27
June, 2026

A News 365Times Venture

27
Saturday
June, 2026

A News 365Times Venture

ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನ ಮಾತೃ ಇಲಾಖೆಗೆ ವಾಪಸ್ ಕರೆಸಿ- ಸಚಿವ ರಾಮಲಿಂಗರೆಡ್ಡಿ ಸೂಚನೆ

Date:

ಬೆಂಗಳೂರು,ಜೂನ್,26,2026 (www.justkannada.in): ಬೇರೆ ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್ ಗಳನ್ನು ವಾಪಸ್  ಮಾತೃ ಇಲಾಖೆಗೆ ವಾಪಸ್ ಕರೆಸಿ ಎಂದು  ಜಲಸಂಪನ್ಮೂಲ ಇಲಾಖೆ ಸಚಿವ ರಾಮಲಿಂಗರೆಡ್ಡಿ ಸೂಚನೆ ನೀಡಿದ್ದಾರೆ.

ಜಲಸಂಪನ್ಮೂಲ ಇಲಾಖೆ ಎಸಿಎಸ್ ಗೆ ಪತ್ರ ಬರೆದಿರುವ  ಸಚಿವ ರಾಮಲಿಂಗರೆಡ್ಡಿ, ಇಲಾಖೆಯಲ್ಲಿ ಇಂಜಿನಿಯರ್ ಗಳ ಕೊರತೆ ಹಿನ್ನೆಲೆಯಲ್ಲಿ ಬೇರೆ ಇಲಾಖೆಯಲ್ಲಿ ಕೆಲಸ ಮಾಡುವವರನ್ನ ವಾಪಸ್ ಮಾತೃ ಇಲಾಖೆಗೆ ಕರೆಸಿಕೊಳ್ಳುವಂತೆ  ಸೂಚನೆ ನೀಡಿದ್ದಾರೆ.

ಅಧೀಕ್ಷಕ ಅಭಿಯಂತರರು(SE), ಕಾರ್ಯಪಾಲಕ ಅಭಿಯಂತರರು(EE),  ಸಹಾಯಕ ಕಾರ್ಯಪಾಲಕ ಅಭಿಯಂತರು, ಸಹಾಯಕ ಅಭಿಯಂತರರು , ಕಿರಿಯ ಅಭಿಯಂತರರ ಹುದ್ದೆಗಳು ಖಾಲಿಯಿರುವುದರಿಂದ ಇಲಾಖೆಯಲ್ಲಿ ಅಭಿವೃದ್ದಿ ಕಾಮಗಾರಿ ಕುಂಠಿತವಾಗಿದೆ . ಮುಂದಿನ ದಿನಗಳಲ್ಲಿ ಜಲಸಂಪನ್ಮೂಲ ಇಲಾಖೆಯಿಂದ ಬೇರೆ ಬೇರೆ ಇಲಾಖೆಗೆ ನಿಯೋಜನೆ ಮಾಡಬಾರದು. ಅನ್ಯಪರ ಸೇವೆಯ ಮೇರೆಗ(ಒಒಡಿ) ವರ್ಗಾವಣೆ ಮಾಡದಂತೆ ಸೂಚಿಸಿದ್ದಾರೆ.

ಇಲಾಖೆ ಯೋಜನೆಗಳನ್ನ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು. ಒಒಡಿ ಮೇಲೆ 2 ವರ್ಷ ಅವಧಿ ಮೀರಿ ಬೇರೆ ಬೇರೆ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನ ಮಾತೃ ಇಲಾಖೆಗೆ ಕರೆಸಿ. ಜಲಸಂಪನ್ಮೂಲ ಇಲಾಖೆಗೆ ವಾಪಸ್ ಕರೆಸಿಕೊಳ್ಳಲು ಕ್ರಮ ಜರುಗಿಸಿ ಎಂದು  ಎಸಿಎಸ್ ಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.

Key words: officers, serving, other departments, Minister Ramalingareddy

The post ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನ ಮಾತೃ ಇಲಾಖೆಗೆ ವಾಪಸ್ ಕರೆಸಿ- ಸಚಿವ ರಾಮಲಿಂಗರೆಡ್ಡಿ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಈ ಬಾರಿ ಮೈಸೂರು ದಸರಾದಲ್ಲಿ ವಿಜೃಂಭಣೆಯಿಂದ ಕಂಬಳ ನಡೆಸುತ್ತೇವೆ- ಶಾಸಕ ಅಶೋಕ್ ರೈ

ಮೈಸೂರು,ಜೂನ್,26,2026 (www.justkannada.in):  ಮೈಸೂರು ದಸರಾದಲ್ಲಿ ಕಂಬಳ ಮಾಡಲು ಸಿಎಂ ಡಿಕೆ ಶಿವಕುಮಾರ್...

ಬಿಡದಿ ಟೌನ್ ಶಿಪ್ ಬಗ್ಗೆ ವರಿಷ್ಠರು ಪರಿಹಾರ ನೀಡ್ತಾರೆ- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಜೂನ್,26,2026 (www.justkannada.in): ಬಿಡದಿ ಟೌನ್ ಶಿಪ್ ಬಗ್ಗೆ ಗೊಂದಲ ಇರುವುದು ನಿಜ....

ಡಿಸಿಎಂ ಪರಮೇಶ್ವರ್ ತವರಲ್ಲಿ ಮಲ ಹೊರುವ ಪದ್ದತಿ ಜೀವಂತ

ತುಮಕೂರು,ಜೂನ್,26,2026 (www.justkannada.in):  ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಮಲಹೊರುವ...

ಅಯೋಧ್ಯೆ ರಾಮಮಂದಿರ ಕಾಣಿಕೆ ದುರುಪಯೋಗ: ಇಬ್ಬರು ಅರೆಸ್ಟ್

ನವದೆಹಲಿ,ಜೂನ್,26,2026 (www.justkannada.in): ಅಯೋಧ್ಯೆಯ ರಾಮಮಂದಿರದ ಕಾಣಿಕೆ ದುರುಪಯೋಗ ಪ್ರಕರಣದ ತನಿಖೆ ಚುರುಕುಗೊಂಡಿದ್ದು,...