವರ ಬಗ್ಗೆ ಮಾತನಾಡಲ್ಲ. ನಾನು ಪಕ್ಷದ ಸಣ್ಣ ಕಾರ್ಯಕರ್ತ ಎಂದು ಪರೋಕ್ಷ ಟಾಂಗ್ ಕೊಟ್ಟರು.
Key words: Udayagiri, roit, Strict action, DCM, DK Shivakumar
The post ತ್ರಿವೇಣಿ ಸಂಗಮದಲ್ಲಿ ಡಿಸಿಎಂ ಡಿಕೆಶಿ ಪುಣ್ಯ ಸ್ನಾನ: ಉದಯಗಿರಿ ಗಲಭೆ ಕುರಿತು ಪ್ರತಿಕ್ರಿಯಿಸಿದ್ದು ಹೀಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.