ಬೆಂಗಳೂರು,ಏಪ್ರಿಲ್,7,2025 (www.justkannada.in): ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಇಂದಿನಿಂದ ಜನಾಕ್ರೋಶ ಯಾತ್ರೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜನಾಂದೋಲನಕ್ಕೆ ಇಂದು ಮೈಸೂರಿನಲ್ಲಿ ಚಾಲನೆ ನೀಡುತ್ತಾರೆ. ಭ್ರಷ್ಠ ಸರ್ಕಾರದ ವಿರುದ್ದ ಜನಾಂದೋಲನ ಮಾಡುತ್ತೇವೆ. 4 ಹಂತದಲ್ಲಿ ಹೋರಾಟ ಮಾಡುತ್ತೇವೆ ಎಂದರು.
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಧಲ್ಲಿ ಪೊಲೀಸರು ಕ್ರೂರವಾಗಿ ನಡೆದು ಕೊಂಡಿದ್ದಾರೆ ಬೇಲ್ ಸಿಕ್ಕ ಮೇಲೂ ಪೊಲೀಸರು ವಿನಯ್ ಮನೆಗೆ ಹೋಗ್ತಾರೆ. ಈ ಪ್ರಕರಣದ ಇಲ್ಲಿಗೆ ಬಿಡಲ್ಲ ಹೋರಾಟ ಮಾಡುತ್ತೇವೆ. ಪೊಲೀಸರ ಕಿರುಕುಳದ ಬಗ್ಗೆ ವಿನಯ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಸರ್ಕಾರದ ದಬ್ಬಾಳಿಕೆ ಸಹಿಸಲ್ಲ. ಕಾಂಗ್ರೆಸ್ ಪುಢಾರಿಗಳಿಂದ ತೊಂದರೆ ಆದರೆ ಸಂಪರ್ಕ ಮಾಡಿ. ನಾವು ಏನು ಕಾನೂನು ಅನುಕೂಲ ಮಾಡಬೇಕೋ ಮಾಡುತ್ತೇವೆ ಎಂದರು.
Key words: Janakrosha Yatra, against, corrupt, Congress government, BY Vijayendra
The post ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಇಂದಿನಿಂದ ಜನಾಕ್ರೋಶ ಯಾತ್ರೆ- ಬಿವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.