ತುಮಕೂರು,ಏಪ್ರಿಲ್,25,2026 (www.justkannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಹೈಕಮಾಂಡ್ ಸದ್ಯದಲ್ಲೇ ಸೂಕ್ತ ನಿರ್ಧಾರವಾಗುತ್ತೆ ಎಂದು ಭಾವಿಸಿದ್ದೇವೆ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ತಿಳಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಡಾ.ರಂಗನಾಥ್, ರಾಜ್ಯದಲ್ಲಿ ರಾಜಕೀಯ ಸನ್ನಿವೇಶಗುತ್ತಿರುವುದು ನಿಮಗೆಲ್ಲಾ ಗೊತ್ತಿದೆ. ಹೈಕಮಾಂಡ್ ನಿರ್ಧಾರವನ್ನ ತಲೆಬಾಗಿಸಿ ಪಾಲಿಸುತ್ತೇವೆ ಹೈಕಮಂಡ್ ಬಗೆಹರಿಸುತ್ತೆ ಎಂಬ ಭಾವನೆಯಲ್ಲಿ ನೋಡುತ್ತಿದ್ದೇವೆ. ಅವಶ್ಯಕತೆ ಬಂದರೆ ನಾವೆಲ್ಲಾ ದೆಹಲಿಗೆ ಹೋಗುತ್ತೇವೆ ಈ ಬಗ್ಗೆ ಹೈಕಮಂಡ್ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಒಬ್ಬ ಶಾಸಕ ಕಾಂಗ್ರೆಸ್ಸಿಗನಾಗಿ ನಾವೆಲ್ಲಾ ಶಿಸ್ತಿನಲ್ಲಿರುವವರು . ಒಡಂಬಡಿಕೆ ಆಗಿದೆ ಎಂಬ ಮಾತನ್ನು ಇಬ್ಬರು ಹೇಳಿದ್ದಾರೆ. ದೆಹಲಿ ಕಡೆ ಮುಖ ಮಾಡಿ ನೋಡುತ್ತಿದ್ದೇವೆ . ಅವಶ್ಯಕತೆ ಇದ್ದರೆ ನಾವು ದೆಹಲಿಗೆ ಹೋಗುತ್ತೇವೆ ಎಂದರು.
ಡಿಕೆ ಶಿವಕುಮಾರ್ ಇದೇ ಅವಧಿಯಲ್ಲಿ ಸಿಎಂ ಆಗ್ತಾರಾ ಎಂಬ ವಿಚಾರ ಈ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತಾರೆ . ನನ್ನ ವೈಯಕ್ತಿಕ ಆಲೋಚನೆ ನಿಮಗೆ ಗೊತ್ತಿದೆ ಸಿಎಂ ವಿಚಾರವಾಗಿ ಮಾತನಾಡಬಾರದೆಂದು ನೋಟಿಸ್ ನೀಡಿದ್ದಾರೆ. ಹೀಗಾಗಿ ನಾನು ಜಾಸ್ತಿ ಮಾತನಾಡುವುದಿಲ್ಲ ಎಂದು ಡಾ.ರಂಗನಾಥ್ ತಿಳಿಸಿದರು.
Key words: CM, change, issue, MLA Ranganath
The post ನಾಯಕತ್ವ ಬದಲಾವಣೆ ವಿಚಾರ: ಸದ್ಯದಲ್ಲೇ ಸೂಕ್ತ ನಿರ್ಧಾರವಾಗುತ್ತೆ ಎಂದು ಭಾವಿಸಿದ್ದೇವೆ-ಶಾಸಕ ರಂಗನಾಥ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




