ಬೆಂಗಳೂರು,ಏಪ್ರಿಲ್,23,2025 (www.justkannada.in): ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಲೇ ಸರ್ವಪಕ್ಷ ಸಭೆ ಕರೆಯುವಂತೆ ಪ್ರಧಾನಿ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಘಟನೆ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಇದು ಎಲ್ಲರೂ ಒಂದಾಗಿರುವ ಸಮಯ. ಈಗ ಭಿನ್ನಾಭಿಪ್ರಾಯ ಮೂಡಿಸುವ ಸಮಯವಲ್ಲ. ಕೂಡಲೇ ಸರ್ವ ಪಕ್ಷ ಸಭೆ ಕರೆಯಿರಿ ಎಂದು ಆಗ್ರಹಿಸಿದ್ದಾರೆ.
ಬೇಸಿಗೆ ಕಾಲ ಪ್ರಾರಂಭ ಆರಂಭ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪ್ರವಾಸಿಗರಿಂದಲೇ ಅಲ್ಲಿಯ ಜನ ಜೀವನ ನಡೆಯಬೇಕು. ಓಮರ್ ಅಬ್ದುಲ್ಲಾ ಕೂಡ ಇದನ್ನು ಹೇಳಿದ್ದಾರೆ. ಇಂತಹ ಘಟನೆಗಳಿಂದ ಆಗುವ ಪರಿಣಾಮಗಳ ಬಗ್ಗೆ ಕೂಡ ಓಮರ್ ಅಬ್ದುಲ್ಲಾ ಮಾತಾಡಿದ್ದಾರೆ. ರಾಜ್ಯದ ಪ್ರಭುತ್ವದ ಮೇಲಿನ ನೇರ ದಾಳಿ ಇದು ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಎಲ್ಲರೂ ಕೂಡ ಒಂದಾಗಿ ಪರಿಸ್ಥಿತಿಯನ್ನು ಎದುರಿಸಬೇಕಾದ ಸಮಯ ಇದಾಗಿದೆ. ಕಾಶ್ಮೀರ ಪಹಲ್ಗಾಮ್ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಸಾವನ್ನಪ್ಪಿದ್ದಾರೆ. ಅವರ ಪತ್ನಿಯರ ಜೊತೆಗೆ ಮಾತಾಡಿ ಸಾಂತ್ವನ ಹೇಳಿದ್ದೇನೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. .
ಭದ್ರತಾ ವೈಪಲ್ಯ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, , ಈ ಬಗ್ಗೆ ನಾನು ಮಾತನಾಡುವುದಿಲ್ಲ. ನಾವು ಶಾಕ್ ಸಂದರ್ಭದಲ್ಲಿದ್ದೇವೆ. ನಾಳೆ ಇದರ ಬಗ್ಗೆ ಚರ್ಚಿಸುತ್ತೇವೆ ಎಂದು ತಿಳಿಸಿದರು.
Key words: Pahalgam, terrorist, attack. Mallikarjuna Kharge, all -party meeting
The post ಪಹಲ್ಗಾಮ್ ಉಗ್ರರ ದಾಳಿ: ಕೂಡಲೇ ಸರ್ವಪಕ್ಷ ಸಭೆ ಕರೆಯಲು ಮಲ್ಲಿಕಾರ್ಜುನ ಖರ್ಗೆ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.