29
August, 2026

A News 365Times Venture

29
Saturday
August, 2026

A News 365Times Venture

ದಸರಾ ಆನೆಗಳ ವೀಕ್ಷಣೆಗೆ ಟಿಕೆಟ್ ಇಲ್ಲ: ಅರಣ್ಯ ಇಲಾಖೆ ಸ್ಪಷ್ಟನೆ

Date:

ಮೈಸೂರು,ಆಗಸ್ಟ್,29,2026 (www.justkannada.in):  2026ರ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ದಸರಾ ಗಜಪಡೆ ಆಗಸ್ಟ್ 28ರಿಂದ ಅರಮನೆ ಆವರಣದಲ್ಲಿರುವ ದಸರಾ ಆನೆಗಳ ಶಿಬಿರದಲ್ಲಿ ಬೀಡುಬಿಟ್ಟಿದೆ.

ಈ ನಡುವೆ, ಅರಮನೆ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ದಸರಾ ಆನೆಗಳನ್ನು ವೀಕ್ಷಿಸಲು ಅರಣ್ಯ ಇಲಾಖೆ ವತಿಯಿಂದ ಇ-ಟಿಕೆಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಆನೆಗಳ ವೀಕ್ಷಣೆಗೆ ಅರಣ್ಯ ಇಲಾಖೆಯಿಂದ ಯಾವುದೇ ಟಿಕೆಟ್ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಆನೆಗಳ ವೀಕ್ಷಣೆಗೆ ಇ-ಟಿಕೆಟಿಂಗ್ ವ್ಯವಸ್ಥೆ ಕಲ್ಪಿಸುವ ವಿಚಾರ ಕೇವಲ ಚಿಂತನಾ ಹಂತದಲ್ಲಿದ್ದ ವ್ಯವಸ್ಥೆಯಾಗಿತ್ತು. ಅದನ್ನು ಜಾರಿಗೊಳಿಸಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಹೀಗಾಗಿ, ದಸರಾ ಆನೆಗಳ ವೀಕ್ಷಣೆಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿಯನ್ನು ಸಾರ್ವಜನಿಕರು ನಂಬಬಾರದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ENGLISH SUMMARY

No Tickets for Viewing Dasara Elephants

Mysuru: The Forest Department has clarified that no tickets are being issued to view Dasara elephants at the palace elephant camp.

Reports about an e-ticketing facility circulating on social media are incorrect. The proposal was only under consideration and has not been implemented, the Mysuru Wildlife Division said.

Key words: No Tickets, Viewing, Mysore, Dasara Elephants

The post ದಸರಾ ಆನೆಗಳ ವೀಕ್ಷಣೆಗೆ ಟಿಕೆಟ್ ಇಲ್ಲ: ಅರಣ್ಯ ಇಲಾಖೆ ಸ್ಪಷ್ಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಿ.ನಾಗೇಂದ್ರ ರಾಜೀನಾಮೆ ವೇಳೆ ಸುರಿಸಿದ ಕಣ್ಣೀರು ಬಿಜೆಪಿಯನ್ನು ನಾಶ ಮಾಡಲಿದೆ-ಸಚಿವ ಮಧು ಬಂಗಾರಪ್ಪ

ಬೆಂಗಳೂರು, ಆಗಸ್ಟ್,29,2026 (www.justkannada.in): ಅನಗತ್ಯ ಆರೋಪದ ಕಾರಣದಿಂದ ಬಿ. ನಾಗೇಂದ್ರ ಅವರು...

“ಗೋದಿ ಮೀಡಿಯಾ “ ಟ್ಯಾಗ್‌ ಲೈನ್‌ ಕಳಚಲು ಸಾಮಾಜಿಕ ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿ: ಡಾ.ಯತೀಂದ್ರ.

  ಮೈಸೂರು, ಆ.29, 2026:  ದೇಶದಲ್ಲಿ ಮಾಧ್ಯಮದ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳು ಮೂಡುತ್ತಿದೆ....

ಕಾರವಾರ ಮೆಡಿಕಲ್ ಕಾಲೇಜು, ಶಿವರಾಮ ಕಾರಂತ ಬಡಾವಣೆ ಪ್ರಮುಖ ರಸ್ತೆಗೆ ಹೆಗಡೆ ಹೆಸರು: ಡಿ ಕೆ ಶಿವಕುಮಾರ್

  ಬೆಂಗಳೂರು, ಆ. 29 :  “ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ...

ಬಿಜೆಪಿ ಕಚೇರಿ ತನಿಖಾ ಸಂಸ್ಥೆಯಲ್ಲ: ನಾಗೇಂದ್ರ ಎಲ್ಲಾ ಹೋರಾಟಕ್ಕೂ ಸಿದ್ದ- ಬಿ.ಕೆ ಹರಿಪ್ರಸಾದ್

ಬೆಂಗಳೂರು,ಆಗಸ್ಟ್,29,2026 (www.justkannada.in):  ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿರುವ ವಿಚಾರ...