18
July, 2025

A News 365Times Venture

18
Friday
July, 2025

A News 365Times Venture

ಬಸ್ ಚಾಲಕನಿಗೆ ಹೃದಯಾಘಾತ: ಪಾದಚಾರಿ ಮಹಿಳೆಗೆ ಡಿಕ್ಕಿ: ಇಬ್ಬರೂ ಸಾವು

Date:

ಮೈಸೂರು,ಏಪ್ರಿಲ್,2,2025 (www.justkannada.in): ಚಲಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕನಿಗೆ ಹೃದಯಾಘಾತವಾಗಿ ಬಸ್  ಪಾದಚಾರಿ ಮಹಿಳೆಗೆ ಡಿಕ್ಕಿಯಾಗಿದ್ದು, ಈ ವೇಳೆ ಪಾದಚಾರಿ ಮಹಿಳೆ ಮತ್ತು ಬಸ್ ಚಾಲಕ ಇಬ್ಬರೂ ಸಾವನ್ನಪ್ಪಿರುವ ಘಟನೆ  ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಬಳಿ ನಡೆದಿದೆ.

ಹೊರಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಸೇವೆಸಲ್ಲಿಸುತ್ತಿದ್ದ ಮೈಸೂರು ಮೂಲದ ಚಾಲಕ ಸುನೀಲ್ ಕುಮಾರ್, ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಗ್ರಾಮದ ಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೆಎಸ್ ಆರ್ ಟಿಸಿ ಬಸ್ ಕೇರಳ ರಾಜ್ಯದ ಮಾನಂದವಾಡಿಯಿಂದ ಹೆಚ್.ಡಿ.ಕೋಟೆ ಬರುತ್ತಿತ್ತು. ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಬಳಿ ಬರುತ್ತಿದ್ದಂತೆ ಚಾಲಕನಿಗೆ ಹಠಾತ್ ಹೃದಯಾಘಾತವಾಗಿದ್ದು ಬಸ್ ಸ್ಟೇರಿಂಗ್ ಮೇಲೆ ಚಾಲಕ ಪ್ರಜ್ಣೆ ತಪ್ಪಿ ಮಲಗಿದ್ದು ಈ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಜಮೀನಿಗೆ ಬಸ್ ನುಗ್ಗಿದೆ. ಈ ಸಮಯದಲ್ಲಿ ಪಾದಾಚಾರಿ ಮಹಿಳೆ ಲಕ್ಷ್ಮಮ್ಮಗೆ ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿದ್ದಾರೆ.

ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಆರಂಭದಲ್ಲಿ ಚಾಲಕನಿಗೆ ಹೃದಯಾಘಾತವಾದ ವಿಷಯ ತಿಳಿಯದೆ ಚಾಲಕನ ಮೇಲೆ ಗ್ರಾಮಸ್ಥರು ಮುಗಿಬಿದ್ದರು. ಇನ್ನು  ಎರಡು ಮೃತದೇಹಗಳನ್ನು ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ಸ್ಥಳಾಂತರಿಸಿದ್ದಾರೆ.  ಈ ಕುರಿತು ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Bus driver,  heart attack, Bus accident, women, Death, Mysore

The post ಬಸ್ ಚಾಲಕನಿಗೆ ಹೃದಯಾಘಾತ: ಪಾದಚಾರಿ ಮಹಿಳೆಗೆ ಡಿಕ್ಕಿ: ಇಬ್ಬರೂ ಸಾವು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸತತ 8ನೇ ಬಾರಿಗೆ ದೇಶದ ‘ಸ್ವಚ್ಛ ನಗರಿ ಪಟ್ಟ ಅಲಂಕರಿಸಿದ ಇಂದೋರ್ : ಮೈಸೂರಿಗೆ ಎಷ್ಟನೇ ಸ್ಥಾನ?

ನವದೆಹಲಿ,ಜುಲೈ,17,2025 (www.justkannada.in): ಮಧ್ಯಪ್ರದೇಶದ ಇಂದೋರ್ ನಗರವು ಸತತ ಎಂಟನೇ ಬಾರಿಗೆ  ದೇಶದ...

ರಾಹುಲ್ ಗಾಂಧಿ ಯಾವ ನ್ಯಾಯ ಯೋಧ? ಸಿದ್ದು ಚಮಚಗಿರಿ ಮಾಡ್ತಿದ್ದಾರೆ- ಹೆಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು,ಜುಲೈ,17,2025 (www.justkannada.in): ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಅವರನ್ನ ನ್ಯಾಯಯೋಧ ಎಂದು...

ತಾಕತ್ ಇದ್ರೆ ಕಾರಜೋಳ ಅವರನ್ನೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಿಸಿಬಿಡಿ-ಬಿವೈವಿಗೆ ಸವಾಲೆಸೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,17,2025 (www.justkannada.in):  ತಾನು ಕೂತಿರುವ ಕುರ್ಚಿಯ ನಾಲ್ಕು ಕಾಲುಗಳನ್ನು ಭದ್ರವಾಗಿ ಇಟ್ಟುಕೊಳ್ಳಲಾಗದ...

ನಾಳೆ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ

ಮೈಸೂರು,ಜುಲೈ,17,2025 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 18 (ನಾಳೆ)ರಂದು ಮೈಸೂರು...