ಬೆಂಗಳೂರು,ಜುಲೈ,2,2025 (www.justkannada.in): ಲಾಟರಿ ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಪಕ್ಷದ ಶಾಸಕರೇ ನಿಮ್ಮ ಸರ್ಕಾರಕ್ಕೆ ಛೀ..ಥೂ ಎಂದು ಉಗಿಯುತ್ತಿದ್ದಾರೆ. ಇನ್ನಾದರೂ ಈ ಭಂಡ ಬಾಳು ಸಾಕು ಮಾಡಿ. ರಾಜೀನಾಮೆ ಕೊಟ್ಟು ಈ ನಾಟಕಕ್ಕೆ ತೆರೆ ಎಳೆಯಿರಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಟ್ವೀಟ್ ಮಾಡಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿರುವ ಆರ್.ಅಶೋಕ್, ಲಾಟರಿ ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಪಕ್ಷದ ಶಾಸಕರೇ ನಿಮ್ಮ ಸರ್ಕಾರಕ್ಕೆ ಛೀ…ಥೂ ಎಂದು ಉಗಿಯುತ್ತಿದ್ದಾರೆ. ಹೈಕಮಾಂಡ್ ಏಜೆಂಟ್ ರಣದೀಪ್ ಸುರ್ಜೇವಾಲ ಅವರಿಗೆ ಒಂದೆರಡು ಸೂಟ್ ಕೇಸ್ ಕೊಟ್ಟು ಸುಮ್ಮನಾಗಿಸಬಹುದು. ಹೈಕಮಾಂಡ್ ಗೆ ಭರಪೂರ ಕಪ್ಪ ಕಾಣಿಕೆ ಕೊಟ್ಟು ಬುಟ್ಟಿಗೆ ಹಾಕಿಕೊಳ್ಳಬಹುದು. ಶಾಸಕರಿಗೆ ಹೆದರಿಸಿ, ಬೆದರಿಸಿ ಅವರ ಬಾಯಿ ಮುಚ್ಚಿಸಬಹುದು. ಆದರೆ ಜನಸಾಮಾನ್ಯರ ಬಾಯಿ ಹೇಗೆ ಮುಚ್ಚಿಸುತ್ತೀರಿ?
ಇನ್ನಾದರೂ ಈ ಭಂಡ ಬಾಳು ಸಾಕು ಮಾಡಿ. ರಾಜೀನಾಮೆ ಕೊಟ್ಟು ಈ ನಾಟಕಕ್ಕೆ ತೆರೆ ಎಳೆಯಿರಿ ಎಂದು ಟಾಂಗ್ ಕೊಟ್ಟಿದ್ದಾರೆ.
ಹಾಗೆಯೇ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದವೂ ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿರುವ ಆರ್.ಅಶೋಕ್, ಮಗು ಚಿವುಟೋದು ಅವರೇ ತೊಟ್ಟಿಲು ತೂಗೋದು ಅವರೇ.. ತುಂಬಾ ಚೆನ್ನಾಗಿದೆ ಡಿಸಿಎಂ ಡಿಕೆ ಶಿವಕುಮಾರ್ ಅವರೇ ನಿಮ್ಮ ನಾಟಕ!
ಮಾಧ್ಯಮಗಳ ಮುಂದೆ ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶನದ ನಾಟಕ, ತೆರೆಮರೆಯಲ್ಲಿ ಬೆಂಬಲಿಗರ ಮೂಲಕ ಬೆನ್ನಿಗೆ ಚೂರಿ ಇರಿತ. ಒಟ್ಟಿನಲ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ, ಸಿದ್ದರಾಮಯ್ಯ ಹಾಗು ಡಿ.ಕೆ. ಶಿವಕುಮಾರ್ ಅವರ ಜಗಳದಲ್ಲಿ ಕರ್ನಾಟಕ ಬಡವಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.
Key words: CM Siddaramaiah, DCM, DK Shivakumar, drama, R. Ashok
The post ಭಂಡ ಬಾಳು ಸಾಕು: ರಾಜೀನಾಮೆ ಕೊಟ್ಟು ನಾಟಕಕ್ಕೆ ತೆರೆ ಎಳೆಯಿರಿ – ಸಿಎಂ ವಿರುದ್ದ ಆರ್.ಅಶೋಕ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.