27
September, 2026

A News 365Times Venture

27
Sunday
September, 2026

A News 365Times Venture

ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ: ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೊಂದರೆ ಆರೋಪ

Date:

 

ಬೆಂಗಳೂರು, ಜೂ.27, 2026: ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಯಲ್ಲಿ ಪ್ರಮುಖ ಅಧಿಕಾರಿಗಳ ಕೊರತೆಯಿಂದಾಗಿ ಕಳೆದ ಸುಮಾರು ಒಂದು ವರ್ಷದಿಂದ ಕಡತಗಳ ವಿಲೇವಾರಿ ವಿಳಂಬವಾಗುತ್ತಿದ್ದು, ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಉಪನ್ಯಾಸಕರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ನಿರ್ದೇಶಕರ ಕಚೇರಿಯಲ್ಲಿ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರಿಗೆ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನಿಯೋಜನೆ ನೀಡಿರುವುದರಿಂದ ಅವರು ಮೂಲ ಕಚೇರಿಯಲ್ಲಿ ಸಮರ್ಪಕವಾಗಿ ಲಭ್ಯವಿರುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದರಿಂದ ವಿವಿಧ ಕಡತಗಳಿಗೆ ಸಮಯಕ್ಕೆ ಸರಿಯಾಗಿ ಅನುಮೋದನೆ ದೊರೆಯದೆ, ಇಲಾಖೆಯ ದಿನನಿತ್ಯದ ಆಡಳಿತಾತ್ಮಕ ಕಾರ್ಯಗಳಿಗೆ ಅಡಚಣೆ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ಪ್ರಸ್ತುತ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರ ಉಪಸ್ಥಿತಿಯಿಂದಾಗಿ ಕೆಲಮಟ್ಟಿನ ಕೆಲಸಗಳು ನಡೆಯುತ್ತಿವೆ. ಅವರು ಕೂಡ ವರ್ಗಾವಣೆಯಾದರೆ ಇಲಾಖೆಯ ಕಾರ್ಯಕಲಾಪಗಳು ಮತ್ತಷ್ಟು ಸ್ಥಗಿತಗೊಳ್ಳುವ ಆತಂಕವಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಅಧಿಕಾರಿಗಳ ಕೊರತೆಯನ್ನು ಕೂಡಲೇ ಸರಿಪಡಿಸಿ, ಇಲಾಖೆಯ ಕಾರ್ಯವೈಖರಿಯನ್ನು ಸುಗಮಗೊಳಿಸಬೇಕು. ಇಲ್ಲವಾದರೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ವಿಲೀನಗೊಳಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಉಪನ್ಯಾಸಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

KEY WORDS:

Karnataka Pre-University Education Department, PU Education Directorate Bengaluru, Directorate of Pre-University Education, Officer shortage in PU Department, Malleswaram, PU Directorate, File disposal delay, Karnataka PU Education, Bengaluru, education department

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೌಢ್ಯ ವಿರೋಧಿ ಕಾಯ್ದೆ ಜಾರಿಗೆ ಪಟ್ಟಭದ್ರ ಹಿತಾಸಕ್ತಿಗಳಿಂದ ಅಡ್ಡಿ: ಸಿದ್ದರಾಮಯ್ಯ

  ಮೈಸೂರು, ಸೆ.27, 2026: ಸಮಾಜದಲ್ಲಿ ಮೌಢ್ಯ, ಕಂದಾಚಾರ ಹಾಗೂ ಅವೈಜ್ಞಾನಿಕ ಆಚರಣೆಗಳು...

ಮೇಜರ್ ಮಣಿವಣ್ಣನ್ ಅವರಿಗೆ ಚೀಪ್ ಆಫ್ ಡಿಫೆನ್ಸ್ ಸ್ಟಾಫ್ ಅವರಿಂದ ಪ್ರಶಂಸಾ ಪತ್ರ

  ಬೆಂಗಳೂರು ಸೆ.೨೬,೨೦೨೬: ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ...

ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ:  ಚು.ಆಯೋಗ ವಿಸರ್ಜಿಸಿ, ಮುಖ್ಯಆಯುಕ್ತರನ್ನ ಬಂಧಿಸಿಬೇಕು-ಸಿಎಂ ಡಿಕೆಶಿ ಒತ್ತಾಯ

ಬೆಂಗಳೂರು ,ಸೆಪ್ಟಂಬರ್,26,2026 (www.justkannada.in): ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು. ಮುಖ್ಯ...

ಯುವಕರು ಸಂಘಟಿತರಾಗಿ, ನಾರಾಯಣ ಗುರುಗಳ ತತ್ವಗಳನ್ನು ಅಳವಡಿಸಿಕೊಳ್ಳಲಿ:  ಸಚಿವ ಮಧು ಬಂಗಾರಪ್ಪ ಕರೆ

ಮೈಸೂರು, ಸೆಪ್ಟೆಂಬರ್ 26,2026 (www.justkannada.in): ನಾರಾಯಣ ಗುರುಗಳು ಇಡೀ ಮನು ಕುಲಕ್ಕೆ...