5
March, 2026

A News 365Times Venture

5
Thursday
March, 2026

A News 365Times Venture

ನಟ ದರ್ಶನ್ ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

Date:

ನವದೆಹಲಿ,ಜುಲೈ,17,2025 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗೆ ಜಾಮೀನು ರದ್ದುಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್  ಜುಲೈ 22 ಕ್ಕೆ ಮುಂದೂಡಿದೆ.

ನಟ ದರ್ಶನ್ ಸೇರಿ 6 ಆರೋಪಿಗಳ ಜಾಮೀನು ರದ್ದುಕೋರಿ ರಾಜ್ಯ ಸರ್ಕಾರ ಸಲ್ಲಿರುವ ಅರ್ಜಿಯನ್ನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್,  ಏಕೆ ದರ್ಶನ್ ಜಾಮೀನು ರದ್ದು ಮಾಡಬಾರದು..? ಹೇಳಿ ಎಂದು ದರ್ಶನ್ ಪರ ವಕೀಲ ಕಪಿಲ್ ಸಿಬಲ್ ಗೆ ಪ್ರಶ್ನೆ ಮಾಡಿತು.  ಪ್ರಕರಣದಲ್ಲಿ ನಟ ದರ್ಶನ್ ಕೈವಾಡ ಇದೆ ಎನ್ನುವುದಕ್ಕೆ ಸಾಕ್ಷ್ಯ ಇಲ್ಲ ಎಂದು ದರ್ಶನ್ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.  ಕಪಿಲ್ ಸಿಬಲ್ ವಾದವನ್ನು ಒಪ್ಪದ ಸುಪ್ರೀಂಕೋರ್ಟ್ ವಿಚಾರಣೆಯನ್ನ ಜುಲೈ 22ಕ್ಕೆ ಮುಂದೂಡಿಕೆ ಮಾಡಿತು.

 ನಟ ದರ್ಶನ್ ಪರ ವಕೀಲರ ಬದಲಾವಣೆ

ನಟ ದರ್ಶನ್ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸುತ್ತಿದ್ದರು. ಆದರೆ ಇದೀಗ ಇವರು ಪ್ರಕರಣದಿಂದ ಹಿಂದೆ ಸರಿದಿದ್ದು ಕಪಿಲ್ ಸಿಬಲ್ ಅವರು ನಟ ದರ್ಶನ್ ಪರ ವಾದಮಂಡಿಸುತ್ತಿದ್ದಾರೆ.

ರೇಣುಕಾಸ್ವಾಮಿ ಬರ್ಬರ ಹತ್ಯೆ ಕೇಸ್​ನಲ್ಲಿ ದರ್ಶನ್ ಮತ್ತು ಗ್ಯಾಂಗ್ ಬಂಧನಕ್ಕೆ ಒಳಗಾಗಿ ಆರು ತಿಂಗಳ ಕಾಲ 17 ಆರೋಪಿಗಳು ಜೈಲಿನಲ್ಲಿದ್ದರು. ಆ ನಂತರ ಪ್ರಕರಣದ  ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಈ ಪೈಕಿ ಪ್ರಕರಣದ ಪ್ರಮುಖ ಏಳು ಆರೋಪಿಗಳಿಗೆ ಜಾಮೀನು ನೀಡಿದ್ದನ್ನು   ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.vtu

Key words: Renukaswamy, Murder case, actor, Darshan,  bail, cancellation, Supreme court

 

The post ನಟ ದರ್ಶನ್ ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಫೋನ್ ಕದ್ದಾಲಿಕೆ ಅವಶ್ಯಕತೆ ಏನಿದೆ? ಸಚಿವ ರಾಮಲಿಂಗರೆಡ್ಡಿ

ರಾಮನಗರ,ಮಾರ್ಚ್,4,2026 (www.justkannada.in): ಕಾಂಗ್ರೆಸ್ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ಇದೆ ಎಂದು ಕೇಂದ್ರ...

ಕೆಪಿಸಿಸಿಗೆ ಹೊಸ ನಾಯಕತ್ವ: ಡಿಕೆಶಿ ಹೇಳಿರೋದು ಸರಿಯಾಗಿದೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು, ಮಾರ್ಚ್,4,2026 (www.justkannada.in): ಕೆಪಿಸಿಸಿಗೆ ಹೊಸ ನಾಯಕತ್ವ ಬೇಕು ಎಂಬ ಡಿಸಿಎಂ...

ಒಳಮೀಸಲಾತಿ: ಎಲ್ಲರೂ ಒಟ್ಟಿಗೆ ಸೇರಿ ಬಗೆಹರಿಸಿಕೊಳ್ಳಿ ಎಂದು ಖರ್ಗೆ ಹೇಳಿದ್ದಾರೆ- ಸಚಿವ ಮುನಿಯಪ್ಪ

ಬೆಂಗಳೂರು,ಮಾರ್ಚ್,4,2026 (www.justkannada.in): ಒಳಮೀಸಲಾತಿ ವಿಚಾರವನ್ನು ಎಲ್ಲರೂ ಒಟ್ಟಿಗೆ ಸೇರಿ ಬಗೆಹರಿಸಿಕೊಳ್ಳಿ ಎಂದು...

ಕೆಪಿಎಸ್ ಸಿ ಅಕ್ರಮ ಆರೋಪ: ವರದಿ ಕೇಳಿದ ಸಿಎಸ್ ಶಾಲಿನಿ ರಜನೀಶ್

ಬೆಂಗಳೂರು,ಮಾರ್ಚ್,4,2026 (www.justkannada.in):  ಕೆಎಎಸ್ ಮುಖ್ಯ ಪರೀಕ್ಷೆ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು...