ನವದೆಹಲಿ,ಜೂನ್,27,2025 (www.justkannada.in): ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ಇಲ್ಲ. ಅಧ್ಯಕ್ಷರ ಆಯ್ಕೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ವರದಿ ಕೊಡಲು ಬಂದಿದ್ದೇನೆ. ಮೂರು ತಿಂಗಳಿಗೊಮ್ಮೆ ವರಿಷ್ಠರ ಭೇಟಿಗೆ ಬರುತ್ತೇನೆ. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರದಾನ್, ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖರ ಭೇಟಿ ಮಾಡಿದ್ದೇನೆ. ಬೆಂಗಳೂರಿನಲ್ಲೇ ಅಮಿತ್ ಶಾ ಭೇಟಿ ಮಾಡಿದ್ದೆ. ಅಧ್ಯಕ್ಷರ ಆಯ್ಕೆ ವಿಚಾರವಾಗಿ ನಾನು ಯಾವುದೇ ಚರ್ಚೆ ಮಾಡಿಲ್ಲ. ಕೇಂದ್ರದಲ್ಲಿ ಕರ್ನಾರ್ಟಕದ ವಿಚಾರವೇ ಬಂದಿಲ್ಲ. ನನ್ನ ಜೊತೆಯಂತೂ ಯಾರೂ ಚರ್ಚಿಸಿಲ್ಲ. ನಾನ್ ಬರೋದೆ ಮೂರು ತಿಂಗಳಿಗೊಮ್ಮೆ. ನಾನ್ ಬಂದ ವೇಳೆ ಅಧ್ಯಕ್ಷರ ಚರ್ಚೆ ಆಗಿಲ್ಲ. ಇನ್ನೂ ಅಧ್ಯಕ್ಷರ ಆಯ್ಕೆ ಚರ್ಚೆ ಆಗಿಲ್ಲ, 3-4 ದಿನಗಳಲ್ಲಿಯೂ ಯಾವುದೇ ತೀರ್ಮಾನ ಆಗಲ್ಲ. ಪ್ರಹ್ಲಾದ್ ಜೋಶಿ, ಚರ್ಚೆ ಮಾಡಿ, ವರದಿ ಕೊಡ್ತಾರೆ, ಅದು ಪ್ರೊಸೆಸ್ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ರೆಬಲ್ಸ್ ಟೀಂ ಆಕ್ಟೀವ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ನಾನು ಯಾವ ಬಣಕ್ಕೂ ಸೇರಿಲ್ಲ ಹಳೇ ಕಾರ್ಯಕರ್ತ ನಾನು. ಎಮರ್ಜೆನ್ಸಿ, ಅಯೋಧ್ಯೆ ಹೋರಾಟ ಮಾಡಿದವನು ನಾನು. ಬಣದ ಜೊತೆ ಗುರುತಿಸಿಕೊಳ್ಳುವಂತ ಅವಶ್ಯಕತೆ ನನಗಿಲ್ಲ. ಹೈಕಮಾಂಡ್ ಜೊತೆ ರಾಜ್ಯ ರಾಜಕೀಯ ವಿಚಾರ ಚರ್ಚೆ ಮಾಡಿದ್ದೇನೆ. 10 ಕ್ಕೂ ಹೆಚ್ಚು ನಾಯಕರನ್ನ ಭೇಟಿ ಮಾಡಿದ್ದೇನೆ. ರಾಜ್ಯ ಸರ್ಕಾರದ ಎಲ್ಲ ವಿಚಾರ, ಕೈ ಶಾಸಕರು ರೆಬೆಲ್, ಹಗರಣ, ಎಲ್ಲ ಚರ್ಚೆ ಮಾಡಿದ್ದೇನೆ. ಬಿಜೆಪಿ ಆಕ್ಟೀವ್ ಇರುವ ಕಾರಣ ಕಾಂಗ್ರೆಸ್ ಸಚಿವರೊಬ್ಬರ ರಾಜೀನಾಮೆ ಆಗಿದೆ ಎಂದರು.
ಅಧಿವೇಶನದಲ್ಲಿ ಹಗರಣಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಕೇಂದ್ರದ ಬಿಜೆಪಿ ನಾಯಕರ ಮಾರ್ಗದರ್ಶನ ಇದೆ. ಹೋರಾಟದ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಕಾಂಗ್ರೆಸ್ ಲೂಟ್ ಗೋಯಿಂಗ್ ಸರ್ಕಾರ . ಅವರ ಶಾಸಕರೇ ಭ್ರಷ್ಟಾಚಾರ ಇದೆ ಎನ್ನುತ್ತಾರೆ. ಅವರೇ ಹೇಳಿದ ಮೇಲೆ ಸರ್ಕಾರದ ಅವಧಿ ಮುಗಿದ ಹಾಗೆ. ಬೇರೆ ಕಡೆ ಜಿಗಿಯಲು ಸಿದ್ದರಾಗಿರುತ್ತಾರೆ. ನಾನು ಅಧ್ಯಕ್ಷ ಸ್ಥಾನದ ರೇಸಲ್ಲಿ ಇಲ್ಲ. ಅಧ್ಯಕ್ಷ ಸ್ಥಾನದ ಚರ್ಚೆ ಆಗುತ್ತಿಲ್ಲ ಎಂದು ಆರ್.ಅಶೋಕ್ ತಿಳಿಸಿದರು.
Key words: I am, not , race, BJP, state president, post, R. Ashok
The post ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ಇಲ್ಲ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.