ನವದೆಹಲಿ,ಏಪ್ರಿಲ್,28,2025 (www.justkannada.in): ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ವಿರುದ್ದ ಹಲವು ಕಠಿಣ ಕ್ರಮಗಳನ್ನ ಕೈಗೊಂಡಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನೀಡಿದೆ.
ಹೌದು, ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್ ಗಳನ್ನು ಬಂದ್ ಮಾಡಿ ಕೇಂದ್ರ ಗೃಹ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಸುಳ್ಳು ಸುದ್ದಿ, ತಪ್ಪು ಮಾಹಿತಿ ನೀಡಿ ಜನರ ಹಾದಿ ತಪ್ಪಿಸುತ್ತಿದ್ದ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ ಗಳನ್ನು ಭಾರತ ನಿಷೇಧಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯವನ್ನು ಹರಡಿದ್ದಕ್ಕಾಗಿ ಒಟ್ಟು 63 ಮಿಲಿಯನ್ ಚಂದಾದಾರರನ್ನು ಹೊಂದಿರುವ ಹದಿನಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ ಗಳನ್ನ ಬ್ಯಾನ್ ಮಾಡಿದೆ.
ನಿಷೇಧಿತ ಪ್ಲಾಟ್ ಫಾರ್ಮ್ ಗಳಲ್ಲಿ ಡಾನ್, ಸಮಾ ಟಿವಿ, ಎಆರ್ ವೈ ನ್ಯೂಸ್, ಬೋಲ್ ನ್ಯೂಸ್, ರಾಫ್ತಾರ್, ಜಿಯೋ ನ್ಯೂಸ್ ಮತ್ತು ಸುನೋ ನ್ಯೂಸ್ ಸುದ್ದಿ ಸಂಸ್ಥೆಗಳ ಯೂಟ್ಯೂಬ್ ಚಾನೆಲ್ ಗಳು ಸೇರಿವೆ. ಪತ್ರಕರ್ತರಾದ ಇರ್ಷಾದ್ ಭಟ್ಟಿ, ಅಸ್ಮಾ ಶಿರಾಜಿ, ಉಮರ್ ಚೀಮಾ ಮತ್ತು ಮುನೀಬ್ ಫಾರೂಕ್ ಅವರ ಯೂಟ್ಯೂಬ್ ಚಾನೆಲ್ ಗಳನ್ನು ಸಹ ನಿಷೇಧಿಸಲಾಗಿದೆ. ಪಾಕಿಸ್ತಾನ್ ರೆಫರೆನ್ಸ್, ಸಮಾ ಸ್ಪೋರ್ಟ್ಸ್, ಉಜೈರ್ ಕ್ರಿಕೆಟ್ ಮತ್ತು ರಝಿ ನಾಮಾ ಸೇರಿದಂತೆ ಇತರ ಹ್ಯಾಂಡಲ್ಗಳನ್ನು ನಿಷೇಧಿಸಲಾಗಿದೆ.
Key words: Central government, bans, 16 Pakistani , YouTube channels
The post ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್ ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.