23
April, 2026

A News 365Times Venture

23
Thursday
April, 2026

A News 365Times Venture

ಪೆಟ್ರೋಲ್ ಬಂಕ್ ಕಾರ್ಮಿಕನ ಮಗನ ಅದ್ಭುತ ಸಾಧನೆ: SSLCಯಲ್ಲಿ 611 ಅಂಕ, ಪ್ರೇರಣಾದಾಯಕ ಕಥೆ

Date:

ಮೈಸೂರು,ಏಪ್ರಿಲ್,23,2026 (www.justkannada.in):  ಪರಿಶ್ರಮ, ಶ್ರಮ ಮತ್ತು ದೃಢನಿಶ್ಚಯ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ರಾಹುಲ್. ಯು ವಿದ್ಯಾರ್ಥಿಯ ಸಾಧನೆ ಉತ್ತಮ ಉದಾಹರಣೆಯಾಗಿದೆ.

ನಗರದ ಆದರ್ಶ ವಿದ್ಯಾಲಯ, ಜಾಕಿ ಕ್ವಾಟ್ರಸ್‌ ನ ವಿದ್ಯಾರ್ಥಿಯಾದ ರಾಹುಲ್ ಯು ಅವರು SSLC 2026 ಪರೀಕ್ಷೆಯಲ್ಲಿ 611 ಅಂಕಗಳನ್ನು ಪಡೆದು ಎಲ್ಲ ವಿಷಯಗಳಲ್ಲಿ A+ ಗ್ರೇಡ್ ಗಳಿಸಿ ಗಮನ ಸೆಳೆದಿದ್ದಾರೆ.

ರಾಹುಲ್. ಯು ಅವರ ತಂದೆ ಉದಯ ಅವರು ಕುವೆಂಪು ನಗರದಲ್ಲಿರುವ ಪೆಟ್ರೋಲ್ ಬಂಕ್‌ ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಶ್ರುತಿ ಗೃಹಿಣಿಯಾಗಿದ್ದಾರೆ. ಸಾದಾ ಕುಟುಂಬದ ಹಿನ್ನೆಲೆಯಲ್ಲಿದ್ದರೂ, ಮಗನ ಶಿಕ್ಷಣದ ಬಗ್ಗೆ ತಂದೆ-ತಾಯಿಯ ಅಪಾರ ಶ್ರಮ ಮತ್ತು ಬೆಂಬಲವೇ ಈ ಸಾಧನೆಗೆ ಕಾರಣವಾಗಿದೆ.

ಎಲ್ಲಾ ವಿಷಯಗಳಲ್ಲಿಯೂ ಉತ್ತಮ ಅಂಕಗಳನ್ನು ಗಳಿಸಿರುವ ರಾಹುಲ್, ತನ್ನ ಸಾಧನೆಯ ಹಿಂದೆ ಶಿಕ್ಷಕರ ಮಾರ್ಗದರ್ಶನ ಮತ್ತು ಕುಟುಂಬದ ಪ್ರೋತ್ಸಾಹವೇ ಪ್ರಮುಖ ಎಂದು ಹೇಳಿದ್ದಾನೆ.

ಪ್ರೇರಣಾ ಸಂದೇಶ:

ಆರ್ಥಿಕ ಪರಿಸ್ಥಿತಿ ಎಷ್ಟು ಸವಾಲಿನದ್ದಾಗಿದ್ದರೂ, ಕಠಿಣ ಪರಿಶ್ರಮ ಮತ್ತು ದೃಢ ಮನಸ್ಸು ಇದ್ದರೆ ಯಶಸ್ಸು ಖಚಿತ ಎಂಬುದನ್ನು ರಾಹುಲ್. ಯು ಸಾಬೀತುಪಡಿಸಿದ್ದಾನೆ. ಇಂತಹ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಿದ್ದು, ಇತರರಿಗೆ ಪ್ರೇರಣೆಯಾಗುತ್ತಾರೆ.

ENGLISH SUMMARY..

Petrol Bunk Worker’s Son Scores 611 in SSLC – An Inspiring Achievement

Mysuru: Rahul U, a student of Adarsha Vidyalaya, Jockey Quarters, has scored 611 marks in SSLC 2026, securing A+ in all subjects.

His father Uday works at a petrol bunk in Kuvempunagar, while his mother Shruti is a homemaker. Despite a modest background, Rahul’s hard work, along with strong support from his parents and teachers, led to this success.

Inspiration: His achievement proves that dedication and determination can overcome any challenge.

Key words: Mysore, Petrol Bunk, Worker’s, Son, SSLC, Inspiring Achievement

The post ಪೆಟ್ರೋಲ್ ಬಂಕ್ ಕಾರ್ಮಿಕನ ಮಗನ ಅದ್ಭುತ ಸಾಧನೆ: SSLCಯಲ್ಲಿ 611 ಅಂಕ, ಪ್ರೇರಣಾದಾಯಕ ಕಥೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜಮೀರ್ ಜೆಡಿಎಸ್ ಸೇರ್ಪಡೆ ವದಂತಿ ವಿಚಾರ:  ಕೇಂದ್ರ ಸಚಿವ HDK ಗರಂ

ಹಾಸನ,ಏಪ್ರಿಲ್,23,2026 (www.justkannada.in):  ಸಚಿವ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಸೇರ್ಪಡೆಯಾಗುತ್ತಾರೆಯೇ ಎಂಬ...

SSLC ಫಲಿತಾಂಶ: ಪ್ರಥಮ ದರ್ಜೆಯಲ್ಲಿ ಪಾಸ್ ಆದ್ರೂ ನೇಣಿಗೆ ಶರಣಾದ ಬಾಲಕಿ..!

ಮೈಸೂರು,ಏಪ್ರಿಲ್,23,2026 (www.justkannada.in) : ನಂಜನಗೂಡು ನಗರದಲ್ಲಿರುವ ಶ್ರೀ ಗುರುಮಲ್ಲೇಶ್ವರ ಖಾಸಗಿ ಶಾಲೆಯಲ್ಲಿ...

ಮೈಸೂರಿನ ಎಲ್ಲಾ ಕೆರೆಗಳ ಸರ್ವೆ ನಡೆಸಿ‌, ಒತ್ತುವರಿ ತೆರವಿಗೆ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸೂಚನೆ

ಮೈಸೂರು,ಏಪ್ರಿಲ್,23,2026 (www.justkannada.in): ಮೈಸೂರಿನ ಎಲ್ಲಾ ಕೆರೆಗಳ ಸರ್ವೆ ನಡೆಸಿ‌, ಒತ್ತುವರಿ ತೆರವುಗೊಳಿಸುವಂತೆ...

ಸಿಎಂ ಅಸಹಾಯಕರು ಎನ್ನುವವರೇ ಅಸಹಾಯಕರು- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಏಪ್ರಿಲ್,23,2026 (www.justkannada.in):  ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ...