ಚಾಮರಾಜನಗರ,ಜೂನ್,2,2025 (www.justkannada.in): ಬಂಡೀಪುರ ಅಭಯಾರಣ್ಯಕ್ಕೆ ಅತಿಕ್ರಮಣ ಪ್ರವೇಶ ಮಾಡಿದ ಇಬ್ಬರಿಗೆ ಅರಣ್ಯ ಇಲಾಖೆ 25 ಸಾವಿರ ರೂ ದಂಡ ವಿಧಿಸಿದೆ.
ಬೆಂಗಳೂರು ಮೂಲದ ಪಲ್ಲವಿ ಮತ್ತು ಘೋಷ್ ಎಂಬುವವರಿಗೆ ದಂಡ ವಿಧಿಸಲಾಗಿದೆ. ಇಬ್ಬರು ಕಾಡಿಗೆ ಅತಿಕ್ರಮ ಪ್ರವೇಶ ಮಾಡಿ ಪೋಟೋ ತೆಗೆಯುತ್ತಿದ್ದರು ಎನ್ನಲಾಗಿದೆ. ಬಂಡೀಪುರದ ಮಂಗಲ ರಸ್ತೆ ಸಮೀಪ ಫೋಟೋ ಶೂಟ್ ಮಾಡುತ್ತಿದ್ದರು.
ಈ ವೇಳೆ ಇದನ್ನು ವಿಡಿಯೋ ಮಾಡಿ ಬಂಡೀಪುರ ಎ.ಸಿ.ಎಫ್.ನವೀನ್ ಕುಮಾರ್ ಗೆ ಪ್ರವಾಸಿಗರು ಮಾಹಿತಿ ತಿಳಿಸಿದ್ದರು. ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಪಲ್ಲವಿ ಮತ್ತು ಘೋಷ್ ಅವರನ್ನು ಕರೆಸಿ ಮುಚ್ಚಳಿಕೆ ಪತ್ರ ಬರೆಸಿ 25 ಸಾವಿರ ರೂ. ದಂಡ ವಿಧಿಸಿದ್ದಾರೆ.
Key words: Illegal entry, Bandipur, photo shoot, fined, Rs. 25 thousand
The post ಬಂಡೀಪುರಕ್ಕೆ ಅಕ್ರಮ ಪ್ರವೇಶ, ಫೋಟೋ ಶೂಟ್ : ಇಬ್ಬರಿಗೆ 25 ಸಾವಿರ ರೂ. ದಂಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.