ಮೈಸೂರು,ಜೂನ್,10,2025 (www.justkannada.in): ಗೃಹಿಣಿ ಹಾಗೂ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ತಾಯಿ ಮಹದೇವಮ್ಮ( 38) ಮಗಳು ಸುಪ್ರಿಯ(20) ಮೃತಪಟ್ಟವರು. ಇಬ್ಬರ ಸಾವಿಗೆ ಪತಿ ಗಂಡನೇ ಹೊಣೆ ಎಂದು ಗ್ರಾಮಸ್ಥರು ಕೊಲೆ ಆರೋಪ ಹೊರೆಸಿದ್ದಾರೆ. ಮದುವೆ ಆಗಿ 22 ವರ್ಷವಾದರೂ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.
ಕೊಲೆ ಆರೋಪ ಹೊತ್ತ ಪತಿ ಜಯರಾಮು ಘಟನೆ ಬೆಳಕಿಗೆ ಬಂದ ಸಂದರ್ಭದಲ್ಲಿ ಕೆಲವು ಗಂಟೆಗಳ ಕಾಲ ನಾಪತ್ತೆಯಾಗಿ ನಂತರ ಪ್ರತ್ಯಕ್ಷವಾಗಿದ್ದಾನೆ. 22 ವರ್ಷಗಳ ಹಿಂದೆ ಮಹದೇವಮ್ಮಳನ್ನ ಮದುವೆ ಆಗಿದ್ದ ಕೊತ್ತನಹಳ್ಳಿ ಜಯರಾಮ ದಂಪತಿಗೆ ಸುಪ್ರಿಯ ಎಂಬ ಮಗಳಿದ್ದಾಳೆ. ವರ್ಷಗಳು ಉರುಳಿದರೂ ಜಯರಾಮುಗೆ ವರದಕ್ಷಿಣೆ ದಾಹ ಕಡಿಮೆ ಆಗಿರಲಿಲ್ಲ. ಈ ವಿಚಾರದಲ್ಲಿ ಪತ್ನಿ ಜೊತೆ ಜಗಳವಾಡುತ್ತಲೇ ಇದ್ದ. ಇದರಿಂದ ಮಗಳು ಸುಪ್ರಿಯ ಸಹ ನೊಂದಿದ್ದಳು. ಗಂಡನ ವರ್ತನೆಯಿಂದ ಬೇಸತ್ತ ಮಹದೇವಮ್ಮ ಹಲವು ಬಾರಿ ಹುಲ್ಲಹಳ್ಳಿ ಠಾಣೆ ಪೊಲೀಸರ ಮೊರೆ ಹೋಗಿದ್ದರೆಂದು ಹೇಳಲಾಗಿದೆ. ಪೊಲೀಸರಿಂದಾಗಲಿ ಅಥವಾ ಕುಟುಂಬಸ್ಥರಿಂದ ಮಹದೇವಮ್ಮ ಗೆ ನ್ಯಾಯ ದೊರೆತಿಲ್ಲವೆಂದು ತವರು ಮನೆಯ ಸಂಬಂಧಿಕರು ಆರೋಪಿಸಿದ್ದಾರೆ.
ಗಂಡನ ವರದಕ್ಷಿಣೆ ದಾಹಕ್ಕೆ ಬೇಸತ್ತಿದ್ದ ಮಹದೇವಮ್ಮ ಹಾಗೂ ಮಗಳು ಮನೆಯ ತಂಬಾಕು ಬೇಯಿಸುವ ಬ್ಯಾರೆನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಇಬ್ಬರ ಸಾವಿಗೆ ಗಂಡ ಜಯರಾಮು ಕಾರಣ ಎಂದು ಮೃತ ಮಹಿಳೆ ಮಹದೇವಮ್ಮ ತವರು ಮನೆಯ ಸಂಬಂಧಿಕರು ಆರೋಪಿಸಿದ್ದಾರೆ.
Key words: Mysore, Wife, daughter, found, hanging:, Husband, murder
The post ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ, ಮಗಳು ಪತ್ತೆ: ಪತಿ ವಿರುದ್ದ ಕೊಲೆ ಆರೋಪ…? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.