ಮೈಸೂರು,ಜೂನ್,4,2025 (www.justkannda.in): ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಅಕ್ರಮವೆಸಗಲಾಗಿದೆ ಎಂದು ಬಿಜೆಪಿಯು ಮಾಡಿರುವ ಕಿಕ್ ಬ್ಯಾಕ್ ಆರೋಪಕ್ಕೆ ಇಂದನ ಸಚಿವ ಕೆ.ಜೆ ಜಾರ್ಜ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಚಿವ ಕೆ.ಜೆ ಜಾರ್ಜ್, ಬಿಜೆಪಿಯವರಿಗೆ ಬ್ಯಾಕೂ ಇಲ್ಲ ಕಿಕ್ಕೂ ಇಲ್ಲ. ಅವರು ಮಾಡುವುದು ಆರೋಪ ನಿರಾಧಾರ. ಸಾಕ್ಷಿಗಳು ಇದ್ದರೆ ಸಾಬೀತು ಮಾಡಲಿ. ಡಿ.ಕೆ ರವಿ ಸಾವು, ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೂ ನನ್ನ ಮೇಲೆ ಆರೋಪ ಮಾಡಿದ್ದರು. ಸಿಬಿಐನವರೂ ನನ್ನನ್ನ ಕರೆಸಲೇ ಇಲ್ಲ.ಇದೇ ರೀತಿ ಬಿಜೆಪಿಯವರು ಸ್ಮಾರ್ಟ್ ಮೀಟರ್ ವಿಚಾರದಲ್ಲೂ ನಿರಾಧಾರ ಆರೋಪ ಮಾಡುತಿದ್ದಾರೆ. ಬೇಕಿದ್ದರೆ ಕೋರ್ಟ್ ಗೆ ಹೋಗಲಿ. ನಾನೇನು ಟಾರ್ಗೆಟ್ ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷವೇ ಅವರ ಟಾರ್ಗೆಟ್. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಉತ್ತಮವಾಗಿ ನಡೆಯುತ್ತಿರುವ ಸರ್ಕಾರದ ಬಗ್ಗೆ ಊಹಿಸಲಾಗದೆ ಈ ರೀತಿ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಎಂದರು.
ಸಿಎಂ ಬದಲಾವಣೆ : ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಸಚಿವ ಕೆಜೆ ಜಾರ್ಜ್
ನವೆಂಬರ್ ನಲ್ಲಿ ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆಜೆ ಜಾರ್ಜ್, ಸಿಎಂ 5 ವರ್ಷ ಆದರೂ ಇರಬಹುದು 10 ವರ್ಷ ಆದರೂ ಇರಬಹುದು. ಎಲ್ಲವೂ ಹೈ ಕಮಾಂಡ್ ಗೆ ಬಿಟ್ಟಿದ್ದು. ನವೆಂಬರ್ ನಲ್ಲಿ ಬದಲಾವಣೆ ಆಗುತ್ತೆ ಅಂತ ಮಾಧ್ಯಮದವರು ಕೇಳುತ್ತಿದ್ದೀರಾ. ಅದಕ್ಕಾಗಿ ಹೇಳುತ್ತಿದ್ದೇನೆ. ಎಲ್ಲವೂ ಹೈ ಕಮಾಂಡ್ ತೀರ್ಮಾನ. ಸದ್ಯಕ್ಕೆ ಶಾಸಕರ, ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯ ಪರವಿದೆ. ನೀವು ನನ್ನ ಬಾಯಿಯಲ್ಲಿ ಬದಲಾವಣೆ ಮಾತು ಹೇಳಿಸಲು ಪ್ರಯತ್ನ ಮಾಡುತ್ತಿದ್ದೀರಾ. ಬದಲಾವಣೆ ಅಗತ್ತೋ ಇಲ್ವೋ ಅದೆಲ್ಲ ನನಗೆ ಗೊತ್ತಿಲ್ಲ. ನವೆಂಬರ್ ನಲ್ಲಿ ಸಿಎಂ ಬದಲಾವಣೆ ಆದರೆ ಆವಾಗಲೇ ಉತ್ತರ ಕೊಡುತ್ತೇನೆ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.
ಸಚಿವ ಜಾರ್ಜ್ ಸಾಫ್ಟ್ ವ್ಯಕ್ತಿ ಎಂದು ಬಿಜೆಪಿ ಟಾರ್ಗೆಟ್ ಮಾಡುತ್ತಿದೆಯಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಖಡಕ್ ಪ್ರತಿಕ್ರಿಯೆ ನೀಡಿದ ಸಚಿವ ಜಾರ್ಜ್, ನಾನೇನು ಸಾಫ್ಟ್ ಅಲ್ಲ ಸಾಫ್ಟ್ ಆಗಿದಿದ್ರೆ ಯ್ಯೂತ್ ಕಾಂಗ್ರೆಸ್ ಅಧ್ಯಕ್ಷ, ಗೃಹಮಂತ್ರಿ ಸೇರಿದಂತೆ ಅನೇಕ ಹುದ್ದೆಗಳನ್ನು ಸಿಗುತ್ತಿರಲಿಲ್ಲ ಎಂದರು.
Key words: BJP, Smart meter, no back , no kick, Minister, K.J. George
The post ಬಿಜೆಪಿಯವರಿಗೆ ಬ್ಯಾಕೂ ಇಲ್ಲ ಕಿಕ್ಕೂ ಇಲ್ಲ- ಸಚಿವ ಕೆ.ಜೆ ಜಾರ್ಜ್ ತಿರುಗೇಟು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.