ವಿಜಯಪುರ,ಏಪ್ರಿಲ್,29,2025 (www.justkannada.in): ಪಹ್ಗಾಮ್ ನಲ್ಲಿ ಉಗ್ರರ ದಾಳಿ ಸಂಬಂಧ ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು ಈ ಘಟನೆ ಖಂಡಿಸಬೇಕು. ಪಾಕಿಸ್ತಾನವನ್ನ ಸದೆಬಡಿಯಬೇಕು, ಯುದ್ದವಾಗಲೇಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನ ಮೂಲೆಗುಂಪು ಮಾಡಬೇಕು. ಜಮ್ಮು ಕಾಶ್ಮೀರದ ಜನರು ಭಾರತದ ಪರ ಶಾಂತಿಯ ಕಡೆ ಇದ್ದಾರೆ. ಚೀನಾ ಅಮೆರಿಕಾ ಸೇರಿ ಎಲ್ಲರೂ ಸಹ ಉಗ್ರವಾದ ಖಂಡಿಸಬೇಕು. ಪಾಕ್ ಒಂದು ದರಿದ್ರ ದೇಶ ಅಲ್ಲಿಯ ಪರಿಸ್ಥಿತಿ ಹೀನಾಯವಾಗಿದೆ. ಯುದ್ದಕ್ಕೆ ಹೆದರಿ ಸೈನಿಕರು ಅಧಿಕಾರಿಗಳು ಓಡಿ ಹೋಗಿದ್ದಾರೆ ಎಂದು ಲೇವಡಿ ಮಾಡಿದರು.
ಆಯಕಟ್ಟಿನ ಜಾಗದಲ್ಲಿ ಸೇನೆ ನಿಯೋಜಿಸಬೇಕು ಪಾಕ್ ವಿರುದ್ದ ಯುದ್ದವಾಗಲೇಬೇಕು ತಕ್ಕ ಶಾಸ್ತಿ ಆಗಬೇಕು. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಕೈಗೊಂಡ ರೀತಿ ಕ್ರಮ ಆಗಬೇಕು ಮೋದಿ ಪರ ಎಲ್ಲಾ ರಾಜಕೀಯ ಪಕ್ಷಗಳು ಇವೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.
Key words: Pahalgam, terrorist attack, Pakistan, war, Minister, M.B. Patil
The post ಪಾಕಿಸ್ತಾನವನ್ನ ಸದೆಬಡಿಯಬೇಕು, ಯುದ್ದವಾಗಲೇಬೇಕು- ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.