18
July, 2025

A News 365Times Venture

18
Friday
July, 2025

A News 365Times Venture

ದೂರದರ್ಶನ ಚಂದನ ವಾಹಿನಿಯಿಂದ ‘ಬದುಕ ಬಂಡಿ’,  ‘ಸ್ಮಾರ್ಟ್ ಸೊಸೆಯಂದಿರು’ ಶೀಘ್ರದಲ್ಲೇ ಪ್ರಸಾರ

Date:

ಬೆಂಗಳೂರು,  ಜೂನ್,3,2025 (www.justkannada.in):  ದೇಶದ ಅಧಿಕೃತ ವಾಹಿನಿ ದೂರದರ್ಶನ ಚಂದನ ವಾಹಿನಿಯಿಂದ ನಾಡು – ನುಡಿ – ಸಂಸ್ಕೃತಿ, ಬಾಂಧವ್ಯಗಳನ್ನು ಬೆಸೆಯುವ ವಿನೂತನ 4 ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಶೀಘ್ರದಲ್ಲಿ ಇವು ಕಿರುತೆರೆಯ ಮೇಲೆ ಮೂಡಿಬರಲಿವೆ ಎಂದು ದೂರದರ್ಶನ ದಕ್ಷಿಣ ವಲಯದ ಉಪ ಮಹಾನಿರ್ದೇಶಕ   ಭಾಗ್ಯವಾನ್ ತಿಳಿಸಿದ್ದಾರೆ.

ಚಂದನ ವಾಹಿನಿಯ ಸ್ಟುಡಿಯೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬದುಕ ಬಂಡಿ – ಬೀದಿ ಬದಿಯ ಕಥೆಗಳು “,” ಸ್ಮಾರ್ಟ್ ಸೊಸೆಯಂದಿರು “, ” ಭಾವ ನವನವೀನ” ಹಾಗೂ ” ಸ್ಟಾಂಡ್ ಅಪ್ ಕಾಮಿಡಿ – ರಿಯಾಲಿಟಿ ಶೋ ” ಕಾರ್ಯಕ್ರಮಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ. ಪ್ರತಿಯೊಂದು ಕಾರ್ಯಕ್ರಮವನ್ನು ವ್ಯಾಪಕ ಸಂಶೋಧನೆ, ಹಿನ್ನೆಲೆ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಪೂರಕವಾಗಿ ಸಿದ್ಧಪಡಿಸಲಾಗುತ್ತಿದೆ ಎಂದರು.

ರಸ್ತೆ ಬದಿಯ ಬದುಕಿನ ಕಥೆಗಳನ್ನು ಅನಾವರಣಗೊಳಿಸುವ ” ಬದುಕ ಬಂಡಿ “, ಮಾನವೀಯ ಸಂವೇದನೆಗಳನ್ನು ಆಧರಿಸಿರುತ್ತದೆ. ಆಯಾ ಪ್ರದೇಶದ ವೈವಿಧ್ಯತೆ, ಸಂಸ್ಕೃತಿ, ಇತಿಹಾಸ, ಜನಜೀವನವನ್ನು ಇದು ಬಿಂಬಿಸಲಿದೆ. ಈ ಕಾರ್ಯಕ್ರಮಕ್ಕೆ ಆಳವಾದ ಅಧ್ಯಯನದ ಮೂಲಕ ಸಾಮಾಜಿಕ ಇತಿಹಾಸಕಾರ ಧರ್ಮೇಂದ್ರ ಕುಮಾರ್ ನಿರೂಪಣೆ ಮಾಡಲಿದ್ದಾರೆ ಎಂದರು.   ಆಧುನಿಕ ಜೀವನದಲ್ಲಿ ಕಳೆದುಹೋಗುತ್ತಿರುವ ಬಾಂಧ್ಯವಗಳು ಹಾಗೂ ನಶಿಸುತ್ತಿರುವ  ಕೂಡು ಕುಟುಂಬಗಳ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು “ಸ್ಮಾರ್ಟ್ ಸೊಸೆಯಂದಿರು” ಕಾರ್ಯಕ್ರಮ ವಿನೂತನ ರೀತಿಯಲ್ಲಿ ರೂಪುಗೊಂಡಿದೆ. ಜೊತೆಗೆ, ಹಾಸ್ಯ, ವಿನೋದ ಆಟಗಳ ಜೊತೆಗೆ ಖ್ಯಾತ ಮನಶಾಸ್ತ್ರಜ್ಞ ಡಾ. ಸಿ. ಆರ್. ಚಂದ್ರಶೇಖರ್ ಅವರು ಪ್ರತಿಯೊಂದು ಕಾರ್ಯಕ್ರಮಕ್ಕೆ  ಕೌಟಿಂಬಿಕ ಸಂಬಂಧಗಳನ್ನು ಬಲಪಡಿಸುವ ಕುರಿತು ಕಿವಿಮಾತು ಹೇಳುವ ಚಿತ್ರಣವನ್ನು ಇದು ಒಳಗೊಂಡಿದೆ ಎಂದರು.

ಸಹಸ್ರಾರು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯದ ಒಳನೋಟ, ಅರ್ಥ ಮತ್ತು ಕಸುವನ್ನು ಒಳಗೊಂಡ ” ಭಾವ ನವ ನವೀನ ” ಕಾರ್ಯಕ್ರಮ ರೂಪಿಸಲಾಗಿದೆ. ಕನ್ನಡ ಸಾರಸ್ವತ ಲೋಕದ ವಿವಿಧ ಭಾವಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿಸಿ, ಪ್ರಸ್ತುತ ಪಡಿಸಲಾಗುವುದು. ಆರಂಭದಲ್ಲಿ, ಸತ್ಯೇಶ್ ಎನ್. ಬೆಳ್ಳೂರ್ ಅವರ ” ಒಂದು ಸಾಲಿನ ಕವಿತೆ”ಗಳಿಗೆ ಖ್ಯಾತ ಸಂಯೋಜಕ ಮ್ಯಾಂಡೊಲಿನ್ ಪ್ರಸಾದ್ ಸಂಗೀತ ನೀಡಿದ್ದು, ಗಾಯಕ – ಸಂಯೋಜಕದ್ವಯರಾದ ಪ್ರಾಣೇಶ್ ಬಿ. ವಿ. ಹಾಗೂ ಪ್ರದೀಪ್ ಬಿ. ವಿ. ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ.

“ಆರೋಗ್ಯಕರ ಹಾಸ್ಯ ವಲಯದಲ್ಲಿ, ಆರೋಗ್ಯಕರ ಸ್ಪರ್ಧೆ” ಪರಿಕಲ್ಪನೆಯಡಿ, ” ಸ್ಟಾಂಡ್ ಅಪ್ ಕಾಮಿಡಿ ” ಎಂಬ ನವೀನ ಕಾರ್ಯಕ್ರಮವನ್ನು ರಚಿಸಲಾಗಿದೆ. ಬೆಂಗಳೂರು ದೂರದರ್ಶನದಲ್ಲೇ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ 20 ಹಾಸ್ಯ ಪಟುಗಳನ್ನು ಹೆಕ್ಕಿ ತೆಗೆಯಲಾಗುವುದು. 32 ಸಂಚಿಕೆಗಳ ಈ ರಿಯಾಲಿಟಿ ಶೋಗೆ ಪ್ರಸಿದ್ಧ ಹಾಸ್ಯ ಕಲಾವಿದರಾದ ಸುಧಾ ಬರಗೂರು ಹಾಗೂ ಗಂಗಾವತಿ ಪ್ರಾಣೇಶ್ ತೀರ್ಪುಗಾರರಾಗಿರಲಿದ್ದಾರೆ. ದೂರದರ್ಶನದಲ್ಲೇ ಮೊದಲ ಬಾರಿಗೆ ಹಾಸ್ಯ ರಿಯಾಲಿಟಿ ಶೋ ಪ್ರಸಾರಗೊಳಲಿದ್ದು, ವಿಜೇತರಿಗೆ ಉತ್ತಮ ಮೊತ್ತದ ನಗದು ಬಹುಮಾನವನ್ನು ನೀಡಲಾಗುವುದು ಎಂದು ಭಾಗ್ಯವಾನ್ ತಿಳಿಸಿದರು.

ದೂರದರ್ಶನ ಕೇಂದ್ರದ ಅಭಿಯಂತರ ಮಹಾನಿರ್ದೇಶಕರಾದ ಎ. ಹನುಮಂತ್ ಮಾತನಾಡಿ, ಈ ಎಲ್ಲಾ ಕಾರ್ಯಕ್ರಮಗಳಿಗೆ ಅಗತ್ಯವಿರುವ ತಾಂತ್ರಿಕ ಸಹಕಾರ, ನೆರವು ಹಾಗೂ ಬೆಂಬಲ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದೂರದರ್ಶನ ಚಂದನ ವಾಹಿನಿಯ ಸುದ್ದಿ ವಿಭಾಗದ ನಿರ್ದೇಶಕ ಕೇಶವ ಮೂರ್ತಿ ಬಿ. ಎ.,  ಹಿರಿಯ ಕಾರ್ಯಕ್ರಮ ನಿರ್ವಾಹಕಿ ಎಚ್. ಎನ್. ಆರತಿ, ಕಾರ್ಯಕ್ರಮ ನಿರ್ಮಾಪಕರುಗಳಾದ ಚಂದ್ರ ಭೌಮಿಕ್, ಸುಧಾಕರನ್ ಪ್ರಿಯ, ಎಂ. ಗೋವಿಂದರಾಜು ಹಾಗೂ ಲಕ್ಷ್ಮಿ ಕಾರಂತ್ ಎಂ. ಎಸ್. ಉಪಸ್ಥಿತರಿದ್ದರು.vtu

Key words: television, Chandana, channel,

The post ದೂರದರ್ಶನ ಚಂದನ ವಾಹಿನಿಯಿಂದ ‘ಬದುಕ ಬಂಡಿ’,  ‘ಸ್ಮಾರ್ಟ್ ಸೊಸೆಯಂದಿರು’ ಶೀಘ್ರದಲ್ಲೇ ಪ್ರಸಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತವರು ಕ್ಷೇತ್ರಕ್ಕೆ ಬಂಪರ್ ಯೋಜನೆ ; ಸಿದ್ದರಾಮಯ್ಯ ರಿಂದ ಚಾಲನೆ.

ಮೈಸೂರು,ಜುಲೈ,18,2025 (www.justkannada.in): ಮೈಸೂರು ನಗರ ಜನತೆಯ ಹಲವಾರು ದಿನಗಳ ಬೇಡಿಕೆ ಕಡೆಗೂ...

ಸಿಎಂ ಸಿದ್ದರಾಮಯ್ಯ ಅವರ ಕ್ಷಮೆಯಾಚಿಸಿದ “ಮೆಟಾ”..!

ಬೆಂಗಳೂರು,ಜುಲೈ,18,2025 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ...

ಸತತ 8ನೇ ಬಾರಿಗೆ ದೇಶದ ‘ಸ್ವಚ್ಛ ನಗರಿ ಪಟ್ಟ ಅಲಂಕರಿಸಿದ ಇಂದೋರ್ : ಮೈಸೂರಿಗೆ ಎಷ್ಟನೇ ಸ್ಥಾನ?

ನವದೆಹಲಿ,ಜುಲೈ,17,2025 (www.justkannada.in): ಮಧ್ಯಪ್ರದೇಶದ ಇಂದೋರ್ ನಗರವು ಸತತ ಎಂಟನೇ ಬಾರಿಗೆ  ದೇಶದ...

ರಾಹುಲ್ ಗಾಂಧಿ ಯಾವ ನ್ಯಾಯ ಯೋಧ? ಸಿದ್ದು ಚಮಚಗಿರಿ ಮಾಡ್ತಿದ್ದಾರೆ- ಹೆಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು,ಜುಲೈ,17,2025 (www.justkannada.in): ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಅವರನ್ನ ನ್ಯಾಯಯೋಧ ಎಂದು...