ಕಲಬುರಗಿ,ಮೇ,10,2025 (www.justkannada.in): ದೇಶಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ದನಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಹೇಳಿದ್ರೆ ಸೂಸೈಡ್ ಬಾಂಬ್ ಹಾಕಿಕೊಂಡು ಪಾಕಿಸ್ತಾನಕ್ಕೆ ಹೋಗಲು ಸಿದ್ದ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪುನರುಚ್ಚಾರ ಮಾಡಿದ್ದಾರೆ.
ಕಲಬುರಗಿಯಲ್ಲಿ ಇಂದು ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಅಪರೇಷನ್ ಸಿಂಧೂರ್ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಪಾಕ್ ವಿರುದ್ದ ಭಾರತ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ನನ್ನ ದೇಶಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ದನಿದ್ದೇನೆ. ಪ್ರಧಾನಿ ಮೋದಿ ಹೇಳಿದ್ರ ಸೂಸೈಡ್ ಬಾಂಬ್ ಹಾಕಿಕೊಂಡು ಪಾಕಿಸ್ತಾನಕ್ಕೆ ಹೋಗಲು ಸಿದ್ದ ಎಂದರು.
ಪಾಕ್ ಒಂದು ಖಾಲಿ ಡಬ್ಬದ್ದಂತೆ. ಠುಸ್ ಪಟಾಕಿಯಂತಿದೆ. ನಾವು ಮನಸ್ಸು ಮಾಡಿದರೇ ಎರಡೇ ದಿನಕ್ಕೆ ಪಾಕಿಸ್ತಾನವನ್ನ ನಿರ್ನಾಮ ಮಾಡಬಹುದು ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.
Key words: Minister, Jameer, ready, suicide bomb, Pakistan
The post ಪ್ರಧಾನಿ ಹೇಳಿದ್ರೆ ಸೂಸೈಡ್ ಬಾಂಬ್ ಹಾಕಿಕೊಂಡು ಪಾಕ್ ಗೆ ಹೋಗಲು ಸಿದ್ದ- ಸಚಿವ ಜಮೀರ್ ಪುನರುಚ್ಚಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.