14
July, 2025

A News 365Times Venture

14
Monday
July, 2025

A News 365Times Venture

ಭಾರತ-ಪಾಕಿಸ್ತಾನ ಉದ್ವಿಗ್ನತೆ:  ಹೈದರಾಬಾದ್ ನ “ ಕರಾಚಿ ಬೇಕರಿ” ಗೆ ಸಂಚಕಾರ .!

Date:

ನವದೆಹಲಿ, ಮೇ.೦೮,೨೦೨೫: ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ಸಂಘಟನೆಗಳ ಶಿಬಿರಗಳನ್ನು ಭಾರತೀಯ ಸಶಸ್ತ್ರ ಪಡೆಗಳು ಹೊಡೆದುರುಳಿಸಿದ ಒಂದು ದಿನದ ನಂತರ, ತೆಲಂಗಾಣದ ವಿವಿಧ ನಗರಗಳಲ್ಲಿನ ಕರಾಚಿ ಬೇಕರಿಯನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು.

‘ಕರಾಚಿ’ ಪಾಕಿಸ್ತಾನದ ಪ್ರಮುಖ ನಗರವಾಗಿದೆ ಮತ್ತು ಭಾರತದಲ್ಲಿನ ವ್ಯವಹಾರಗಳು ಪಾಕಿಸ್ತಾನದ ನಗರಗಳಿಗೆ ಸಂಬಂಧಿಸಿದ ಹೆಸರುಗಳನ್ನು ಹೊಂದಬಾರದು ಎಂದು ಒತ್ತಾಯಿಸಿ ಹಲವಾರು ಕಾರ್ಯಕರ್ತ ಗುಂಪುಗಳು ಹೆಸರು ಬದಲಾವಣೆಗೆ ಆಗ್ರಹಿಸಿವೆ.

ಈ ಪ್ರತಿಭಟನೆಗೆ ಬೆದರಿದ ಬೇಗಂಪೇಟೆ, ಮೊಝಾಮ್ ಜಾಹಿ ಮಾರುಕಟ್ಟೆ ಮತ್ತು ಇತರ ಸ್ಥಳಗಳಲ್ಲಿನ ಕರಾಚಿ ಬೇಕರಿ ಮಳಿಗೆಗಳ ಮಾಲೀಕರು ಬುಧವಾರ ತಮ್ಮ ಅಂಗಡಿ ನಾಮಫಲಕಗಳ ಮೇಲೆ ತ್ರಿವರ್ಣ ಧ್ವಜ ಪ್ರದರ್ಶಿಸಿದವು.

ಕರಾಚಿ ಬೇಕರಿಯ ಮಾಲೀಕ ರಾಜೇಶ್ ಮತ್ತು ಹರೀಶ್ ರಾಮ್ನಾನಿ ಪಿಟಿಐ ಜೊತೆ ಮಾತನಾಡಿ, ಕರಾಚಿ ಬೇಕರಿಯನ್ನು 1953 ರಲ್ಲಿ ಹೈದರಾಬಾದ್ನಲ್ಲಿ ಖಾನ್ಚಂದ್ ರಾಮ್ನಾನಿ ಸ್ಥಾಪಿಸಿದರು. 73 ವರ್ಷಗಳು ಕಳೆದಿವೆ . ಭಾರತ-ಪಾಕ್‌ ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದ ಖಾನ್ಚಂದ್ ರಾಮ್ನಾನಿ ಅವರು 1953 ರಲ್ಲಿ ಹೈದರಾಬಾದ್ನಲ್ಲಿ ಕರಾಚಿ ಬೇಕರಿಯನ್ನು ಸ್ಥಾಪಿಸಿದರು.  ನಮ್ಮ ಅಜ್ಜ ದೇಶ ವಿಭಜನೆಯ ನಂತರ ಭಾರತಕ್ಕೆ ಬಂದಿದ್ದರಿಂದ ಬೇಕರಿಗೆ” ಕರಾಚಿ” ಎಂದು ಹೆಸರಿಟ್ಟರು. ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಮತ್ತು ಆಡಳಿತದ ಹಿರಿಯ ಅಧಿಕಾರಿಗಳನ್ನು ಬೇಕರಿ ಹೆಸರಿನಲ್ಲಿ ಯಾವುದೇ ಬದಲಾವಣೆಗೆ ಒತ್ತಾಯಿಸುವ ಬೇಡಿಕೆ ಬೆಂಬಲಿಸದಂತೆ ನಾವು ವಿನಂತಿಸುತ್ತೇವೆ ಎಂದರು.

ನಗರದಾದ್ಯಂತ ಬೇಕರಿಯ ಮಳಿಗೆಗಳಲ್ಲಿ ಜನರು ತ್ರಿವರ್ಣ ಧ್ವಜವನ್ನು ಹಾಕುತ್ತಿದ್ದಾರೆ. ನಾವು ಭಾರತೀಯ ಬ್ರಾಂಡ್ ಆಗಿರುವುದರಿಂದ ದಯವಿಟ್ಟು ನಮ್ಮನ್ನು ಬೆಂಬಲಿಸಿ. ಇದು ಪಾಕಿಸ್ತಾನಿ ಬ್ರಾಂಡ್ ಅಲ್ಲ ಎಂದು ಸ್ಪಷ್ಡಪಡಿಸಿದರು.

ಸ್ಥಳೀಯರಿಂದ ಬೆಂಬಲ:
ಏತನ್ಮಧ್ಯೆ, ಸ್ಥಳೀಯ ಜನರು ಬೇಕರಿ ಮಳಿಗೆಗಳಿಗೆ ಬೆಂಬಲ ನೀಡಿದ್ದಾರೆ. “ಕರಾಚಿ ಭಾರತದ ಭಾಗವಾಗಿತ್ತು ಮತ್ತು ಮಾಲೀಕರು ಕರಾಚಿಯಿಂದ ವಲಸೆ ಬಂದ ಸಿಂಧಿ ಹಿಂದೂ, ಅದಕ್ಕಾಗಿಯೇ ಅವರು ಈ ಹೆಸರನ್ನು ಇಟ್ಟಿದ್ದಾರೆ.  ಆದ್ದರಿಂದ “ಅವರನ್ನು ಬಿಡಿ. ಅದು ಬೇಕರಿಯ ಹೆಸರು ಮಾತ್ರ.” ಎಂದು ಬೆಂಬಲ ಸೂಚಿಸಿದರು.

key words: India-Pakistan tensions, Hyderabad, Karachi Bakery, in jeopardy

vtu

SUMMARY: 

India-Pakistan tensions: Hyderabad’s Karachi Bakery in jeopardy. Several activist groups have demanded a name change, demanding that ‘Karachi’ is a major city in Pakistan and businesses in India should not have names related to Pakistani cities.

The post ಭಾರತ-ಪಾಕಿಸ್ತಾನ ಉದ್ವಿಗ್ನತೆ:  ಹೈದರಾಬಾದ್ ನ “ ಕರಾಚಿ ಬೇಕರಿ” ಗೆ ಸಂಚಕಾರ .! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜು.19 ರಂದು ಮೈಸೂರಿನಲ್ಲಿ ಬೃಹತ್ ಸಮಾರಂಭ: ಸಕಲ ಸಿದ್ದತೆಗೆ ಸಚಿವ ಹೆಚ್.ಸಿ.ಮಹದೇವಪ್ಪ ಸೂಚನೆ

ಮೈಸೂರು,ಜುಲೈ,12,2025 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜುಲೈ19 ರಂದು ಮಹಾರಾಜ...

ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದು: ಸೈನ್ಯ ,ಅಂತರಿಕ್ಷದಲ್ಲೂ ಕೆಲಸ ಪ್ರಗತಿಯ ಪ್ರತೀಕ: ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು ಜುಲೈ,13,2025 (www.justkannada.in):  ಶೇ100 ರಷ್ಟು ಅಂಕಗಳನ್ನು ಪಡೆಯುವುದರಲ್ಲಿ ಹೆಣ್ಣುಮಕ್ಕಳೇ ಮುಂದಿದ್ದು,...

ಸರ್ಕಾರದಲ್ಲಿ ಮೋಡ ಕವಿದ ವಾತಾವರಣ: ಯಾವಾಗ ಗುಡುಗು ಸಿಡಿಲು ಬರುತ್ತೋ ಗೊತ್ತಿಲ್ಲ-ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ,12,2025 (www.justkannada.in): ಸರ್ಕಾರದಲ್ಲಿ ಒಂದು ರೀತಿಯ ಮೋಡ ಕವಿದ ವಾತಾವರಣವಿದೆ ....

ಬೀದಿನಾಯಿಗಳಿಗೆ ಬಿರಿಯಾನಿ: ಲೂಟಿ ಮಾಡುವ ಉದ್ದೇಶ- ಆರ್‌.ಅಶೋಕ್

ಬೆಂಗಳೂರು, ಜುಲೈ 12,2025 (www.justkannada.in): ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ...