ಬೆಂಗಳೂರು,ಜೂನ್,24,2025 (www.justkannada.in) ಬಾಗಲಕೋಟೆ ಜಿಲ್ಲೆ ಬದಾಮಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ. ನಮ್ಮ ಬಳಿ ದುಡ್ಡಿಲ್ಲ ಸಿದ್ದರಾಮಯ್ಯ ಬಳಿ ದುಡ್ಡಿಲ್ಲ ಎಂದು ಹೇಳಿಕೆ ನೀಡಿದ್ದ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಮ್ಮ ಸರ್ಕಾರದಲ್ಲಿ ಹಣಕಾಸಿನ ತೊಂದರೆ ಇಲ್ಲ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಹಣ ಕೊಟ್ಟಿದ್ದಾರೆ. ಅವರು ಯಾರೋ ತಮಾಷೆಗೆ ಕೇಳಿದ್ರು ಅಂತಾ ನಾನು ಪ್ರತಿಕ್ರಿಯಿಸಿದೆ. ತಮಾಷೆಗೆ ಕೇಳಿದ್ದಕ್ಕೆ ಆ ರೀತಿ ರಿಯಾಕ್ಟ್ ಮಾಡಿರಬಹುದು ಅಷ್ಟೆ. ನಮ್ಮ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಆದರೆ ಬಿಡುಗಡೆ ಆಗುವಾಗ ಸ್ವಲ್ಪ ವಿಳಂಬ ಆಗಬಹುದೇನೋ ನನ್ನ ಹೇಳಿಕೆ ಬಗ್ಗೆ ತಪ್ಪು ಕಲ್ಪನೆ ಬೇಡ. ನಾನು ಸರ್ಕಾರದ ಬಳಿ ದುಡ್ಡಿಲ್ಲ ಅಂತಾ ಹೇಳಿಲ್ಲ. ಸುಮ್ಮನೆ ಕೆಲವರು ಎಣ್ಣೆ ಎಣ್ಣೆ ಎಂದಿದ್ದಕ್ಕೆ ತಮಾಷೆಯಾಗಿ ಹೇಳಿದ್ದೇನೆ ಅಷ್ಟೆ ಎಂದರು.
ನಮ್ಮ ಬಳಿ ಹಣದ ಕೊರತೆ ಇಲ್ಲ ಎಂದು ಭಾಷಣದಲ್ಲೂ ಹೇಳಿದ್ದೇನೆ ಹಣ ಬಿಡುಗಡೆ ವೇಳೇ ಕೆಲ ಸಂದರ್ಭದಲ್ಲಿ ವಿಳಂಬ ಆಗಿರಬಹುದು. ಶಾಸಕರು ಅನುದಾನ ವಿಳಂಬಕ್ಕೆ ಬೇಸರ ವ್ಯಕ್ತಪಡಿಸಿರಬಹುದು. ಮನಸ್ಸಿಗೆ ಬೇಸರವಾದಾಗ ಅಂತಹ ಮಾತುಗಳು ಒಮ್ಮೆ ಒಮ್ಮೆ ಬರುತ್ತವೆ ಅಷ್ಟೆ ಎಂದು ಪರಮೇಶ್ವರ್ ಸ್ಪಷ್ಟನೆ ಕೊಟ್ಟರು.
ಬಾಗಲಕೋಟೆಯಲ್ಲಿ ಸೋಮವಾರ ಮಾತನಾಡಿದ್ದ ಸಚಿವ ಪರಮೇಶ್ವರ್, ಬಾದಾಮಿ ಅಭಿವೃದ್ಧಿಗೆ ಒಂದು ಯೋಜನೆ ಸಿದ್ದ ಮಾಡಿ. ಅದು ಎಷ್ಟು ಮೊತ್ತದ್ದಾದರೂ ಪರವಾಗಿಲ್ಲ. ಅದು ಸಾವಿರ ಕೋಟಿ ಪ್ರಾಜೆಕ್ಟ್ ಆಗಿರಲಿ. ಪ್ರಸ್ತಾವನೆ ಸಿದ್ಧ ಮಾಡಿ ಕೇಂದ್ರಕ್ಕೆ ಕಳುಹಿಸಿಕೊಡಿ. ಯಾಕೆಂದರೆ, ನಮ್ಮ ಬಳಿ ದುಡ್ಡಿಲ್ಲ. ಸಿದ್ದರಾಮಣ್ಣನ ಬಳಿ ದುಡ್ಡಿಲ್ಲ ಎಂದು ಹೇಳಿದ್ದರು. ನಮ್ಮ ಬಳಿ ಇರುವ ದುಡ್ಡಿನಲ್ಲಿ ನಿಮಗೆ ಈಗಾಗಲೇ ಅಕ್ಕಿ, ಬೇಳೆ, ಎಣ್ಣೆ ಕೊಟ್ಟಿದ್ದೇವೆ ಎಂದಿದ್ದರು.
Key words: no, financial trouble, government, Home Minister, Parameshwar
The post ನನ್ನ ಹೇಳಿಕೆ ಬಗ್ಗೆ ತಪ್ಪು ಕಲ್ಪನೆ ಬೇಡ: ಸರ್ಕಾರದಲ್ಲಿ ಹಣಕಾಸಿನ ತೊಂದರೆ ಇಲ್ಲ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.