ಮೈಸೂರು,ಜೂನ್,18,2025 (www.justkannada.in): ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ತಮಿಳು ನಟ ಕಮಲ್ ಹಾಸನ್ ನಟನೆಯ ಥಗ್ ಲೈಪ್ ಚಿತ್ರ ಬಹಿಷ್ಕರಿಸುವಂತೆ ಸ್ವಾಭಿಮಾನಿ ಕನ್ನಡಿಗರಿಗೆ ಸೈಕಲ್ ಸವಾರಿ ಮೂಲಕ ಮನವಿ ಮಾಡಿದರು.
ಅಗ್ರಹಾರ ವೃತ್ತದ ಪದ್ಮ ಚಿತ್ರ ಮಂದಿರ ಬಳಿ ಜಮಾಯಿಸಿದ ಪ್ರಜ್ಞಾವಂತ ನಾಗರೀಕರ ವೇದಿಕೆಯ ಪದಾಧಿಕಾರಿಗಳು ಕನ್ನಡದ ಚಿತ್ರಗಳಿಗೆ ಸೈಕಲ್ ಸವಾರಿ ಮೂಲಕ ಪ್ರಚಾರ ಮಾಡುತ್ತಿದ್ದ ಪಾರಂಪರಿಕ ಮಾದರಿಯಲ್ಲೆ ಕಮಲ್ ಹಾಸನ್ ಭಾವಚಿತ್ರಕ್ಕೆ ಮಸಿ ಬಳೆದು ಥಗ್ ಲೈಪ್ ಚಿತ್ರ ನೋಡದಂತೆ ಬಹಿಷ್ಕರಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಮಾಜಿ ನಗರ ಪಾಲಿಕ ಸದಸ್ಯ ಎಂ.ಡಿ ಪಾರ್ಥಸಾರಥಿ, ನಿರ್ದೇಶಕ ಹೆಚ್ ವಿ ಭಾಸ್ಕರ್, ಸಾಮಾಜಿಕ ಹೋರಾಟಗಾರ ವಿಕ್ರಮ್ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ಗೌರಿಶಂಕರ ನಗರದ ಶಿವು, ರಾಕೇಶ್, ಶಿವಲಿಂಗ ಸ್ವಾಮಿ, ಜತ್ತಿ ಪ್ರಸಾದ್, ಹಾಗೂ ಇನ್ನಿತರರು ಭಾಗವಹಿಸಿದ್ದರು.
Key words: Don’t, watch, movie, Thug Life, Mysore
The post ‘ಥಗ್ ಲೈಫ್’ ಚಿತ್ರ ವೀಕ್ಷಿಸಬೇಡಿ: ಸೈಕಲ್ ಸವಾರಿ ಮೂಲಕ ಮನವಿ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.