15
July, 2025

A News 365Times Venture

15
Tuesday
July, 2025

A News 365Times Venture

ಮೇ 25 ರಂದು UPSC  ಪರೀಕ್ಷೆ: ಮೈಸೂರಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ

Date:

ಮೈಸೂರು,ಮೇ,23,2025 (www.justkannada.in): ಮೇ 25 ರಂದು ಕೇಂದ್ರ ಲೋಕ ಸೇವಾ ಆಯೋಗದ ವತಿಯಿಂದ  ಮೈಸೂರು ನಗರದ 13 ಪರೀಕ್ಷಾ ಕೇಂದ್ರಗಳಲ್ಲಿ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಮೈಸೂರು ನಗರದಲ್ಲಿ   ಒಟ್ಟು 4727 ಅಭ್ಯರ್ಥಿಗಳು  ಯುಪಿಎಸ್ ಸಿ ಪೂರ್ವಭಾವಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ.  ಈ  ಸಂಬಂಧ  ಯುಪಿಎಸ್ ಸಿ ವತಿಯಿಂದ ನೇಮಕವಾಗಿರುವ ವೀಕ್ಷಕ ಡಿ. ಬಿಸ್ವಾಸ್ ಅವರ ಉಪಸ್ಥಿತಿಯಲ್ಲಿ  ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ಪೂರ್ವಭಾವಿ ಸಭೆಯನ್ನು  ನಡೆಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.

ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಯುಪಿಎಸ್ ಸಿ ನಿರ್ದೇಶನದಂತೆ ಎಲ್ಲಾ ಅಗತ್ಯ ಕ್ರಮಗಳನ್ನು  ಕೈಗೊಳ್ಳುವಂತೆ, ಎಲ್ ಐಒ (Local Inspecting Officer)  ಅವರು ಪರೀಕ್ಷಾ ಕೇಂದ್ರದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಿ ಯುಪಿಎಸ್ ಸಿ ನಿಯಮಗಳಂತೆ ಪರೀಕ್ಷೆ ನಡೆಯುತ್ತಿರುವ ಬಗ್ಗೆ ವೀಕ್ಷಿಸಿ ವರದಿ ನೀಡುವಂತೆ ಸೂಚಿಸಿದರು.

ಪೊಲೀಸ್‌  ಇಲಾಖೆಗೆ ಬಂದೋಬಸ್ತ್‌ ವ್ಯವಸ್ಥೆ ನೋಡಿಕೊಳ್ಳಬೇಕು,  ಪರೀಕ್ಷಾ ಕೇಂದ್ರಗಳಿಗೆ ನಿರಂತರ  ವಿದ್ಯುತ್‌ ಸರಬರಾಜು ಮಾಡಲು ಚೆಸ್ಕಾಂ ರವರಿಗೆ  ಸೂಚಿಸಲಾಯಿತು.   ಮೈಸೂರು ಮಹಾನಗರ ಪಾಲಿಕೆಗೆ ಸ್ವಚ್ಛತೆ ಬಗ್ಗೆ ಗಮನಹರಿಸಲು, ಆರೋಗ್ಯ ಇಲಾಖೆ ಹಾಗೂ  ಅಗ್ನಿಶಾಮಕ ಇಲಾಖೆ ರವರಿಗೆ  ತುರ್ತು ಸಂದರ್ಭದಲ್ಲಿ  ಸೇವೆ ಒದಗಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಯಿತು. ಹಾಗೆಯೇ ಪರೀಕ್ಷೆಯನ್ನು  ಯಾವುದೇ ಲೋಪದೋಷವಿಲ್ಲದಂತೆ  ನಡೆಸಲು  ನಿರ್ದೇಶನ ನೀಡಲಾಯಿತು.

Key words: UPSC, Examination ,May 25, necessary, action ,Mysore

The post ಮೇ 25 ರಂದು UPSC  ಪರೀಕ್ಷೆ: ಮೈಸೂರಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

‘ವೈದ್ಯರನ್ನ ಬದಲಾಯಿಸಿ, ಇಲ್ಲಾಂದ್ರೆ ಆಸ್ಪತ್ರೆ ಮುಚ್ಚಿ’: ರೋಗಿಗಳ ಪ್ರತಿಭಟನೆ, ಆಕ್ರೋಶ

ಮೈಸೂರು,ಜುಲೈ,15,2025 (www.justkannada.in): ಮೈಸೂರಿನಲ್ಲಿ ವೈದ್ಯರೊಬ್ಬರ ವರ್ತನೆಯಿಂದ ಬೇಸತ್ತ ರೋಗಿಗಳು ವೈದ್ಯರ  ವಿರುದ್ಧವೇ...

ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ..? ಸರ್ಕಾರದ ವಿರುದ್ದ ಗುಡುಗಿದ ಬಿಜೆಪಿ ವಕ್ತಾರ

ಮೈಸೂರು,ಜುಲೈ,15,2025 (www.justkannada.in): ಜುಲೈ 19ಕ್ಕೆ ಮೈಸೂರಿನಲ್ಲಿ ಸಾಧನಾ ಸಮಾವೇಶಕ್ಕೆ ಮುಂದಾಗಿರುವ ರಾಜ್ಯ...

ರೈತರ ಜಮೀನು ಭೂ ಸ್ವಾಧೀನ ಕೈ ಬಿಟ್ಟ ಸರಕಾರ: ಸಿಎಂ ಘೋಷಣೆ.

ಬೆಂಗಳೂರು,ಜುಲೈ,15,2025 (www.justkannada.in): ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು  ದೇವನಹಳ್ಳಿ ತಾಲೂಕು...

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾಗಿ ಚರ್ಚಿಸಿದ ಸಂಸದ ಯದುವೀರ್‌

ಮೈಸೂರು, ಜುಲೈ, 14,2025 (www.justkannada.in):  ಕೇಂದ್ರ ಗೃಹ ಸಚಿವ ಅಮಿತ್‌ ಶಾ...