ಬೆಂಗಳೂರು,ಜೂನ್ ,27,2025 (www.justkannada.in) : ಸಚಿವ ಕೆ.ಎನ್ ರಾಜಣ್ಣ ಅವರ ಪವರ್ ಸೆಂಟರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಸವರಾಜ ರಾಯರೆಡ್ಡಿ, ಪವರ್ ಸೆಂಟರ್ ಜಾಸ್ತಿ ಆಗಿರೋದು ನಿಜ. ಆದರೆ ಸಿಎಂ ಸಿದ್ದರಾಮಯ್ಯ ವೀಕ್ ಸಿಎಂ ಅಲ್ಲ ಎಂದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ, ಸಿಎಂ ಸಿದ್ದರಾಮಯ್ಯನವರಿಗೂ ವಯಸ್ಸಾಯಿತು ಸಿದ್ದರಾಮಯ್ಯ ವೀಕ್ ಚೀಫ್ ಮಿನಿಸ್ಟರ್ ಅಲ್ಲ. ಕೆಲವೊಮ್ಮೆ ಬೇರೆ ಪವರ್ ಸೆಂಟರ್ ಮಾತು ಕೇಳಬೇಕು. ಅದನ್ನೇ ಸಿಎಂಗೆ ಹೇಳಿದ್ದೇವೆ. ನಾವೆಲ್ಲಾ ಸಿದ್ದರಾಮಯ್ಯರನ್ನ ಸ್ಟ್ರಾಂಗ್ ಮಾಡುತ್ತೇವೆ. ಇನ್ನು 2 ವರ್ಷ 11 ತಿಂಗಳು ಸಿದ್ದರಾಮಯ್ಯ ಅವರೇ ಸಿಎಂ ಎಂದರು.
ಸೆಪ್ಟಂಬರ್ ನಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಕುರಿತು ಸಚಿವ ಕೆ.ಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸವರಾಜ ರಾಯರೆಡ್ಡಿ, ಈ ಬಗ್ಗೆ ರಾಜಣ್ಣರನ್ನೇ ಕೇಳಬೇಕು. ಸಿದ್ದರಾಮಯ್ಯರಿಗೆ ಇರುವಷ್ಟು ಜನ ಬೆಂಬಲ ಯಾರಿಗೂ ಇಲ್ಲ. ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದಿಲ್ಲ ಎಂದರು.
Key words: power center, Siddaramaiah,not ,Weak CM, Basavaraja Rayareddy
The post ಪವರ್ ಸೆಂಟರ್ ಜಾಸ್ತಿ ಆಗಿರೋದು ನಿಜ: ಆದ್ರೆ ಸಿದ್ದರಾಮಯ್ಯ ‘ವೀಕ್ ಸಿಎಂ’ ಅಲ್ಲ- ಬಸವರಾಜ ರಾಯರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.