ಮೈಸೂರು,ಜೂನ್,2,2025 (www.justkannada.in): ಪೋಷಕರ ಮೇಲಿನ ಪ್ರೀತಿ, ಸಾಮರಸ್ಯ ಮತ್ತು ಕುಟುಂಬ ಬಾಂಧವ್ಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರಸ್ತುತ ಪೀಳಿಗೆಗೆ ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್ ಕರೆ ನೀಡಿದರು.
ನಿವೃತ್ತ ಪ್ರಾಧ್ಯಾಪಕಿ ಪ್ರೊ.ಎನ್.ಉಷಾರಾಣಿ, ಅವರ ಮಾತೃಶ್ರೀ ದಿ. ಬಿ.ಎ.ಸೌಮ್ಯನಾಯಕಿ ಸ್ಮರಣಾರ್ಥ ಒಂದು ವಿಶಿಷ್ಟವಾದ ಮತ್ತು ಅರ್ಥಪೂರ್ಣ ಸಂಗೀತ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕ್ರಾರ್ಯಕ್ರಮವನ್ನು ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್, ಹಿರಿಯ ಸಮಾಜಶಾಸ್ತ್ರಜ್ಞೆ ಪ್ರೊ.ಆರ್.ಇಂದಿರಾ ಹಾಗೂ ಖ್ಯಾತ ಪತ್ರಕರ್ತ ಈಶ್ವರ ದೈತೋಟ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ.ಪದ್ಮಾ ಶೇಖರ್ ಅವರು, ಕುಟುಂಬದಲ್ಲಿನ ಪ್ರೀತಿ ಮತ್ತು ಜೀವನೋತ್ಸಹ ಬದುಕಿಗೆ ಸುಗಮ. ಪ್ರೀತಿಯೇ ಕುಟುಂಬವನ್ನು ಬಂಧಿಸುವ ಅಂಶವಾದ್ದರಿಂದ ಕಳೆದ 47 ವರ್ಷಗಳಿಂದ ತಾವು ಸಂತೋಷದಿಂದ ದಾಂಪತ್ಯ ಜೀವನ ನಡೆಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊ.ಆರ್.ಇಂದಿರಾ ಅವರು ಮಾತನಾಡಿ, ಇಂದು ವಿದ್ಯಾರ್ಥಿಗಳ ಮತ್ತು ಕಾಲೇಜು ಪರಿಸರದ ನಡುವೆ ಭಾವನಾತ್ಮಕ ಸಂಬಂಧದ ಕೊರತೆಯಿರುವುದು ಗಂಭೀರ ಸವಾಲನ್ನ ಒಡ್ಡಿದೆ. ಜೀವನದ ಉದ್ದೇಶ ಒಳ್ಳೆಯ ಅರ್ಥಪೂರ್ಣ ಬದುಕನ್ನು ನಡೆಸುವುದಾದರೆ ಭಾವನೆಗಳು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ಪ್ರೊ.ಎನ್.ಉಷಾರಾಣಿ ಅವರು, ಮನೆಯೇ ಹೆಣ್ಣುಮಕ್ಕಳ ಸಬಲೀಕರಣದ ಕೇಂದ್ರಬಿಂದು ಎಂದು ತಮ್ಮ ಪ್ರಾಸ್ತವಿಕ ನುಡಿಯಲ್ಲಿ ತಿಳಿಸಿದರು.
ಸಂಗೀತ ವಿದುಷಿ ಡಾ.ಸುಕನ್ಯಾ ಪ್ರಭಾಕರ್ ಮತ್ತು ಅವರ ತಂಡವು ಕರ್ನಾಟಕ ಶಾಸ್ತ್ರೀಯ ಸಂಗೀತದಿಂದ ಪ್ರೇಕ್ಷಕರನ್ನ ರಂಜಿಸಿದರು.
ಪ್ರೊ. ಉಷಾರಾಣಿ ಅ ವರ ಸಹೋದರಿ ಎನ್.ನಾಗರತ್ನ, ಹಿರಿಯರ ಪತ್ರಕರ್ತರುಗಳಾದ ಈಶ್ವರ ದೈತೋಟ, ಅಂಶಿ ಪ್ರಸನ್ನಕುಮಾರ್, ಕೂಡ್ಲಿ ಗುರುರಾಜ್, ಮಾಧ್ಯಮ ಮಿತ್ರರು, ಪ್ರಾಧ್ಯಾಪಕರು ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಸಾಧನಾ ಮತ್ತು ಸಾತ್ವಿಕ್ ಕಾರ್ಯಕ್ರಮ ನಿರೂಪಿಸಿದರು.
Key words: Mysore, musical, tribute, program, retired professor, N. Usharani
The post ಪೋಷಕರ ಮೇಲಿನ ಪ್ರೀತಿ, ಸಾಮರಸ್ಯ ಕುಟುಂಬ ಬಾಂಧವ್ಯದ ಮೌಲ್ಯ ಅರ್ಥಮಾಡಿಕೊಳ್ಳಿ – ಪ್ರೊ. ಪದ್ಮಾ ಶೇಖರ್ ಕರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.