ಬೆಂಗಳೂರು,ಜೂನ್,19,2025 (www.justkannada.in): ಮುಸ್ಲೀಮರಿಗೆ ವಸತಿ ಯೋಜನೆಯಲ್ಲೂ ಮೀಸಲಾತಿ ಹೆಚ್ಚಳಕ್ಕೆ ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು ಸರ್ಕಾರದ ಕ್ರಮಕ್ಕೆ ಬಿಜೆಪಿ ಎಂಎಲ್ ಸಿ.ಟಿ ರವಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿ.ಟಿ ರವಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಮತೀಯ ಆಧರಿತ ಮೀಸಲಾತಿ ನಿರಾಕರಿಸಿದ್ದರು. ರಾಜ್ಯ ಸರ್ಕಾರ ಕರ್ನಾಟಕದ ಜನರನ್ನ ಮಾತ್ರ ಕೆಣಕುತ್ತಿಲ್ಲ. ಕಾಂಗ್ರೆಸ್ ನವರು ಅಂಬೇಡ್ಕರ್ ಆಶಯಗಳನ್ನೂ ಕೆಣಕುತ್ತಿದ್ದಾರೆ. ಮನೆಯಿಲ್ಲದ ಬಡವರು ಎಲ್ಲಾ ಜಾತಿಯಲ್ಲೂ ಇದ್ದಾರೆ. ಜಾತಿ ಮತ ಆಧರಿಸಿ ಸಮಾಜ ಒಡೆಯುವುದು ಜಾತ್ಯಾತೀತತೆಯಾ..? ಎಂದು ಕಾಂಗ್ರೆಸ್ ಸರ್ಕಾರಕ್ಕೆ ತಿವಿದಿದ್ದಾರೆ.
ಕಾಂಗ್ರೆಸ್ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ತನ್ನ ನಿರ್ಧಾರ ವಾಪಸ್ ಪಡೆಯಲಿ. ನೀವು ಮತ ಬ್ಯಾಂಕ್ ಕಳೆದುಕೊಳ್ಳುತ್ತೀರಿ. ಬಿಜೆಪಿ ಹೆಚ್ಚು ಕಡೆ ಗೆಲ್ಲುತ್ತಿದೆ. ಅದಕ್ಕೆ ವೋಟ್ ಬ್ಯಾಂಕ್ ಮಾಡಿಕೊಳ್ಳಲು ಈ ರೀತಿ ಮೀಸಲಾತಿ ಹೆಚ್ಚಿಸಿದ್ದಾರೆ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
Key words: Reservation, Muslims, C.T. Ravi, strongly, criticizes
The post ಮುಸ್ಲೀಮರಿಗೆ ವಸತಿ ಮೀಸಲಾತಿ ಹೆಚ್ಚಳ: ಅಂಬೇಡ್ಕರ್ ಆಶಯಗಳನ್ನೂ ಕೆಣಕುತ್ತಿದ್ದಾರೆ- ಸಿ.ಟಿ ರವಿ ತೀವ್ರ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.