ಬೆಂಗಳೂರು,ಮೇ,19,2025 (www.justkannada.in): ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಸಂತ್ರಸ್ತರಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್ , ಗ್ರೇಟರ್ ಬೆಂಗಳೂರು ಘೋಷಣೆಯಾದ ಒಂದೇ ದಿನಕ್ಕೆ ಬೆಂಗಳೂರು ಮುಳುಗಿದೆ. ಬೆಂಗಳೂರಿಗ 1ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಮನೆಗಳಿಗೆ ನೀರು ನುಗ್ಗಿದ್ದು ಸಂತ್ರಸ್ತರಿಗೆ 50 ಸಾವಿರ ರೂ. ಪರಿಹಾರ ಕೊಡಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಳೆ ಅವಾಂತರದ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಆರ್.ಅಶೋಕ್, ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ ಎಂದು ಕನ್ನಡಿಗರಿಗೆ ಬೀಚ್ ಬೆಂಗಳೂರು ನೀಡಿರುವ ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಮಂತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ತಮ್ಮ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹಾಲು ಒಕ್ಕೂಟ ಚುನಾವಣೆ ಉಸಾಬರಿ ಮುಗಿದಿದ್ದರೆ ದಯವಿಟ್ಟು ಸ್ವಲ್ಪ ಬೆಂಗಳೂರಿನ ಅವಸ್ಥೆ ಕಡೆ ಗಮನ ಹರಿಸಿ ಎಂದು ಕಿಡಿಕಾರಿದ್ದಾರೆ.
Key words: rain, Bangalore, 50 thousand. compensation . victims, R. Ashok
The post ಮಳೆಗೆ ಮನೆಗೆ ನೀರು ನುಗ್ಗಿ ಅವಾಂತರ: ಸಂತ್ರಸ್ತರಿಗೆ 50 ಸಾವಿರ ರೂ. ಪರಿಹಾರ ನೀಡಿ- ಆರ್.ಅಶೋಕ್ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.