ಮೈಸೂರು,ಮಾರ್ಚ್,5,2025 (www.justkannada.in): ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿರವನ್ನು ನೆಲಸಮ ಮಾಡಲಾಗಿದ್ದು, ಇದೀಗ ಈ ಎರಡು ಚಿತ್ರಮಂದಿರಗಳು ಇತಿಹಾಸದ ಪುಟ ಸೇರಿವೆ.
ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿರಗಳಲ್ಲಿ ಹಾಲಿವುಡ್, ಬಾಲಿವುಡ್ ಸೇರಿದಂತೆ ಕನ್ನಡದ ಹಲವಾರು ಜನಪ್ರಿಯ ಚಿತ್ರಗಳು ಪ್ರದರ್ಶನ ಕಂಡಿದ್ದವು. ಟೈಟಾನಿಕ್, ಜುರಾಸಿಕ್ ಪಾರ್ಕ್ ಸೇರಿದಂತೆ ಜಾಕಿಚಾನ್ ನಟನೆಯ ಬಹುತೇಕ ಜನಪ್ರಿಯ ಇಂಗ್ಲಿಷ್ ಸಿನಿಮಾಗಳು ಸಹ ಈ ಅವಳಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು.
ಆದರೆ ಕೋವಿಡ್ ಬಳಿಕ ಈ ಅವಳಿ ಚಿತ್ರಮಂದಿರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿದ್ದವು. ದಿನ ಕಳೆದಂತೆ ಬಂದ್ ಆಗಿದ್ದ ಅವಳಿ ಚಿತ್ರಮಂದಿರವನ್ನ ಇದೀಗ ನೆಲಸಮ ಮಾಡಲಾಗಿದೆ. ಮೈಸೂರಿನಲ್ಲಿ ಈಗಾಗಲೇ ರಣಜಿತ್, ಅಪೇರಾ, ಶಾಂತಲಾ, ತಿಬ್ಬಾದೇವಿ, ಗಣೇಶ, ರತ್ನ, ಒಲಂಪಿಯಾ ಚಿತ್ರಮಂದಿರಗಳು ನೆಲಸಮಗೊಂಡಿವೆ. ಇತ್ತೀಚೆಗೆ ಲಕ್ಷ್ಮಿ ಹಾಗೂ ಸರಸ್ವತಿ ಚಿತ್ರಮಂದಿರಗಳನ್ನೂ ನೆಲಸಮ ಮಾಡಲಾಗಿತ್ತು. ಅವುಗಳ ಸಾಲಿಗೆ ಇದೀಗ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರಮಂದಿಗಳು ಸೇರಿದ್ದು ವಿಪರ್ಯಾಸವೆನಿಸಿದೆ.
ಅವಳಿ ಚಿತ್ರಮಂದಿರ ಧರಾಶಾಹಿಯಾಗಿದ್ದನ್ನು ಕಣ್ಣಾರೆ ಕಂಡ ಸಿನಿ ರಸಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಮೈಸೂರಿನಲ್ಲೀಗ ಕೇವಲ ಬೆರಳೆಣಿಕೆಯಷ್ಟು ಚಿತ್ರಮಂದಿರಗಳು ಮಾತ್ರ ಇವೆ. ಅವುಗಳನ್ನಾದರೂ ಉಳಿಸಿಕೊಳ್ಳಬೇಕು ಎಂಬುದು ಸಿನಿಮಾ ಪ್ರೇಕ್ಷಕರ ಆಶಯವಾಗಿದೆ.
Key words: Sterling, Skyline, Theaters, history , Mysore
The post ಮೈಸೂರಿನಲ್ಲಿ ಇತಿಹಾಸದ ಪುಟ ಸೇರಿದ ಅವಳಿ ಚಿತ್ರಮಂದಿರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.