12
August, 2026

A News 365Times Venture

12
Wednesday
August, 2026

A News 365Times Venture

ಮುಂಗಾರು ಮಳೆ ಮತ್ತಷ್ಟು ಚುರುಕು: 100 ಅಡಿ ಭರ್ತಿಯಾದ KRS ಜಲಾಶಯ

Date:

ಮಂಡ್ಯ,ಆಗಸ್ಟ್,3,2026 (www.justkannada.in):  ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಮತ್ತಷ್ಟು ಚುರುಕುಗೊಂಡಿದ್ದು ಈ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ 124  ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ  ಕೆಆರ್ ಎಸ್ ಜಲಾಶಯ  ಇದೀಗ 100 ಅಡಿ ಭರ್ತಿಯಾಗಿದೆ. ಕಳೆದ ಕೇವಲ ಮೂರು ದಿನದ ಅಂತರದಲ್ಲಿ ಕೆಆರ್ ಎಸ್ ಜಲಾಶೈದ ನೀರಿನ ಮಟ್ಟ 8 ಅಡಿ ಏರಿಕೆ ಕಂಡಿದೆ.

ಜಲಾಶಯಕ್ಕೆ ಅಪಾರ ಪ್ರಮಾಣದ ಒಳಹರಿವು ಬರುತ್ತಿದ್ದು    ಸದ್ಯ ಕೆಆರ್ ಎಸ್ ಡ್ಯಾಂಗೆ 32,048 ಕ್ಯೂಸೆಕ್ ನೀರು ಒಳಹರಿವು ಇದೆ. ಇದೇ ರೀತಿ ಮಳೆಯಾದರೇ  ಕೆಆರ್ ಎಸ್ ಜಲಾಶಯ ಭರ್ತಯಾಗಲಿದ್ದು ರೈತರು ಮುಖದಲ್ಲಿ ಮಂದಹಾಸ ಮೂಡಿದೆ.

ಇತ್ತೀಚೆಗೆ ತಮಿಳುನಾಡಿಗೆ 3500 ಕ್ಯೂಸೆಕ್ ಪ್ರತಿನಿತ್ಯ 15 ದಿನಗಳವರೆಗೆ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿತ್ತು.

Key words: Rains, KRS reservoir, filled , 100 feet

The post ಮುಂಗಾರು ಮಳೆ ಮತ್ತಷ್ಟು ಚುರುಕು: 100 ಅಡಿ ಭರ್ತಿಯಾದ KRS ಜಲಾಶಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅಕ್ರಮವಾಗಿ ಹುಲಿಯ ಉಗುರು, ಹಲ್ಲುಗಳ ಮಾರಾಟಕ್ಕೆ ಯತ್ನ: ಮೂವರ ಬಂಧನ

ಚಾಮರಾಜನಗರ,ಆಗಸ್ಟ್,12,2026 (www.justkannada.in): ಅಕ್ರಮವಾಗಿ ಹುಲಿಯ ಹಲ್ಲು ಮತ್ತು ಉಗುರುಗಳನ್ನು ಸಂಗ್ರಹಿಸಿ ಮಾರಾಟಕ್ಕೆ...

ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹ: ಮೈಸೂರಿನಲ್ಲಿ ರೈತರಿಂದ ಪ್ರತಿಟನೆ, ಕಾಡಾ ಕಚೇರಿಗೆ ಮುತ್ತಿಗೆ

ಮೈಸೂರು,ಆಗಸ್ಟ್,12,2026 (www.justkannada.in): ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಮೈಸೂರಿನಲ್ಲಿ ರೈತರು ಕಾಡಾ...

ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿಕೆಶಿ: ಯಾರಿಗೆ ಯಾವ ಯಾವ ಇಲಾಖೆ..?

ಬೆಂಗಳೂರು,ಆಗಸ್ಟ್,12,2026 (www.justkannada.in):  ನೂತನ ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಕೊನೆಗೂ ಖಾತೆ...

ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಆತ್ಮಕಥೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ, ಆಗಸ್ಟ್,12,2026 (www.justkannada.in):  ದೇಶದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ರಾಮ್‌...