ಬಾಗಲಕೋಟೆ,ಮೇ,14,2025 (www.justkannada.in): ಪಾಕಿಸ್ತಾನ ಪದೇ ಪದೇ ಕಾಲ್ಕೆರೆದು ಚೇಷ್ಟೆ ಮಾಡುತ್ತಲೇ ಇದೆ. ಹೀಗಾಗಿ ಮೊನ್ನೆ ಪಾಕಿಸ್ತಾನಕ್ಕೆ ಚೆನ್ನಾಗಿ ಬುದ್ದಿ ಕಲಿಸಬೇಕಿತ್ತು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ-ಪಾಕ್ ನಡುವೆ ಕದನ ವಿರಾಮ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ, ಲಾಲ್ ಬಹದ್ದೂರ್ ಶಾಸ್ತ್ರಿ ನೆಹರು ಕಾಲದಲ್ಲಿ ಯುದ್ದ ಆಯ್ತು. ಕಳೆದ ಬಾರಿ ಸರ್ಜಿಕಲ್ ಸ್ಟ್ರೈಕ್ ಆಯ್ತು. ಆದರೂ ಪಾಕ್ ಪದೇ ಪದೇ ಚೇಷ್ಟ ಮಾಡುತ್ತಲೇ ಇದೆ. ಮೊನ್ನೆ ಪಾಕ್ ಗೆ ಚೆನ್ನಾಗಿ ಬುದ್ದಿ ಕಲಿಸಬೇಕಿತ್ತು ಇನ್ನೊಂದು ಬಾರಿ ನಮ್ಮ ತಂಟೆಗೆ ಬಾರದ ಹಾಗೆ ಮಾಡಬೇಕಿತ್ತು.
ಈ ವಿಚಾರದಲ್ಲಿ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದರು. ಇಂತಹ ವೇಳೆ ಪಾಕ್ ಅನ್ನು ಬಗ್ಗು ಬಡಿಯುವ ಕೆಲಸ ಮಾಡಬಬೇಕಿತ್ತು. ಆದರೆ ಡೊನಾಲ್ಡ್ ಟ್ರಂಪ್ ಅನವಶ್ಯವಾಗಿ ಮಧ್ಯಪ್ರವೇಶ ಮಾಡಿದರು. ಇದರಿಂದ ನಮಗೆ ಮುಜುಗರ ಆಯಿತು ಎಂದು ರಾಮಲಿಂಗರೆಡ್ಡಿ ಹೇಳಿದರು.
Key words: Pakistan, taught, lesson , Minister, Ramalingareddy
The post ಪದೇ ಪದೇ ಚೇಷ್ಟೆ ಮಾಡುತ್ತಿರುವ ಪಾಕ್ ಗೆ ಚೆನ್ನಾಗಿ ಬುದ್ದಿ ಕಲಿಸಬೇಕಿತ್ತು- ಸಚಿವ ರಾಮಲಿಂಗರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.