ಬೆಂಗಳೂರು, ಏಪ್ರಿಲ್,26,2025 (www.justkannada.in): ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನ ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ದಾಳಿ ಸಂಬಂಧ ಇದಕ್ಕೆ ಭದ್ರತಾ ವೈಫಲ್ಯ ಕಾರಣ ಎಂದು ಸ್ವತಃ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಭದ್ರತಾ ವೈಪಲ್ಯ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದ್ದು, ಆ ಕಾರಣಕ್ಕಾಗಿ ಸಭೆ ಕರೆದಿದ್ದೇವೆ. ಇನ್ಮುಂದೆ ಈ ರೀತಿ ಆಗಲ್ಲ ಎಂದು ಅಮಿತ್ ಶಾ ಅವರೇ ಹೇಳಿದ್ದಾರೆ ಎಂದರು.
ಅಮಿತ್ ಶಾ ಅವರಿಗೆ ನಾವು ಹೇಳಿದ್ದೇವೆ .ಇದನ್ನು ಚಾಲೆಂಜ್ ಆಗಿ ತೆಗೆದುಕೊಳ್ಳಬೇಕು. ಎಲ್ಲವನ್ನೂ ವ್ಯವಸ್ಥೆ ಮಾಡಬೇಕಿತ್ತು. ನೀವು ವ್ಯವಸ್ಥೆ ಮಾಡದೆ ಇರುವುದರಿಂದಲೇ ಈ ಸ್ಥಿತಿಗೆ ಬಂದಿರೋದು ಎಂದು ತಿಳಿಸಿದ್ದೇವೆ ಎಂದರು.
ಮೂರು ಹಂತಗಳ ಭದ್ರತೆ ಇದ್ದರೂ ಪಹಲ್ಗಾಮ್ ದಾಳಿಯ ವೇಳೆ ಜನರಿಗೆ ರಕ್ಷಣೆ ಕೊಡಲು ಆಗಲಿಲ್ಲ . ಏನೇ ಆದರೂ ಕೂಡ ದೇಶದ ದೃಷ್ಟಿಯಿಂದ ದೇಶದ ಒಗ್ಗಟ್ಟಿನ ದೃಷ್ಟಿಯಿಂದ ನಾವೆಲ್ಲರೂ ಕೂಡ ಒಂದಾಗಿ ರಕ್ಷಣೆ ಮಾಡೋಣ ಅಂತ ತಿಳಿಸಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
Key words: Pahalgam, terror attack, Central government, security lapse, Mallikarjun Kharge
The post ಪಹಲ್ಗಾಮ್ ಉಗ್ರರ ದಾಳಿ: ಭದ್ರತಾ ವೈಪಲ್ಯ ಅಂತಾ ಸ್ವತಃ ಕೇಂದ್ರ ಒಪ್ಪಿಕೊಂಡಿದೆ- ಮಲ್ಲಿಕಾರ್ಜುನ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.