29
September, 2026

A News 365Times Venture

29
Tuesday
September, 2026

A News 365Times Venture

ನೈಸ್ ಯೋಜನೆ:  AK-DK ಭಾಂದವ್ಯದಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ- ಚರ್ಚೆಗೆ ಸಿಎಂಗೆ  ಹೆಚ್ ಡಿಕೆ ಪಂಥಾಹ್ವಾನ

Date:

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ ನಡೆದಿದೆ. ಎಕೆ-ಡಿಕೆ ಬಾಂಧವ್ಯದಲ್ಲಿ 3 ಲಕ್ಷ ಕೋಟಿ ಗಿಂತ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಅಶೋಕ್ ಖೇಣಿ ಮತ್ತು ಸಿಎಂ ಡಿಕೆ ಶಿವಕುಮಾರ್ ವಿರುದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಕೆಲ ದಾಖಲೆಗಳನ್ನ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,  ಇಷ್ಟೆಲ್ಲಾ ಅವ್ಯವಹಾರ ಮಾಡಿದ ಅಶೋಕ್ ಖೇಣಿಯನ್ನ ಒದ್ದು ಒಳಗೆ ಹಾಕಬೇಕು.  ಯಾರು ಕೂಡ ನೈಸ್ ಟೋಲ್ ಕಟ್ಟಬೇಡಿ ಸರ್ಕಾರ ಅದನ್ನ ಮೊದಲು ನಿಲ್ಲಿಸಲಿ  ನೈಸ್ ಯೋಜನೆಗೆ 1 ಲಕ್ಷ 24 ಸಾವಿರ ಕೆರೆ ನೋಟಿಫೈ ಮಾಡಿ ಇಟ್ಟಿದ್ದಾರೆ. 2004ರಲ್ಲೇ ಡಿನೋಟಿಫೈ ಮಾಡಿದ್ದಾರೆ ಇದನ್ನೆಲ್ಲಾ ಹೊಡೆಯಲು ಪ್ಲಾನ್ ಮಾಡಿದ್ದಾರೆ ಎಂದರು.

ನೈಸ್ ಯೋಜನೆ ಅಕ್ರಮದ ಬಗ್ಗೆ ವಿಧಾನಸೌಧದ ಮುಂಭಾಗದಲ್ಲೇ ಚರ್ಚೆಗೆ ಬರಲಿ ಎಂದು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಹೆಚ್ ಡಿಕೆ ಪಂಥಾಹ್ವಾನ ನೀಡಿದರು.

ನೈಸ್ ಸಂಸ್ಥೆ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವ ಶಕ್ತಿ ಇಲ್ಲದಿದ್ದರೆ  ಡಿಕೆ ಶಿವಕುಮಾರ್  ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಮುಂದೆ ಸಿಎಂ ಆಗಿ ಬರುವವರು ಈ ಅಕ್ರಮದ ಬಗ್ಗ ನೋಡಿಕೊಳ್ಳುತ್ತಾರೆ ಎಂದರು.

Key words: NICE Project, Central Minister, HDK challenges, CM DK Shivakumar, debate.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅ.5ರೊಳಗೆ ಯುಜಿ ಕೇಬಲ್ ಕಾಮಗಾರಿ ಪೂರ್ಣಗೊಳಿಸಿ- ರಮೇಶ್ ಬಂಡಿಸಿದ್ದೇಗೌಡ ಕಟ್ಟುನಿಟ್ಟಿನ ಸೂಚನೆ

ಮೈಸೂರು, ಸೆಪ್ಟಂಬರ್,29, 2026 (www.justkannada.in):  ನಗರದಲ್ಲಿ ಚಾಲ್ತಿಯಲ್ಲಿರುವ ಭೂಗತ ವಿದ್ಯುತ್ ಕೇಬಲ್...

ಮೂಲಸ್ಥಳದಲ್ಲೇ ಡಾ.ರಾಜ್ ಪುತ್ಥಳಿ ಪುನರ್ ಸ್ಥಾಪನೆ; ಸಚಿವ ಡಾ.ಯತೀಂದ್ರ ನೇತೃತ್ವದ ಸಭೆ ನಿರ್ಧಾರ

ಮೈಸೂರು, ಸೆಪ್ಟಂಬರ್,29, 2026 (www.justkannada.in): ದಸರಾ ವಸ್ತುಪ್ರದರ್ಶನದ ಆವರಣದಲ್ಲಿದ್ದ ವರನಟ ಡಾ.ರಾಜ್‌...

ಖಾಸಗಿ ಬಸ್ ಹರಿದು ಒಂದುವರೆ ವರ್ಷದ ಮಗು ಸಾವು

ಮೈಸೂರು,ಸೆಪ್ಟಂಬರ್,29,2026 (www.justkannada.in): ರಸ್ತೆ ಬದಿ ನಿಂತಿದ್ದ ಒಂದುವರೆ ವರ್ಷದ ಮಗುವಿನ ಮೇಲೆ...

ವಿಶ್ವ ಪ್ರವಾಸೋದ್ಯಮ ದಿನ: ಅವತಿ ಬೆಟ್ಟಕ್ಕೆ ಚಾರಣ, ಸ್ವಚ್ಚತಾ ಕಾರ್ಯ ಅಭಿಯಾನ

ಬೆಂಗಳೂರು ಗ್ರಾಮಾಂತರ, ಸೆಪ್ಟಂಬರ್,28,2026 (www.justkannada.in): ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ...