20
March, 2026

A News 365Times Venture

20
Friday
March, 2026

A News 365Times Venture

ಮಾರುತಿ ಓಮಿನಿ ಮರಕ್ಕೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

Date:

ಮೈಸೂರು,ಮೇ,28,2025 (www.justkannada.in): ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಓಮಿನಿ ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ  ನಡೆದಿದೆ.

ಸಾಲಿಗ್ರಾಮ ತಾಲೂಕಿನ ಬೈಲಾಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಖಲಿಂರೆಹಮಾನ್ (65)  ಶೇಖ್ ಅಬ್ದುಲ್ ಖಾದರ್ (45) ಮೃತಪಟ್ಟವರು. ಮೃತರು ಹಾಸನದ ಲಕ್ಷ್ಮಿಪುರಂ ಬಡಾವಣೆಯ ನಿವಾಸಿಗಳು.

ಕಾರಿನಲ್ಲಿ ಮತ್ತೊಬ್ಬ ವ್ಯಕ್ತಿ ಷೇಕ್ ಮುನೀರ್ ಅಹಮದ್‌ ಗೆ ಗಾಯವಾಗಿದ್ದು ಗಾಯಾಳುವನ್ನು ಅಸ್ವತ್ರೆಗೆ ದಾಖಲು ಮಾಡಲಾಗಿದೆ. ಬೈಲಾಪುರ ಗ್ರಾಮದ ಬಳಿ ಪೈಪ್ ಹಾಕಲು ತೆಗೆಯಲಾಗಿದ್ದ ಹಳ್ಳ ಮುಚ್ಚಿರಲಿಲ್ಲ. ಅದೇ ಸ್ಥಳದಲ್ಲಿ  ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.

ಹಾಸನದಿಂದ ಚುಂಚನಕಟ್ಟೆ ಕಡೆ ಕಾರು ಹೋಗುತ್ತಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಾಲಿಗ್ರಾಮ ಠಾಣಾ ಪೊಲೀಸರು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Maruti Omni, collided, tree, Two deaths, Mysore

The post ಮಾರುತಿ ಓಮಿನಿ ಮರಕ್ಕೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪಾರಂಪರಿಕ ಕಟ್ಟಡಗಳ ಎದುರು ಜಾಹೀರಾತು ಫಲಕ ಅಳವಡಿಕೆ ನಿಯಂತ್ರಿಸಿ: ಎಂಎಲ್‌ಸಿ ಕೆ.ಶಿವಕುಮಾರ್

  ಬೆಂಗಳೂರು, ಮಾ.೧೯: ಪಾರಂಪರಿಕ ಕಟ್ಟಡಗಳ ಎದುರು ಯಾವುದೇ ಕಾರಣಕ್ಕೂ ಜಾಹೀರಾತು ಫಲಕಗಳನ್ನು...

ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದಲೇ ಹೆಚ್ಚು ಗೌರವಧನ-ಕೇಂದ್ರಕ್ಕೆ ಕುಟುಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು,ಮಾರ್ಚ್,18,2026 (www.justkannada.in): ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ರಾಜ್ಯ ಸರ್ಕಾರದಿಂದಲೇ ಹೆಚ್ಚು ಗೌರವಧನ...

ಕೆಪಿಎಸ್ ಸಿಯಲ್ಲಿ ಅಕ್ರಮ : ವಿಧಾನಸಭೆಯಲ್ಲಿ ಉತ್ತರ ನೀಡಿದ ಸರ್ಕಾರ

ಬೆಂಗಳೂರು,ಮಾರ್ಚ್,18,2026 (www.justkannada.in): ಕೆಪಿಎಸ್ ಸಿ ನಡೆಸಿದ ಕೆಎಎಸ್ ನಲ್ಲಿ ಅಕ್ರಮ ಆರೋಪ...

ಉಪ ಚುನಾವಣೆ: ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ನಿರ್ಧಾರ- ಡಿಸಿಎಂ ಡಿಕೆ ಶಿವಕುಮಾರ್

ನವದೆಹಲಿ,ಮಾರ್ಚ್,18,2026 (www.justkannada.in):  ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ...