ಬೆಂಗಳೂರು,ಫೆಬ್ರವರಿ,10,2025 (www.justkannada.in) : ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡುವ ಮೂಲಕ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಶಾಕ್ ಕೊಟ್ಟಿದ್ದು ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ದ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಮೇಟ್ರೊ ದರ ಏರಿಕೆ ರಾಜ್ಯ ಸರ್ಕಾರ ಹೊಣೆಯಲ್ಲ. ದರ ನಿಗಿದಿ ಕಮಿಟಿ ಮಾಡಿದ್ದು ಕೇಂದ್ರ ಸರ್ಕಾರ. ಪ್ರಧಾನಿ ಮೋದಿ ಪರವಾಗಿ ಬಿಜೆಪಿಯವರು ಕ್ಷಮೆ ಕೇಳಲಿ. ಮೆಟ್ರೋ ಸ್ಟೇಷನ್ ಗೆ ಹೋಗಿ ಕ್ಷಮೆ ಕೇಳಲಿ. ನಾವೇ ಬಿಜೆಪಿಯವರಿಗೆ ಗುಲಾಬಿ ಹೂ ಕೊಡುತ್ತೇವೆ. ಮೋದಿ ಪರ ಗುಲಾಬಿ ಕೊಟ್ಟು ಕ್ಷಮೆ ಕೇಳಲ್ವಾ..? ಎಂದು ಕಿಡಿಕಾರಿದರು.
ಬಿಎಂಆರ್ ಸಿಎಲ್ ಮೆಟ್ರೋ ಪ್ರಯಾಣದ ಟಿಕೆಟ್ ದರವನ್ನ ಏರಿಕೆ ಮಾಡಿ ಕಳೆದ ಎರಡು ದಿನದ ಹಿಂದೆ ಅಧಿಕೃತ ಆದೇಶ ಹೊರಡಿಸಿತ್ತು.
Key words: Metro ticket, price hike, Minister, Priyank Kharge, Centre
The post ಮೆಟ್ರೋ ಟಿಕೆಟ್ ದರ ಏರಿಕೆ: ಕೇಂದ್ರದ ವಿರುದ್ದ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.