ಹುಬ್ಬಳ್ಳಿ,ಫೆಬ್ರವರಿ,22,2025 (www.justkannada.in): ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಆಕಾಂಕ್ಷಿ ಅಲ್ಲ, ಆದರೆ ಸಮಯ ಬಂದಾಗ ನೋಡೋಣ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಮಯ ಬಂದಾಗ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಖರ್ಗೆ ಅವರು ಹೇಳಿದ ಮೇಲೆ ಸಮಯ ತೆಗೆದುಕೊಳ್ಳಬಹುದು. ತಕ್ಷಣ ಬದಲಾವಣೆ ಆಗುವುದಿಲ್ಲ ಸಮಯ ತೆಗೆದುಕೊಳ್ಳಬಹುದು ಎಂದರು.
ನಾನು ಆಕಾಂಕ್ಷಿ ಅಲ್ಲ ಸಮಯ ಬಂದಾಗ ನೋಡೋಣ. ಸ್ವಾಭಾವಿಕವಾಗಿ ಅಭಿಮಾನಿಗಳು ಆಸೆ ಪಡ್ತಾರೆ ಸಿಎಂ ಅಧ್ಯಕ್ಷರ ಬದಲಾವಣೆ ವಿಚಾರ ನಮ್ಮ ವ್ಯಾಪ್ತಿಗೆ ಬರಲ್ಲ ನಾವು ಕೇವಲ ಮಂತ್ರಿ ಅಷ್ಟೆ ಏನಿದ್ರೂ ಹೈಕಮಾಂಡ್ ನಿರ್ಧಾರ ಎಂದರು.
ಡಿಕೆ ಶಿವಕುಮಾರ್ ಈಗಲ್ಲ ಮೊದಲನಿಂದಲೂ ರೇಸ್ ನಲ್ಲಿದ್ದಾರೆ. ಸಮಯಕ್ಕಾಗಿ ಕಾಯಬೇಕು ಕಾದು ನೋಡೋಣ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
Key words: KPCC, President, change, Minister, Satish Jarkiholi
The post ನಾನು ಆಕಾಂಕ್ಷಿ ಅಲ್ಲ, ಸಮಯ ಬಂದಾಗ ನೋಡೋಣ- ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.