10
July, 2025

A News 365Times Venture

10
Thursday
July, 2025

A News 365Times Venture

ಬಹುಮುಖ ಪ್ರತಿಭೆಯ ಹಿರಿಯ ಪತ್ರಕರ್ತೆ ಛಾಯಾ ಶ್ರೀವತ್ಸ ಇನ್ನಿಲ್ಲ..

Date:

ಬೆಂಗಳೂರು, ಏ.14,2025: ಸ್ವತಂತ್ರ ಪತ್ರಕರ್ತರಾಗಿದ್ದ  ಛಾಯಾ ಶ್ರೀವತ್ಸ(78)ಇಂದು ಬೆಂಗಳೂರಿನಲ್ಲಿ ನಿಧನ. ಮೂಲತಃ ಮೈಸೂರಿನವರಾದ ಅವರು ಬಾಲಕಿಯಾಗಿದ್ದಾಗ ಅರಮನೆಯಲ್ಲಿ ರಾಜಕುಮಾರಿ ಗಾಯತ್ರಿದೇವಿಯವರ ಸಖಿಯಾಗಿದ್ದರು.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಿವಾಹದ ನಂತರ ಮುಂಬೈನಲ್ಲಿ ನೆಲಸಿದ್ದರು.ಎಂಬತ್ತರ ದಶಕದಲ್ಲಿ ಬಾಂಬೆ  ಆಕಾಶವಾಣಿ ಮತ್ತು ಹಲವು ಮ್ಯಾಗಝಿನ್ ಗಳಿಗೆ ಪ್ರಸಿದ್ಧ ಸಿನೆಮಾ ತಾರೆಯರ ಸಂದರ್ಶನ ಮಾಡಿದ್ದರು.

ಮುಂಬೈನ ಪ್ರತಿಷ್ಠಿತ ತಾಜಮಹಲ್ ಹೋಟೆಲ್ ನ ”  inhouse journal ”  ಸಂಪಾದಕರಾಗಿದ್ದರು. ಜಾಹಿರಾತು ಮತ್ತು ಮಾಡೆಲ್ಲಿಂಗ್ ನಲ್ಲಿಯೂ ಹೆಸರು ಮಾಡಿದ್ದರು. ಡೆಕ್ಕನ್  ಹೆರಾಲ್ಡ್  ನಲ್ಲಿ ಅವರ “ notes from new york “ ಅಂಕಣ ಜನಪ್ರಿಯವಾಗಿತ್ತು. BBC ಯ ಸೀರಿಯಲ್  ಒಂದಕ್ಕೆ ಅವರು ಸ್ಕ್ರಿಪ್ಟ್ ಬರೆದಿದ್ದರು.

ಬೆಂಗಳೂರಿನಲ್ಲಿ “ ಬ್ಲಾಸಂ ಸಿಟಿ”  ಎಂಬ ಮೊದಲ ಸಿಟಿ ಮ್ಯಾಗಝಿನ್ ಆರಂಭಿಸಿದ್ದರು. ಎಚ್.ಎಂ.ಟಿ. ಯಲ್ಲಿ public relations deputy general manager ಆಗಿದ್ದರು. ಇನ್ಫೋಸಿಟ್ ನಲ್ಲಿ “life coach “ ಆಗಿದ್ದರು. ಅವರ corporate droupadi ಮತ್ತು ಹಲವು motivational ಪುಸ್ತಕಗಳು amazon ನಲ್ಲಿ ಜನಪ್ರಿಯ ವಾಗಿದ್ದವು.

ಸುಮಾರು 9 ರಾಷ್ಟ್ರಗಳ ಮಹಿಳೆಯರನ್ನು ಒಳಗೊಂಡಿರುವ “ the guild of women achievers” ಎಂಬ NGO ಸ್ಥಾಪಿಸಿದ್ದರು. ಪ್ರತಿ ವರ್ಷ ಅಮೆರಿಕಾದ ನ್ಯೂಜೆರ್ಸಿ  ಸಮೀಪದ ಆಶ್ರಮದಲ್ಲಿ ಆಧ್ಯಾತ್ಮಿಕ ಶಿಬಿರದಲ್ಲಿ ಭಾಗವಹಿಸುತ್ತಿದ್ದರು.  ಅವರು ಮುಂಬೈನ ಕಿಶನ್ ಚಂದ್ ಚೆಲ್ಲಾರಾಮ್ ಕಾಲೇಜಿನಲ್ಲಿ ಪತ್ರಿಕೋದ್ಯಮದ ಪ್ರಾಧ್ಯಾಪಕರಾಗಿದ್ದರು. ಜತೆಗೆ ರಾಜೀವ ಗಾಂಧಿ ಕುಟುಂಬದ ಸಮೀಪವರ್ತಿಯಾಗಿದ್ದರು.

ಅವರು ಪುತ್ರರಾದ, ಅಂಗಾಂಗ ದಾನದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಅಭಿಯಾನದಲ್ಲಿ ತೊಡಗಿರುವ ಅನಿಲ್ ಶ್ರೀವತ್ಸ ಮತ್ತು ಪ್ರಸಿದ್ಧ ನ್ಯೂರೋ ಸರ್ಜನ್  ಅರ್ಜುನ್ ಶ್ರೀವತ್ಸ ಅವರನ್ನು ಅಗಲಿದ್ದಾರೆ.

-ಸಿ.ರುದ್ರಪ್ಪ, ಹಿರಿಯ ಪತ್ರಕರ್ತರು, ಬೆಂಗಳೂರು.

key words: senior journalist, Chhaya Srivatsa , is no more, bangalore

Multi-talented senior journalist Chhaya Srivatsa is no more.

The post ಬಹುಮುಖ ಪ್ರತಿಭೆಯ ಹಿರಿಯ ಪತ್ರಕರ್ತೆ ಛಾಯಾ ಶ್ರೀವತ್ಸ ಇನ್ನಿಲ್ಲ.. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಯಕತ್ವ ಬದಲಾವಣೆ ವಿಚಾರ: ಹೈಕಮಾಡ್ ನಿರ್ಧಾರಕ್ಕೆ ನಾನು ಡಿಕೆಶಿ ಬದ್ಧ- ಸಿಎಂ ಸಿದ್ದರಾಮಯ್ಯ

ನವದೆಹಲಿ,ಜುಲೈ,10,2025 (www.justkannada.in): ಅಧಿಕಾರ ಹಂಚಿಕೆ ಬಗ್ಗೆ ಯಾವ ಚರ್ಚೆ ಆಗಿಲ್ಲ.  ಏನೇ...

ಡಬಲ್ ಮರ್ಡರ್: ತಮ್ಮನಿಂದಲೇ ಅಣ್ಣ ಮತ್ತು ತಂದೆಯ ಹತ್ಯೆ

ಹಾಸನ ,ಜುಲೈ,10,2025 (www.justkannada.in):  ವ್ಯಕ್ತಿಯೊಬ್ಬ ಮಚ್ಚಿನಿಂದ ಕೊಚ್ಚಿ ತನ್ನ ತಂದೆ ಮತ್ತು...

ಪುತ್ರ ಆತ್ಮಹತ್ಯೆಗೆ ಶರಣು: ವಿಚಾರ ತಿಳಿದು ತಂದೆ ಹೃದಯಾಘಾತದಿಂದ ಸಾವು

ಯಾದಗಿರಿ,ಜುಲೈ,10,2025 (www.justkannada.in):  ಪುತ್ರ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಚಾರ ತಿಳಿದು ತಂದೆಯೂ...

JDS ತೊರೆದು ಕಾಂಗ್ರೆಸ್ ಸೇರ್ತಾರಾ ಶಾಸಕ ಜಿ.ಟಿ ದೇವೇಗೌಡ..?  ಈ ಬಗ್ಗೆ ಸ್ವತಃ ಅವರ ಪ್ರತಿಕ್ರಿಯೆ ಹೀಗಿತ್ತು..!

ಮೈಸೂರು, ಜುಲೈ,9,2025 (www.justkannada.in):  ನಾನು ಜೆಡಿಎಸ್ ನಲ್ಲಿ ಇರಬೇಕಾ ಬೇಡವಾ?  ಬಿಜೆಪಿಗೆ...