10
July, 2025

A News 365Times Venture

10
Thursday
July, 2025

A News 365Times Venture

ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಫೈರಿಂಗ್ ಮಾಡಿದ ಮಾಜಿ ಎಂಎಲ್​ಸಿ ಸಂಬಂಧಿ

Date:

ಚಿಕ್ಕಬಳ್ಳಾಪುರ, ಏಪ್ರಿಲ್ ,23,2025 (www.justkannada.in):  ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಾಜಿ ಎಂಎಲ್​ಸಿ ವೈ.ಎ.ನಾರಾಯಣಸ್ವಾಮಿ  ಸಂಬಂಧಿಯೊಬ್ಬರು ಗುಂಡಿನ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಮಾಜಿ ಎಂಎಲ್​ಸಿ ವೈ.ಎ.ನಾರಾಯಣಸ್ವಾಮಿ ಸಂಬಂಧಿ ಸಕಲೇಶಕುಮಾರ್ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ತಗುಲಿ ಚಿಕನ್ ರವಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಲ್ಲು ಕ್ವಾರಿ ಕ್ರಷರ್ ​ಗೆ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರು. ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾಜಿ ಎಂಎಲ್​ಸಿ ವೈ.ಎ.ನಾರಾಯಣಸ್ವಾಮಿ ಸಂಬಂಧಿ ಸಕಲೇಶಕುಮಾರ್ ಪ್ರತಿಭಟಿಸುತ್ತಿದ್ದವರ ಮೇಲೆ  ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಗುಂಡಿನ ದಾಳಿಯಿಂದ ಗಾಯಗೊಂಡ ರವಿ ಎಂಬುವವರನ್ನ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Key words: Former MLC,  relative, fires, protesters

The post ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಫೈರಿಂಗ್ ಮಾಡಿದ ಮಾಜಿ ಎಂಎಲ್​ಸಿ ಸಂಬಂಧಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಡಬಲ್ ಮರ್ಡರ್: ತಮ್ಮನಿಂದಲೇ ಅಣ್ಣ ಮತ್ತು ತಂದೆಯ ಹತ್ಯೆ

ಹಾಸನ ,ಜುಲೈ,10,2025 (www.justkannada.in):  ವ್ಯಕ್ತಿಯೊಬ್ಬ ಮಚ್ಚಿನಿಂದ ಕೊಚ್ಚಿ ತನ್ನ ತಂದೆ ಮತ್ತು...

ಪುತ್ರ ಆತ್ಮಹತ್ಯೆಗೆ ಶರಣು: ವಿಚಾರ ತಿಳಿದು ತಂದೆ ಹೃದಯಾಘಾತದಿಂದ ಸಾವು

ಯಾದಗಿರಿ,ಜುಲೈ,10,2025 (www.justkannada.in):  ಪುತ್ರ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಚಾರ ತಿಳಿದು ತಂದೆಯೂ...

JDS ತೊರೆದು ಕಾಂಗ್ರೆಸ್ ಸೇರ್ತಾರಾ ಶಾಸಕ ಜಿ.ಟಿ ದೇವೇಗೌಡ..?  ಈ ಬಗ್ಗೆ ಸ್ವತಃ ಅವರ ಪ್ರತಿಕ್ರಿಯೆ ಹೀಗಿತ್ತು..!

ಮೈಸೂರು, ಜುಲೈ,9,2025 (www.justkannada.in):  ನಾನು ಜೆಡಿಎಸ್ ನಲ್ಲಿ ಇರಬೇಕಾ ಬೇಡವಾ?  ಬಿಜೆಪಿಗೆ...

ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ: ಸಿಎಂ, ಕಾನೂನು ಇಲಾಖೆ ಜೊತೆ ಚರ್ಚೆ- ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು,ಜುಲೈ,9,2025 (www.justkannada.in): ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ ನಡೆಸಿದ್ದು ಕಾನೂನಿನ...