ಬೆಳಗಾವಿ,ಮಾರ್ಚ್,15,2025 (www.justkannada.in): ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಮಂಗೇಶ್ ಪವಾರ ಹಾಗೂ ಉಪಮೇಯರ್ ಆಗಿ ವಾಣಿ ವಿಲಾಸ ಜೋಶಿ ಆಯ್ಕೆಯಾದರು.
ಚುನಾವಣಾಧಿಕಾರಿ ಕೈ ಎತ್ತಿವ ಮೂಲಕ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಅವಕಾಶ ನೀಡಿದ್ದರು. ಮಂಗೇಶ್ ಪರವಾಗಿ 40 ಮತಗಳು ಹಾಗೂ ವಿರುದ್ಧವಾಗಿ 5 ಮತಗಳು ಹಾಗೂ ವಾಣಿ ಪರವಾಗಿ 40 ಮತಗಳು ಹಾಗೂ ವಿರುದ್ಧವಾಗಿ 19ಮತಗಳು ಬಂದಿದ್ದವು.
ಮರಾಠಿಗರಾದ ಮಂಗೇಶ 41ನೇ ವಾರ್ಡಿನ ಸದಸ್ಯ, ಕನ್ನಡತಿಯಾದ ವಾಣಿ ಅವರು 43ನೇ ವಾರ್ಡಿನ ಸದಸ್ಯೆಯಾಗಿದ್ದಾರೆ. ಈ ಮೂಲಕ 40 ಸದಸ್ಯರನ್ನು ಹೊಂದಿರುವ ಬಿಜೆಪಿ ಮತ್ತೊಮ್ಮೆ ಪಾಲಿಕೆಯ ಚುಕ್ಕಾಣಿ ಹಿಡಿಯಿತು.
Key words: Belgaum Municipal Corporation, Mayor, Election
The post ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಮಂಗೇಶ್ ಉಪಮೇಯರ್ ಆಗಿ ವಾಣಿ ವಿಲಾಸ ಜೋಶಿ ಆಯ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.