ಮೈಸೂರು,ಮೇ,28,2025 (www.justkannada.in): ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಓಮಿನಿ ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಸಾಲಿಗ್ರಾಮ ತಾಲೂಕಿನ ಬೈಲಾಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಖಲಿಂರೆಹಮಾನ್ (65) ಶೇಖ್ ಅಬ್ದುಲ್ ಖಾದರ್ (45) ಮೃತಪಟ್ಟವರು. ಮೃತರು ಹಾಸನದ ಲಕ್ಷ್ಮಿಪುರಂ ಬಡಾವಣೆಯ ನಿವಾಸಿಗಳು.
ಕಾರಿನಲ್ಲಿ ಮತ್ತೊಬ್ಬ ವ್ಯಕ್ತಿ ಷೇಕ್ ಮುನೀರ್ ಅಹಮದ್ ಗೆ ಗಾಯವಾಗಿದ್ದು ಗಾಯಾಳುವನ್ನು ಅಸ್ವತ್ರೆಗೆ ದಾಖಲು ಮಾಡಲಾಗಿದೆ. ಬೈಲಾಪುರ ಗ್ರಾಮದ ಬಳಿ ಪೈಪ್ ಹಾಕಲು ತೆಗೆಯಲಾಗಿದ್ದ ಹಳ್ಳ ಮುಚ್ಚಿರಲಿಲ್ಲ. ಅದೇ ಸ್ಥಳದಲ್ಲಿ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.
ಹಾಸನದಿಂದ ಚುಂಚನಕಟ್ಟೆ ಕಡೆ ಕಾರು ಹೋಗುತ್ತಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಾಲಿಗ್ರಾಮ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: Maruti Omni, collided, tree, Two deaths, Mysore
The post ಮಾರುತಿ ಓಮಿನಿ ಮರಕ್ಕೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.