24
June, 2026

A News 365Times Venture

24
Wednesday
June, 2026

A News 365Times Venture

ನಾನು ಟೀಕೆಗಳನ್ನ ಸ್ವಾಗತಿಸುವವನು: ಯಾರ ಮೇಲೂ ಸಿಟ್ಟು ಮಾಡಿಕೊಂಡಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

Date:

ಬೆಂಗಳೂರು,ಮಾರ್ಚ್,26,2026 (www.justkannada.in): ನಾನು ಯಾವತ್ತಿಗೂ  ಟೀಕೆಗಳನ್ನು ಸ್ವಾಗತ ಮಾಡುವವನು.  ಟಿಖೆ ಮಾಡಿದರು ಅಂತಾ ಯಾರ ಮೇಲೂ ಸಿಟ್ಟು ಮಾಡಿಕೊಂಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ವಿಧಾನಸಭೆಯಲ್ಲಿ ಬೆಂಗಳೂರು ನಗರ ಅಭಿವೃದ್ದಿ ಕುರಿತು ಉತ್ತರ ನೀಡುವ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಚಿನ್ನವನ್ನ ಪರೀಕ್ಷೆ ಮಾಡಬೇಕಾದರೆ ಬೆಂಕಿಗೆ ಹಾಕುತ್ತಾರೆ. ಮನುಷ್ಯರನ್ನ ಪರೀಕ್ಷೆ ಮಾಡಬೇಕಾದರೆ ಟೀಕೆಗಳು ಬರುತ್ತವೆ. ಟೀಕೆ ಮಾಡಿದರು ಅಂತಾ ಯಾರ ಮೇಲೂ ಸಿಟ್ಟು ಮಾಡಿಕೊಳ್ಳಲ್ಲ ಮಾಧ್ಯಮಗಳ ಮೇಲೂ ಸಿಟ್ಟು ಮಾಡಿಕೊಂಡಿಲ್ಲ. ನನ್ನ ಮನೆ ಮೇಲೆ ರೇಡ್ ಆದಾಗ ಬೇಕಾದಷ್ಟು ನೋಡಿದ್ದೇನೆ.  ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂದರು.

ಪಾಸಿಟಿವ್ ಆಲೋಚನೆ ಸಮಸ್ಯೆಗೆ ಪರಿಹಾರ ಕಲ್ಪಿಸುಬಹುದು ಇಂಧನ ಇಲಾಖೆಯನ್ನೇ ಉತ್ತಮವಾಗಿ ನಿರ್ವಹಣೆ ಮಾಡಿದ್ದೇನೆ ತಪ್ಪು ಕಂಡು ಹಿಡಿಯಲು ನನ್ನ ಸ್ನೇಹಿತರು ಪ್ರಯತ್ನ ಮಾಡಿದ್ದಾರೆ. ಬೆಂಗಳೂರು 14 ಕೋಟಿ ಜನಸಂಖ್ಯೆ ಇದೆ.  13 ಕೋಟಿ ವಾಹನಗಳಿವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಒಪ್ಪಿಕೊಳ್ಳೋಣ. ಬೆಂಗಳೂರು ನಗರದ ರಸ್ತೆ ವಿಸ್ತೀರ್ಣ ಶೇ. 8 ರಷ್ಟು ಇದೆ.  ಬೇರೆ ನಗರಗಳಲ್ಲಿ ರಸ್ತೆ ವಿಸ್ತೀರ್ಣ ಶೇ 16 ರಷ್ಟು ಇದೆ  ಎಂದರು.

Key words: welcome, criticism, DCM, DK Shivakumar

The post ನಾನು ಟೀಕೆಗಳನ್ನ ಸ್ವಾಗತಿಸುವವನು: ಯಾರ ಮೇಲೂ ಸಿಟ್ಟು ಮಾಡಿಕೊಂಡಿಲ್ಲ- ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ಡ್ರಗ್ಸ್ ಕ್ಯಾಪಿಟಲ್ ಆಗುತ್ತಿದೆ, ಆ ಕಡೆ ಗಮನ ಹರಿಸಿ- MLC  ಸಿ.ಟಿ ರವಿ ತಿರುಗೇಟು

ಬೆಂಗಳೂರು,ಜೂನ್,23,2026 (www.justkannada.in): ಆರ್ ಎಸ್ ಎಸ್ ನೋಂದಣಿ ವಿಚಾರದಲ್ಲಿ ದಾಖಲೆ ಕೊಡದೆ...

ಸಿಎಂ ಡಿಕೆಶಿ ಒಕ್ಕಲಿಗರ ಲೀಡರ್ ಆಗಬಾರದೆಂದು ಟೌನ್ ಶಿಪ್ ಗೆ  HDK ವಿರೋಧ- ಸಚಿವ ಎಂ.ಬಿ ಪಾಟೀಲ್

ವಿಜಯಪುರ,ಜೂನ್,23,2026 (www.justkannada.in):  ಬಿಡದಿ ಟೌನ್ ಶಿಪ್ ಗೆ ಕೇಂದ್ರ ಸಚಿವ ಹೆಚ್...

ಬಿಡದಿ ಟೌನ್ ಶಿಪ್ ಜಟಾಪಟಿ: ಹೆಚ್ ಡಿಕೆಗೆ ಟಾಂಗ್ ಕೊಟ್ಟ ಸಚಿವ ಯುಟಿ ಖಾದರ್

ಮಂಗಳೂರು,ಜೂನ್,23,2026 (www.justkannada.in): ಬಿಡದಿ ಟೌನ್ ಶಿಪ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್...

ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಆವರಿಗೆ ಸಿಎಂ ಡಿ.ಕೆ ಶಿವಕುಮಾರ್ ಅಂತಿಮ ನಮನ

ರಾಮನಗರ, ಜೂನ್ 23,2026 (www.justkannada.in): ಸೋಮವಾರ ಲಿಂಗೈಕ್ಯರಾದ ಕನಕಪುರ ದೇಗುಲ ಮಠದ...