27
September, 2026

A News 365Times Venture

27
Sunday
September, 2026

A News 365Times Venture

ಮೇಜರ್ ಮಣಿವಣ್ಣನ್ ಅವರಿಗೆ ಚೀಪ್ ಆಫ್ ಡಿಫೆನ್ಸ್ ಸ್ಟಾಫ್ ಅವರಿಂದ ಪ್ರಶಂಸಾ ಪತ್ರ

Date:

 

ಬೆಂಗಳೂರು ಸೆ.೨೬,೨೦೨೬: ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಮೇಜರ್ ಮಣಿವಣ್ಣನ್, ಐಎಎಸ್ ಅವರಿಗೆ ಪ್ರಾದೇಶಿಕ ಸೇನೆ (Territorial Army)ಯಲ್ಲಿ ಸಲ್ಲಿಸಿದ ನಿರಂತರ ಸೇವೆ, ಕಠಿಣ ಪರಿಶ್ರಮ, ಸಮರ್ಪಣಾ ಭಾವ ಹಾಗೂ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಗುರುತಿಸಿ ಗೌರವ ಸಲ್ಲಿಸಲಾಗಿದೆ.

ಮೇಜರ್ ಮಣಿವಣ್ಣನ್ ಅವರು 2014ರ ಫೆಬ್ರವರಿ 8ರಂದು 106 ಇನ್ಫೆಂಟ್ರಿ ಬೆಟಾಲಿಯನ್ (ಟಿಎ) ಪ್ಯಾರಾ ಘಟಕಕ್ಕೆ ನಿಯೋಜನೆಗೊಂಡಿದ್ದರು. ಅಂದಿನಿಂದ ಪ್ರಾದೇಶಿಕ ಸೇನೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ಅತ್ಯಂತ ನಿಷ್ಠೆ ಹಾಗೂ ಸಮರ್ಪಣೆಯಿಂದ ನಿರ್ವಹಿಸುತ್ತಾ ಬಂದಿದ್ದಾರೆ.

ಅವರ ನಿರಂತರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸೇನೆಯೊಂದಿಗೆ ಉತ್ತಮ ಸಹಯೋಗವನ್ನು ಪರಿಗಣಿಸಿ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಎನ್. ಎಸ್. ರಾಜಾ ಸುಬ್ರಮಣಿ ಅವರಿಂದ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ. ಜನರಲ್ ಎನ್. ಎಸ್. ರಾಜಾ ಸುಬ್ರಮಣಿ ಅವರು ಪರಮ ವಿಶಿಷ್ಟ ಸೇವಾ ಮೆಡಲ್ (PVSM), ಅತಿ ವಿಶಿಷ್ಟ ಸೇವಾ ಮೆಡಲ್ (AVSM), ಸೇನಾ ಮೆಡಲ್ (SM) ಹಾಗೂ ವಿಶಿಷ್ಟ ಸೇವಾ ಮೆಡಲ್ (VSM) ಪುರಸ್ಕೃತರಾಗಿದ್ದಾರೆ.

ಇದೇ ವೇಳೆ, ಪ್ರಾದೇಶಿಕ ಸೇನೆಯಲ್ಲಿ ಮೇಜರ್ ಮಣಿವಣ್ಣನ್ ಅವರ ಕಠಿಣ ಪರಿಶ್ರಮ, ನಿರಂತರ ಸಹಯೋಗ, ಸಮರ್ಪಣಾ ಮನೋಭಾವ ಮತ್ತು ಶ್ರೇಷ್ಠ ಕಾರ್ಯನಿರ್ವಹಣೆಯನ್ನು ಗುರುತಿಸಿ, 2026ರ ಏಪ್ರಿಲ್‌ನಲ್ಲಿ ಗೌರವಾನ್ವಿತ GOC-in-C, ಸದರ್ನ್ ಕಮಾಂಡ್ ಅವರಿಂದಲೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿತ್ತು.

ಆಡಳಿತಾತ್ಮಕ ಜವಾಬ್ದಾರಿಗಳೊಂದಿಗೆ ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೇಜರ್ ಮಣಿವಣ್ಣನ್ ಅವರಿಗೆ ದೊರೆತಿರುವ ಈ ಎರಡು ಗೌರವಗಳು, ನಾಗರಿಕ ಆಡಳಿತ ಮತ್ತು ಸೇನಾ ಸೇವೆ ಎರಡರಲ್ಲೂ ಅವರು ತೋರಿಸಿರುವ ಬದ್ಧತೆ ಹಾಗೂ ಸೇವಾ ಮನೋಭಾವಕ್ಕೆ ದೊರೆತ ಮಾನ್ಯತೆಯಾಗಿದೆ.

KEY WORDS: Major Manivannan IAS, BDA Commissioner, Bengaluru Development Authority, Territorial Army, 106 Infantry Battalion, TA Para, Major Manivannan, Territorial Army, Karnataka IAS Officer, Territorial Army Service

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ:  ಚು.ಆಯೋಗ ವಿಸರ್ಜಿಸಿ, ಮುಖ್ಯಆಯುಕ್ತರನ್ನ ಬಂಧಿಸಿಬೇಕು-ಸಿಎಂ ಡಿಕೆಶಿ ಒತ್ತಾಯ

ಬೆಂಗಳೂರು ,ಸೆಪ್ಟಂಬರ್,26,2026 (www.justkannada.in): ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು. ಮುಖ್ಯ...

ಯುವಕರು ಸಂಘಟಿತರಾಗಿ, ನಾರಾಯಣ ಗುರುಗಳ ತತ್ವಗಳನ್ನು ಅಳವಡಿಸಿಕೊಳ್ಳಲಿ:  ಸಚಿವ ಮಧು ಬಂಗಾರಪ್ಪ ಕರೆ

ಮೈಸೂರು, ಸೆಪ್ಟೆಂಬರ್ 26,2026 (www.justkannada.in): ನಾರಾಯಣ ಗುರುಗಳು ಇಡೀ ಮನು ಕುಲಕ್ಕೆ...

ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಕರ್ನಾಟಕ ಪರ್ವದ ಆಶಯ: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಸೆಪ್ಟಂಬರ್,26,2026 (www.justkannada.in):  ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಕರ್ನಾಟಕ ಪರ್ವದ...

ಜೆಎಸ್‌ಎಸ್ ಕಾನೂನು ಕಾಲೇಜಿನ 18ನೇ ಪದವೀಧರ ದಿನಾಚರಣೆ: 152 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

  ಮೈಸೂರು, ಸೆ.26, 2026: ಕಾನೂನು ವೃತ್ತಿಯಲ್ಲಿ ನೈತಿಕತೆ, ಪ್ರಾಮಾಣಿಕತೆ ಮತ್ತು ಮಾನವೀಯತೆ...