29
April, 2026

A News 365Times Venture

29
Wednesday
April, 2026

A News 365Times Venture

ಪಡಿತರ ಸಾಗಾಟ ಲಾರಿ ಮಾಲೀಕರ ಮುಷ್ಕರಕ್ಕೆ ಮಣಿದ ಸರ್ಕಾರ:  ಬಾಕಿ ಹಣ ಬಿಡುಗಡೆಗೆ ಆದೇಶ

Date:

ಬೆಂಗಳೂರು,ಜುಲೈ,7,2025 (www.justkannada.in): 4 ತಿಂಗಳ ಪಡಿತರ ಸಾಗಾಣೆ ವೆಚ್ಚವನ್ನು ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪಡಿತರ ಸಾಗಾಟ ಲಾರಿ ಮಾಲೀಕರು ಮತ್ತು ಚಾಲಕರು ನಡೆಸಿದ ಮುಷ್ಕರಕ್ಕೆ ಸರ್ಕಾರ ಮಣಿದಿದ್ದು ಹಣ ಬಿಡುಗಡೆಗೆ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಅನ್ನ ಭಾಗ್ಯ ಅಕ್ಕಿಯನ್ನು ಸಾಗಿಸಿದ ಲಾರಿ ಮಾಲೀಕರಿಗೆ  ಸಾಗಣೆ ವೆಚ್ಚದ ಬಾಕಿ ಹಣ ನೀಡದ  ಕಾರಣಕ್ಕೆ ಲಾರಿ ಮಾಲೀಕರಿಂದ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿಗೆ ಮುಷ್ಕರ ಹೂಡಿದ್ದರು. ಇದೀಗ ಲಾರಿಮಾಲೀಕರ ಮುಷ್ಕರಕ್ಕೆ ಮಣಿದು  244 ಕೋಟಿ ರೂಪಾಯಿ ಬಾಡಿಗೆ ಹಣ ಬಿಡುಗಡೆ ಮಾಡಿ ಆದೇಶಿಸಲಾಗಿದೆ. ಫೆಬ್ರವರಿಯಿಂದ ಮೇ ತಿಂಗಳವರೆಗಿನ ಬಾಕಿ ಹಣ ಬಿಡುಗಡೆ ಮಾಡಿದೆ.

ಕಳೆದ ಫೆಬ್ರುವರಿಯಿಂದ ಹಣವನ್ನು ಸರ್ಕಾರ ಪಾವತಿ ಮಾಡಿಲ್ಲ. ಇದರಿಂದ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಲಾರಿ ಮಾಲೀಕರು ತಮ್ಮ ಸಾಲದ ಕಂತನ್ನು ಕಟ್ಟಲು ಆಗುತ್ತಿಲ್ಲ. ಹೀಗಾಗಿ ನಮ್ಮ ವಾಹನಗಳನ್ನು ಹಣಕಾಸು ಕಂಪನಿಗಳು ಸೀಜ್ ಮಾಡಿಕೊಳ್ಳುತ್ತಿವೆ. ಅಂದಾಜು 4 ಸಾವಿರ ಲಾರಿಗಳ ಮೇಲೆ ಈ ಕೆಟ್ಟ ಪರಿಣಾಮ ಬೀಳಲಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅವರು ಸರ್ಕಾರದ ವಿರುದ್ಧ  ಕಿಡಿಕಾರಿದ್ದರು.vtu

Key words: Government, ration truck, owners, strike, release, funds

The post ಪಡಿತರ ಸಾಗಾಟ ಲಾರಿ ಮಾಲೀಕರ ಮುಷ್ಕರಕ್ಕೆ ಮಣಿದ ಸರ್ಕಾರ:  ಬಾಕಿ ಹಣ ಬಿಡುಗಡೆಗೆ ಆದೇಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳದಿಂದ ವಾಪಸ್ಸಾಗುವಾಗ ದುರಂತ: ನಾಲೆಗೆ ಕಾರು ಬಿದ್ದು ತಾಯಿ ಮಗು ಸಾವು

ಹಾಸನ,ಏಪ್ರಿಲ್,29,2026 (www.justkannada.in): ಧರ್ಮಸ್ಥಳದಿಂದ ವಾಪಸ್ ಆಗುವಾಗ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್...

ಜಲ್ ಜೀವನ್ ಮಿಷನ್ 2.0 ಸಂವಾದ: ಬಾಕಿಯಿರುವ ಎಲ್ಲಾ ಅನುದಾನ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಒತ್ತಾಯ  

ಬೆಂಗಳೂರು,ಏಪ್ರಿಲ್,29,2026 (www.justkannada.in): ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕರ್ನಾಟಕ ಸಂಪೂರ್ಣವಾಗಿ ಬದ್ಧವಾಗಿದೆ....

SSLC ಪರೀಕ್ಷೆಯಲ್ಲಿ 2ನೇ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಡಾ: ಪುಷ್ಪ ಅಮರನಾಥ್ ಅಭಿನಂದನೆ

ಮೈಸೂರು, ಏಪ್ರಿಲ್,29,2026 (www.justkannada.in):  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ...

ಮೈಸೂರು: ಅನುಮಾನಾಸ್ಪದ ಸ್ಥಳಗಳ ಮೇಲೆ ಅಬಕಾರಿ ದಾಳಿ.

ಮೈಸೂರು, ಏಪ್ರಿಲ್, 29,2026 (www.justkannada.in):  ಅಬಕಾರಿ ಇಲಾಖೆಯ ವತಿಯಿಂದ ಮೈಸೂರು ನಗರ...