ಕೊಪ್ಪಳ,ಫೆಬ್ರವರಿ,8,2025 (www.justkannada.in): ಸಾಲ ವಸೂಲಾತಿ ಮಾಡುವ ಮೈಕ್ರೋ ಫೈನಾನ್ಸ್ ಗಳಿಂದ ಕಿರುಕುಳ ಹಲ್ಲೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಗೆ ಸಹಕಾರಿ ಕ್ಷೇತ್ರ ವಿಪಲವಾಗಿದ್ದೇ ಕಾರಣ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಮೈಕ್ರೊ ಪೈನಾನ್ಸ್ ನಿಂದ ದಿನನಿತ್ಯ ಕಿರುಕುಳ ನಡೆಯುತ್ತಿದೆ. ಮಹಿಳೆಯರನ್ನ ಕೂಡಿಹಾಕುವುದು. ಹಲ್ಲೆ ಮಾಡುವುದು ನಡೆದುತ್ತಿದೆ ಇದಕ್ಕೆಲ್ಲ ಸಹಕಾರಿ ಕ್ಷೇತ್ರ ವಿಫಲವಾಗಿದ್ದೇ ಕಾರಣ. ಸಹಕಾರ ಕ್ಷೇತ್ರ ಬಲವರ್ಧನೆಯಾಗಿದ್ದರೇ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ಚುನಾವಣೆ ನೋಡಿಕೊಂಡು ಸರ್ಕಾರಗಳು ಸಾಲಮನ್ನಾ ಮಾಡುತ್ತಾರೆ. ಆದರೆ ಸಾಲಮನ್ನಾ ಮಾಡಿದ ಹಣ ಸೊಸೈಟಿಗೆ ಮುಟ್ಟಿಸಬೇಕು ಆದರೆ ಅದು ಆಗುತ್ತಿಲ್ಲ. ವರ್ಷಗಳು ಕಳೆದರೂ ಸಾಲಮನ್ನಾ ಮಾಡಿದ ಹಣ ಸೊಸೈಟಿಗೆ ಮುಟ್ಟುತ್ತಿಲ್ಲ. ಹೀಗಾಗಿ ಸಹಕಾರಿ ಸಂಘಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.
Key words: Microfinance harassment, failure, cooperative sector, Minister, H.K. Patil
The post ಮೈಕ್ರೋ ಫೈನಾನ್ಸ್ ಕಿರುಕುಳ: ಸಹಕಾರಿ ಕ್ಷೇತ್ರ ವಿಫಲವಾಗಿದ್ದೇ ಕಾರಣ- ಸಚಿವ ಹೆಚ್.ಕೆ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.