19
April, 2026

A News 365Times Venture

19
Sunday
April, 2026

A News 365Times Venture

ನಾಯಕತ್ವ ಬದಲಾವಣೆ: ಒಪ್ಪಂದ, ಮಾತುಕತೆ ಆಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿಲಿ- ಕಾಂಗ್ರೆಸ್ ಶಾಸಕ

Date:

ದಾವಣಗೆರೆ,ಫೆಬ್ರವರಿ,17,2026 (www.justkannada.in): ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ಬಗ್ಗೆ ಮಾತುಕತೆ  ಆಗಿಲ್ಲ ಒಪ್ಪಂದ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಲಿ ಇದರಿಂದ ಗೊಂದಲ ಇರಲ್ಲ ಎಂದು ಕಾಂಗ್ರೆಸ್ ಶಾಸಕ ಬಸವರಾಜು ಶಿವಗಂಗಾ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸವರಾಜು ಶಿವಗಂಗಾ, ಸಿಎಂ ಎರಡುವರೆ ವರ್ಷ ಒಪ್ಪಂದ ಆಗಿಲ್ಲ ಮಾತು ಕೊಟ್ಟಿಲ್ಲ ಎಂದು ಹೇಳಲಿ.  ಕೂಡಲೇ ಹೈಕಮಾಂಡ್ ಎಂಟ್ರಿಯಾಗಿ ನಾಯಕತ್ವ ವಿಚಾರ ಇತ್ಯರ್ಥಪಡಿಸಬೇಕು. ಮುಖ್ಯಮಂತ್ರಿ ಹೇಳಿಕೆ ಗೊಂದಲಗಳಿಗೆ ಕೂಡಲೇ ಹೈಕಮಾಂಡ್ ಇದಕ್ಕೆ ಎಂಟ್ರಿಯಾಗಿ ಇತ್ಯಾರ್ಥ ಮಾಡಬೇಕು. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಎಲ್ಲರೂ ಶಕ್ತಿ ತೋರಿಸಬಾರದು . ಅವರಿಗೆ ಅವರದ್ದ ಆದ ಶಕ್ತಿ ಇದೆ. ಸರಿಯಾದ ಸಮಯದಲ್ಲಿ ಹೈಕಮಾಂಡ್ ಉತ್ತರಿಸುತ್ತದೆ ಎಂದು ಬಸವರಾಜು ಶಿವಗಂಗಾ ಹೇಳಿದರು.

ಕೆಲ ಶಾಸಕರ ವಿದೇಶಿ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸಂದರ್ಭದಲ್ಲಿ ಶಾಸಕರು ವಿದೇಶ ಪ್ರವಾಸ ಹೋಗುವ ಅವಶ್ಯಕತೆ ಇರಲಿಲ್ಲ. ಬಜೆಟ್‌ಗೆ ಮುನ್ನ ವಿದೇಶ ಪ್ರವಾಸ ಹೋಗೋದು ಸರಿಯಲ್ಲ.‌ ಅವರಿಗೂ ವೈಯಕ್ತಿಕ ಜೀವನ ಇರುತ್ತೆ ಹೋಗುತ್ತಾರೆ. ಅದನ್ನು ನಾವು ಯಾವುದೇ ಕಾರಣಕ್ಕೂ ಅಡ್ಡಿ ಪಡಿಸೋದಿಲ್ಲ ಎಂದರು.

Key words: Leadership change, CM, agreement, Congress MLA

The post ನಾಯಕತ್ವ ಬದಲಾವಣೆ: ಒಪ್ಪಂದ, ಮಾತುಕತೆ ಆಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿಲಿ- ಕಾಂಗ್ರೆಸ್ ಶಾಸಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಹಿಳಾ ಮೀಸಲಾತಿ ಮಸೂದೆಗೆ ಸೋಲು: 30 ವರ್ಷಗಳ ಹಿಂದಿನ ಕರಾಳ ಇತಿಹಾಸ ಮತ್ತೆ ಮರುಕಳಿಸಿದೆ- ಹೆಚ್ ಡಿಕೆ

ನವದೆಹಲಿ,ಏಪ್ರಿಲ್,9,2026 (www.justkannada.in):  ಲೋಕಸಭೆಯಲ್ಲಿ ಮಹಿಳಾ ಮೀಸಲಾತಿge ಮಸೂದೆಗೆ ಸೋಲುಂಟಾಗಿದ್ದು, ಈ ಕುರಿತು...

ಮುಸ್ಲೀಮರು ಪಕ್ಷದ ಬೆನ್ನಿಗೆ ನಿಂತಿದ್ದಾರೆ: ಅವರನ್ನ ನಿರ್ಲಕ್ಷಿಸಿಲ್ಲ-ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಏಪ್ರಿಲ್,18,2026 (www.justkannada.in): ಮುಸ್ಲೀಮರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನ...

ಕೃತಕ ಬುದ್ದಿಮತ್ತೆಗಾಗಿ ನಿಯಂತ್ರಕ ಚೌಕಟ್ಟು ರೂಪಿಸುವಲ್ಲಿ ನ್ಯಾಯಾಂಗ ನಿರ್ಣಾಯಕ ಪಾತ್ರ ವಹಿಸುತ್ತದೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಏಪ್ರಿಲ್,18,2026 (www.justkannada.in): ಭಾರತದಲ್ಲಿ ಕೃತಕ ಬುದ್ಧಿಮತ್ತೆಗಾಗಿ ನಿಯಂತ್ರಕ ಚೌಕಟ್ಟನ್ನು ರೂಪಿಸುವಲ್ಲಿ ನ್ಯಾಯಾಂಗವು...

ಏ.20 ರಂದು ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ

ಮೈಸೂರು,ಏಪ್ರಿಲ್,18,2026 (www.justkannada.in):  ಸಿಎಂ ಸಿದ್ದರಾಮಯ್ಯ ಏಪ್ರಿಲ್ 20 ರಂದು ಮೈಸೂರು ಜಿಲ್ಲಾ...