ಗದಗ,ಜೂನ್,24,2025 (www.justkannada.in): ಅಕ್ರಮ ಗಣಿಕಾರಿಕೆ ವಿರುದ್ದ ಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಕಳೆದ ಹಾಗೂ ಈ ಅವಧಿಯಲ್ಲಿ ಸಿಎಂ ಆಗಿದ್ದಾಗ ಕಣ್ಣು ಮುಚ್ಚಿ ಕುಳಿತಿದ್ದರಾ ಎಂದು ಪ್ರಶ್ನಿಸಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿರುಗೇಟು ನೀಡಿದ್ದಾರೆ.
ನೀವು ಸಿಎಂ ಆಗಿದ್ದಾಗ ಅಕ್ರಮದ ವರದಿಗಳು ನಿಮ್ಮ ಕೈಯಲ್ಲಿದ್ದವು, ಆಗ ನೀವು ವರದಿಗಳಿಗೆ ಅಭಿಷೇಕ ಮಾಡುತ್ತಾ ಕುಳತಿದ್ದರಾ ಎಂದು ಸಚಿವ ಹೆಚ್.ಕೆ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಎಲ್ಲ ವಿವರಗಳೊಂದಿಗೆ ಸುದೀರ್ಘವಾಗಿ ಪತ್ರ ಬರೆದಿದ್ದೇನೆ. ಈ ಪತ್ರಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕುಂಬಕರ್ಣ, ರಾವಣ ಎಂಬ ಪೌರಾಣಿಕ ಸನ್ನಿವೇಶವನ್ನು ಪಾತ್ರಗಳ ಹೆಸರನ್ನು ತೆಗೆದುಕೊಂಡು ಪತ್ರವನ್ನು ಕಸದ ಬುಟ್ಟಿ ಎಸೆಯಬೇಕು ಎಂದು ಹೇಳಿದ್ದಾರೆ. ಆ ಪತ್ರ ಕಸದ ಬುಟ್ಟಿಗೋ, ಕ್ರಮದ ತೊಟ್ಟಿಗೋ ಎಂಬುದನ್ನು ಯಾರಿಗೆ ಪತ್ರ ಬರೆದಿದ್ದೀನೋ ಅವರು ಅದನ್ನು ನಿರ್ಣಯಿಸುತ್ತಾರೆ ಎಂದರು.
ರಾಜ್ಯದಲ್ಲಿ 1.50 ಲಕ್ಷ ಕೋಟಿ. ರೂ. ಮೊತ್ತದ ಅಕ್ರಮ ಗಣಿಗಾರಿಕೆ ಸಂಪತ್ತು ಕನ್ನಡಿಗರಿಗೆ ವಾಪಾಸ್ ತರಬೇಕೆನ್ನುವುದು ನನ್ನ ಪತ್ರದ ಉದ್ದೇಶ. ಕುಮಾರಸ್ವಾಮಿ ಅವರೇ ನೀವು ದೊಡ್ಡ ಸ್ಥಾನದಲ್ಲಿದ್ದಿರಿ. ವ್ಯವಸ್ಥೆಗೆ ಸವಾಲಾಗಿರುವ ಅಕ್ರಮ ಲೂಟಿ ಗುನ್ನೆಯಿಂದ ನಷ್ಟವಾಗಿರುವ ಅಮೂಲ್ಯವಾಗಿರುವ ಸಂಪತ್ತು. ಹಾಗೂ ಅದರ ಮೌಲ್ಯವನ್ನು ಕನ್ನಡಿಗರಿಗೆ ವಾಪಸ್ ತರಲು ಅಡಿ ಇಡಿ ಎಂದು ಹೆಚ್.ಕೆ ಪಾಟೀಲ್ ಚಾಟಿ ಬೀಸಿದರು.
Key words: Minister, HK Patil, against, HD Kumaraswamy
The post ನೀವು ಸಿಎಂ ಆಗಿದ್ದಾಗ ಅಭಿಷೇಕ ಮಾಡ್ತಾ ಕುಳಿತಿದ್ರಾ..? HDK ವಿರುದ್ದ ಸಚಿವ HK ಪಾಟೀಲ್ ಗುಡುಗು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.