17
April, 2026

A News 365Times Venture

17
Friday
April, 2026

A News 365Times Venture

ಮಹಿಳಾ ಮೀಸಲಾತಿಗೆ ಈ ಎರಡು ಮಸೂದೆ ಅನಿವಾರ್ಯ- ವಿಪಕ್ಷಗಳಿಗೆ ಕೇಂದ್ರ ಸಚಿವ ಅಮಿತ್ ಶಾ ಟಾಂಗ್

Date:

ನವದೆಹಲಿ,ಏಪ್ರಿಲ್,16,2026 (www.justkannada.in): ಲೋಕಸಭೆಯಲ್ಲಿ ಇಂದು ಮಂಡನೆಯಾಗಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ.

ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ, ಲೋಕಸಭೆ ಸಂವಿಧಾನ (131 ತಿದ್ದುಪಡಿ)2026 ವಿಧೇಯಕವನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್  ಮಂಡಿಸಿದರು. ಆದರೆ ಇದಕ್ಕೆ ಕಾಂಗ್ರೆಸ್ ನ ಕೆ.ಸಿ ವೇಣುಗೋಪಾಲ್ ಸೇರಿ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಆದರೆ ರಾಜಕೀಯದಲ್ಲಿ ಶೇ 33 ರಷ್ಟು ಮಹಿಳಾ ಮೀಸಲಾತಿಗೆ ಸಹಮತ ವ್ಯಕ್ತಪಡಿಸಿವೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹಿಳಾ ಮೀಸಲಾತಿಗೆ ಈ ಎರಡು ಮಸೂದೆ ಅನಿವಾರ್ಯ. ಅದಕ್ಕಾಗಿ ಈ ಎರಡು ಮಸೂದೆ ತಂದಿದ್ದೇವೆ   ಅವರು ವಿರೋಧ ಮಾಡಬೇಕು ಅಂತಾನೇ ಬಂದಿದ್ದಾರೆ.  ಅದಕ್ಕಾಗಿ ಎಲ್ಲದಕ್ಕೂ ಅವರು ವಿರೋಧ ಮಾಡುತ್ತಾರೆ.  ಸಂವಿಧಾನ ತಿದ್ದುಪಡಿ ಬಗ್ಗೆ ಪ್ರತ್ಯಕ ಚರ್ಚೆಯಾಗಬೇಕು. ಸಂವಿಧಾನ ತಿದ್ದುಪಡಿ ಬಳಿಕ ಉಳಿದ ಮಸೂದೆ ಜಾರಿಯಾಗಲಿದೆ ಎಂದು ಅಮಿತ್‍ ಶಾ ಹೇಳಿದರು.

Key words: Lokasabha,   two bills, essential, women’s reservation, Amit Shah

The post ಮಹಿಳಾ ಮೀಸಲಾತಿಗೆ ಈ ಎರಡು ಮಸೂದೆ ಅನಿವಾರ್ಯ- ವಿಪಕ್ಷಗಳಿಗೆ ಕೇಂದ್ರ ಸಚಿವ ಅಮಿತ್ ಶಾ ಟಾಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಉಪ್ಪು ತಿಂದವರು ನೀರು ಕುಡಿಯಲೇಬೇಕು- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಏಪ್ರಿಲ್,16,2026 (www.justkannada.in):  ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ...

ಮಹಿಳಾ ಮೀಸಲಾತಿ ಕಾನೂನು ಜಾರಿ ಕ್ರೆಡಿಟ್ ನಮಗೆ ಬೇಡ: ಕ್ಷೇತ್ರ ವಿಂಗಡಣೆಯಿಂದ ಅನ್ಯಾಯವಾಗಲ್ಲ- ಪ್ರಧಾನಿ ಮೋದಿ

ನವದೆಹಲಿ,ಏಪ್ರಿಲ್,16,2026 (www.justkannada.in):  ಮಹಿಳಾ ಮೀಸಲಾತಿ ಕಾನೂನು ಜಾರಿಯ ಕ್ರೆಡಿಟ್ ನಮಗೆ ಬೇಡ. ...

ಕುಡಿಯುವ ನೀರಿಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ- ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು, ಏಪ್ರಿಲ್, 16,2026 (www.justkannada.in):  ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ...

ರಕ್ಷಣೆ ಕೋರಿ ಮೈಸೂರು ಎಸ್ ಪಿ ಕಚೇರಿ ಮೆಟ್ಟಿಲೇರಿದ ಪ್ರೇಮಿಗಳು

ಮೈಸೂರು,ಏಪ್ರಿಲ್,16,2026 (www.justkannada.in):  “ನಮಗೆ ರಕ್ಷಣೆ ಕೊಡಿ” ಎಂದು ಮನವಿ ಮಾಡಿಕೊಂಡು ತುಮಕೂರು...