11
July, 2025

A News 365Times Venture

11
Friday
July, 2025

A News 365Times Venture

ಪತ್ರಿಕೋದ್ಯಮದಲ್ಲಿ ದಲಿತರು, ಅಲ್ಪಸಂಖ್ಯಾತರ ಪ್ರಾತಿನಿಧ್ಯ ಗೌಣ-ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಆತಂಕ

Date:

ಮೈಸೂರು,ಮೇ,30,2025 (www.justkannda.in):  ಇತ್ತೀಚಿನ ವರ್ಷಗಳಲ್ಲಿ ನಡೆಸಲಾಗಿರುವ ಎಲ್ಲ  ಸರ್ವೆಗಳ ಪ್ರಕಾರ ಭಾರತದ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಸಮಾನ ಪ್ರಾತಿನಿಧ್ಯ ದೊರಕಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಅಂಶಗಳು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ದೊಡ್ಡ ಅಪಾಯದ ಸಂಕೇತ ಎಂದು ಹಿರಿಯ ಪತ್ರಕತ, ಪ್ರಗತಿಪರ ಚಿಂತಕ ದಿನೇಶ್ ಅಮಿನ್ ಮಟ್ಟು ಕಳವಳ ವ್ಯಕ್ತಪಡಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಅಂಗವಾಗಿ ಆಯೋಜಿಸಿದ್ದ ` ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ’ ವಿಷಯ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೋದ್ಯಮದಲ್ಲಿ ಅಹಿಂದ ವರ್ಗಗಳಿಗೆ ನೀಡಬೇಕಾದ ಸ್ಥಾನಮಾನ ದೊರಕದೆ ಇರುವುದರಿಂದಲೇ ಮಾಧ್ಯಮದಲ್ಲಿ ಆ ವರ್ಗಗಳ ಸುದ್ದಿ ಮತ್ತು ಭಾವನೆಗಳಿಗೆ ಮನ್ನಣೆ ದೊರಕುತ್ತಿಲ್ಲ ಎಂದು ತಿಳಿಸಿದರು.

ಈ ನೂರು ವರ್ಷಗಳ ಬಳಿಕ ಭಾರತೀಯ ಪತ್ರಿಕೋದ್ಯಮದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಇಂದಿಗೂ ದಲಿತರು, ಹಿಂದುಳಿದ, ಅಲ್ಪಸಂಖ್ಯಾತರು ಯಾವುದೇ ಪತ್ರಿಕೆಯನ್ನು ಓದಿದರೂ ಇದು ನಮ್ಮ ಪತ್ರಿಕೆ ಅಥವಾ ನಮ್ಮ ಚಾನಲ್ ಎಂದು ಭಾವಿಸಲು ಸಾಧ್ಯವಾಗಿಲ್ಲ. ನಮ್ಮ ಪರವಾಗಿ ಮಾಧ್ಯಮ ಇದೆ ಎಂದು ಹೇಳಿಕೊಳ್ಳದ ಸ್ಥಿತಿ ಇದೆ. ಇದಕ್ಕೆ ಕಾರಣ, ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಪ್ರಾತಿನಿಧ್ಯ ಇಲ್ಲವಾಗಿದೆ. ಯಾವುದೇ ಒಂದು ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮ ಸಂಸ್ಥೆಯಲ್ಲಿ ನೀತಿ, ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ಈ ವರ್ಗಗಳಿಗೆ ಸ್ಥಾನ ದೊರಕಿಲ್ಲ ಎಂದು ವಿಷಾದಿಸಿದರು.vtu

ಅಂಬೇಡ್ಕರ್ ಅವರನ್ನು ಕೇವಲ ಸಂವಿಧಾನ ಬರೆದವರು, ಮೀಸಲಾತಿ ಕೊಟ್ಟವರು ಎಂದು ಮಾತ್ರ ನಾವು ಭಾವಿಸಿದ್ದೇವೆ. ಆದರೆ, ಅವರೋರ್ವ ಪ್ರಪಂಚದ ಅತ್ಯಂತ ಶ್ರೇಷ್ಠ ಅರ್ಥಶಾಸ್ತ್ರ ತಜ್ಞರಾಗಿ, ಮಾನವಶಾಸ್ತ್ರ ಪರಿಣಿತರಾಗಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ಮಾದರಿಯಾಗಿದ್ದಾರೆ. ಇದರ ಜೊತೆಗೆ ಡಾ. ಅಂಬೇಡ್ಕರ್ ಅವರು ಮೂಕನಾಯಕ, ಬಹಿಷ್ಕೃತ ಭಾರತ, ಸಮತ, ಜನತಾ, ಪ್ರಬುದ್ಧ ಭಾರತ ಪತ್ರಿಕೆಗಳನ್ನು ಸ್ಥಾಪಿಸುವ ಮೂಲಕ ಭಾರತಕ್ಕೆ ದಿಕ್ಕು ತೋರಿಸಿದ್ದರು. ಪತ್ರಿಕೋದ್ಯಮ ಕ್ಷೇತ್ರದಲ್ಲೂ ಅಂಬೇಡ್ಕರ್ ಅವರೇ ಮಾದರಿ ಎಂದು ತಿಳಿಸಿದರು.

ದೇಶದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗಳು ಮತ್ತು ಯುದ್ಧವನ್ನು ಮಾಧ್ಯಮಗಳು ಯಾವ ಸ್ವರೂಪದಲ್ಲಿ ಬಿಂಬಿಸಬೇಕಿತ್ತೋ ಆ ಸ್ಪರೂಪದಲ್ಲಿ ಬಿಂಬಿಸಿಲ್ಲ. ನಮ್ಮ ದೇಶದ ಸಮಸ್ಯೆಯ ಬಗ್ಗೆ ಅಮೇರಿಕಾ ಅಧ್ಯಕ್ಷರು ಹತ್ತು ಬಾರಿ ಪ್ರತಿಕ್ರಿಯೆ ನೀಡಿದ್ದರೂ, ನಮ್ಮ ಪ್ರಧಾನಿ ಒಮ್ಮೆಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಕಾಶ್ಮಿರದಲ್ಲಿ 26 ಮಂದಿ ಭಾರತೀಯರನ್ನು ಕೊಂದ ಭಯೋತ್ಪಾದಕರನ್ನು ಪಾಕಿಸ್ತಾನ ಭಾರತಕ್ಕೆ ಒಪ್ಪಿಸುವವರೆಗೂ ಕದನ ವಿರಾಮ ಘೋಷಿಸುವುದಿಲ್ಲ ಎಂದು ಭಾರತ ಹೇಳಬೇಕಿತ್ತು. ಈ ಬಗ್ಗೆ ಯಾವ ಮಾಧ್ಯಮವಾದರೂ ಪ್ರಶ್ನೆ ಮಾಡದೆ ಇರುವುದು ವಿಪರ್ಯಾಸ ಎಂದು  ನುಡಿದರು.

ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್. ಮಮತಾ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಪ್ರೊ. ಮಹೇಶ್‍ಚಂದ್ರ ಗುರು ಅವರು ಹಾಕಿಕೊಟ್ಟ ಸಂಪ್ರದಾಯದಂತೆ ಪತ್ರಿಕೋದ್ಯಮ ವಿಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಮತ್ತು ವಿಚಾರ ಸಂಕಿರಣವನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗಿದೆ. ಆ ಮೂಲಕ ಪತ್ರಕರ್ತರಾದ ಡಾ. ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

`ಸಮಾನತೆ ಬಯಸದ ಮಾಧ್ಯಮ: ಕೆ.ದೀಪಕ್ ಗಂಭೀರ ಆರೋಪ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ , ನೂರು ವರ್ಷಗಳ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಆರಂಭಿಸಿದ ಮೂಕನಾಯಕ ಪತ್ರಿಕೆಯ ಕಾಲದ ಪತ್ರಿಕೋದ್ಯಮದಲ್ಲಿ ಇದ್ದ ಜಾತಿಯತೆ ಮತ್ತು ಪೂರ್ವಗ್ರಹಗಳು ಇಂದಿಗೂ ಇಂದಿಗೂ ಜೀವಂತವಾಗಿದೆ. ಪ್ರಸ್ತುತ ಮಾಧ್ಯಮ ಕ್ಷೇತ್ರದಲ್ಲಿ ಪ್ರಜ್ಞಾ ಪೂರ್ವಕವಾಗಿಯೇ ದಲಿತ ಮತ್ತು ಅಲ್ಪಸಂಖ್ಯಾತ ಪತ್ರಕರ್ತರನ್ನು ನಿರ್ಣಾಯಕ ಸ್ಥಾನಗಳಿಂದ ದೂರವಿಡುವ ಪ್ರಯತ್ನಗಳು ನಡೆಯುತ್ತಿದೆ. ಇನ್ನು ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಲ್ಲೊಬ್ಬ ಇಲ್ಲೊಬ್ಬ ದಲಿತ ಪತ್ರಕರ್ತರು ಮೂಖನಾಯಕರಾಗಿ ಕೆಲಸ ನಿರ್ವಹಿಸುವ ಸ್ಥಿತಿ ಇದೆ ಎಂದು ವಿಷಾದಿಸಿದರು.

ಡಾ. ಅಂಬೇಡ್ಕರ್ ಕಾಲಮಾನದಲ್ಲಿ ಸಮಾನತೆಯನ್ನು ಬಯಸದ ಪತ್ರಿಕೋದ್ಯಮದ ಧೋರಣೆ ಇಂದಿಗೂ ಮುಂದುವರೆದಿದ್ದು, ಯಾವುದೇ ಸುಧಾರಣೆ ಕಂಡುಬಂದಿಲ್ಲ. ಅಸ್ಪೃಶ್ಯರು, ಶೋಷಿತರ ಸುದ್ದಿಗಳಿಗೆ ಸಮಾನ ಸ್ಥಾನಮಾನ ಸಿಗುತ್ತಿಲ್ಲ. ಮಾಧ್ಯಮಗಳು ಪೂರ್ವಗ್ರಹ ಪೀಡಿತರಾಗಿ ವರ್ತಿಸುತ್ತಿದ್ದು, ಇದಕ್ಕೆ ಪರಿಹಾರವಾಗಿ ಸಾಮಾಜಿಕ ಮಾಧ್ಯಮ ದಲಿತರ ಧ್ವನಿಗೆ ವೇದಿಕೆಯಾಗಿದೆ ಎಂದು ತಿಳಿಸಿದರು.

ಕನ್ನಡ ಪತ್ರಿಕೋದ್ಯಮವೂ ಸೇರಿದಂತೆ ದೇಶದ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಪ್ರಾತಿನಿಧ್ಯ ಅತ್ಯಂತ ಶೂಚನೀಯವಾಗಿದೆ. ದಲಿತ ಪರ ಸುದ್ದಿಗಳನ್ನು ಉದ್ದೇಶಪೂರ್ವಕವಾಗಿಯೇ ಮರೆಮಾಚುವ ಪ್ರತಯ್ನಗಳು ನಿರಂತರವಾಗಿ ನಡೆದುಕೊಂಡು ಬಂದಿದೆ. ಶ್ರೀಮಂತರ ನಿಯಂತ್ರಣದಲ್ಲಿರುವ ಮಾಧ್ಯಮಗಳು ಅಧಿಕಾರಸ್ಥರ ಮುಖವಾಣಿಗಳಾಗಿದ್ದು ಈ ದೇಶದಲ್ಲಿ ಜಾತಿಯ ಕಾರಣಕ್ಕಾಗಿ ದಲಿತರ ಮೇಲಾಗುತ್ತಿರುವ ದೌರ್ಜನ್ಯ, ಶೋಷಣೆ, ಅವಕಾಶ ವಂಚನೆಗಳನ್ನು ಯಾವ ಮಾಧ್ಯಮಗಳೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮುಸ್ಲಿಂರಿಂದ ಹಿಂದೂ ಯುವಕನ ಕೊಲೆಯಾದಾಗ ಮಾಧ್ಯಮಗಳು ತೋರುವ ಬದ್ಧತೆ ಮತ್ತು ಇಚ್ಛಾಶಕ್ತಿ ಅದೇ ಮೇಲ್ಜಾತಿಯ ಹಿಂದೂವಿನಿಂದ ದಲಿತ ಯುವಕನ ಕೊಲೆಯಾದಾಗ, ದಲಿತ ಮಹಿಳೆಯ ಅತ್ಯಾಚಾರವಾದಾಗ ತೋರಿಸುವುದಿಲ್ಲ ಏಕೆ ? ಎಂದು ಪ್ರಶ್ನಿಸಿದರು.

ದೇಶದ ಹೊರಗೆ ನಿಂತು ಭಾರತವನ್ನು ಹುಡುಕಿದಾಗ ನಮಗೆ ಒಂದೇ ಭಾರತ ಕಾಣುತ್ತದೆ. ಅದೇ ದೇಶದ ಒಳಗೆ ನಿಂತು ನೋಡಿದಾಗ ಹಲವು ಭಾರತ ನಮಗೆ ಗೋಚರಿಸುತ್ತದೆ. ನಮಲ್ಲಿ ಜಾತಿಯತೆಯ ಭಾರತ, ಜಾತ್ಯಾತೀತ ಭಾರತ, ಧರ್ಮಮತಾಂಧ ಭಾರತ, ಧರ್ಮ ನಿರಪೇಕ್ಷತೆ ಭಾರತ, ಶ್ರೀಮಂತರ ಭಾರತ, ಬಡವರ ಭಾರತ, ಅಜ್ಞಾನದ ಭಾರತ, ಜ್ಞಾನದ ಭಾರತ, ದುಡಿಯವವರ ಭಾರತ, ದುಡಿಸಿಕೊಳ್ಳುವವರ ಭಾರತ, ಮೌಢ್ಯದ ಭಾರತ, ವಿಜ್ಞಾನ ಭಾರತ, ವಿಚಾರವಂತರ ಭಾರತ ಇತ್ಯಾದಿ ಹಲವು ಭಾರತವನ್ನು ನಾನು ಕಾಣಬಹುದು. ಮುಂದೆ ಪತ್ರಕರ್ತರಾಗಿ ಬರುವ ವಿದ್ಯಾರ್ಥಿಗಳು ತಾವು ಯಾವ ಭಾರತವನ್ನು ಕಟ್ಟಬೇಕೆಂದು ತೀರ್ಮಾನಿಸಬೇಕು ಎಂದು ಕಿವಿಮಾತು ಹೇಳಿದರು.

ದಲಿತ ಪತ್ರಕರ್ತರ ಏಳಿಗೆಗೆ ಹಿಂದೆ ಅನೇಕ ವಿಶೇಷ ಸವಲತ್ತು, ಜಾಹಿರಾತು ರೂಪದ ನೆರವು ದೊರಕುತಿತ್ತು. ಇಂದು ಉಳ್ಳವರಿಗೂ ವಿಶೇಷ ಸವಲತ್ತು, ಪ್ರತ್ಯೇಕ ಜಾಹಿರಾತು ನೀಡಲಾಗುತ್ತಿದೆ. ಎಲ್ಲರೂ ಮೀಸಲಾತಿಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಆದರೆ, ಸರಕಾರದ ಸವಲತ್ತು ಮತ್ತು ಜಾಹಿರಾತು ಪಡೆಯುವ ಅನೇಕ ಪತ್ರಿಕೆಗಳು ಕೇವಲ ಜಾಹಿರಾತಿಗಾಗಿ ಪತ್ರಿಕೆಗಳನ್ನು ನಡೆಸುತ್ತಿವೆ. ಆದ್ದರಿಂದ ದಲಿತ ಮಾಲೀಕತ್ವದ ಮತ್ತು ಸಂಪಾದಕತ್ವದ ಪತ್ರಿಕೆಗಳು ಸೈದ್ಧಾಂತಿಕವಾಗಿ ಗಟ್ಟಿತನದಿಂದ ಕೂಡಿದ ಗಂಭೀರ ಪತ್ರಿಕೋದ್ಯಮದೆಡೆಗೆ ತೊಡಗಿಸಿಕೊಳ್ಳಬೇಕು. ಕೇವಲ ಜಾಹಿರಾತಿಗಾಗಿ ಪತ್ರಿಕೆ ಮಾಡಿ ಜೀವನ ನಿರ್ವಹಣೆ ಮಾಡಿದರೆ ಅಂಬೇಡ್ಕರ್ ಅವರು ಕಂಡ ಪ್ರಬುದ್ಧ ಭಾರತ ನಿರ್ಮಾಣದ ಕನಸು ನನಸಾಗುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಸಿ.ಕೆ. ಪುಟ್ಟಸ್ವಾಮಿ, ಪ್ರೊ. ಎಂ.ಎಸ್.ಸಪ್ನ, ಸಿಂಡಿಕೇಟ್ ಸದಸ್ಯ ಡಾ. ನಟರಾಜ್ ಶಿವಣ್ಣ ಹಾಜರಿದ್ದರು.

Key words: Mysore university, Senior journalist, Dinesh Amin Mattu , Dalits, minorities, journalism.

 

The post ಪತ್ರಿಕೋದ್ಯಮದಲ್ಲಿ ದಲಿತರು, ಅಲ್ಪಸಂಖ್ಯಾತರ ಪ್ರಾತಿನಿಧ್ಯ ಗೌಣ-ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಆತಂಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KSOU: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ “ಉಚಿತ ಶಿಕ್ಷಣ” ಗ್ಯಾರಂಟಿ.

ಮೈಸೂರು, ಜು.೧೦,೨೦೨೫:  ಇನ್ಮುಂದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅಲ್ಪಸಂಖ್ಯಾತ ಸಮುದಾಯದ...

ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ ಪತ್ನಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

ಬೆಂಗಳೂರು,ಜುಲೈ,10,2025 (www.justkannada.in):  ಮುಡಾದಲ್ಲಿ ಅಕ್ರಮ ಸೈಟು ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ...

ಆಸ್ತಿ ಕಬಳಿಕೆಗೆ ಸಂಚು: ಐವರ ವಿರುದ್ದ ಪ್ರಕರಣ ದಾಖಲು

ಮೈಸೂರು,ಜುಲೈ,10,2025 (www.justkannada.in): ಅಸಲಿ ವ್ಯಕ್ತಿ ಇದ್ದರೂ ಸಹ  ಆಸ್ತಿ ಕಬಳಿಸಲು ಸಂಚು...

ಸಿಎಂ ತವರಲ್ಲಿ ಮೀಟರ್ ಬಡ್ಡಿ ದಂಧೆ: ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರು,ಜುಲೈ,10,2025 (www.justkannada.in):  ಸಿಎಂ ತವರಲ್ಲಿ ಮೀಟರ್ ಬಡ್ಡಿ ದಂಧೆ ಆರೋಪ ಕೇಳಿ...